ಮೆಗಾಸ್ಟಾರ್ ಚಿರಂಜೀವಿ ಪುತ್ರ ವ್ಯಾಮೋಹ: ಮಗನ 'ಗೇಮ್ ಚೇಂಜರ್‌'ಗಾಗಿ 'ವಿಶ್ವಂಭರ' ರಿಲೀಸ್ ಮುಂದೂಡಿಕೆ!

First Published | Oct 14, 2024, 4:47 PM IST

ದಕ್ಷಿಣ ಭಾರತದ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮಗೆ ಪುತ್ರ ವ್ಯಾಮೋಹ ಎಷ್ಟಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈಗಾಗಲೇ ಚಿರಂಜೀವಿ ಅವರ ವಿಶ್ವಂಭರ ಸಿನಿಮಾ ರಿಲೀಸ್‌ಗೆ ಸಂಕ್ರಾಂತಿಗೆ ಡೇಟ್ ಫಿಕ್ಸ್ ಮಾಡಲಾಗಿತ್ತು. ಆದರೆ, ಮಗರ ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಸಂಕ್ರಾಂತಿ ರಿಲೀಸ್‌ ಮಾಡುವುದಾಗು ಹೇಳಿದ್ದಕ್ಕೆ ತಮ್ಮ ವಿಶ್ವಂಭರ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿಕೆ ಮಾಡಿದ್ದಾರೆ. ಇಲ್ಲಿದೆ ನೋಡಿ ವಿಶ್ವಂಭರ ರಿಲೀಸ್ ಡೇಟ್...

ಚಿರು, ವಿಶ್ವಂಭರ, ರಿಲೀಸ್ ಡೇಟ್

ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ‘ವಿಶ್ವಂಭರ’ ಚಿತ್ರ. ಭೋಳಾ ಶಂಕರ್ ಡಿಸಾಸ್ಟರ್ ನಂತರ ಚಿರು ಒಪ್ಪಿಕೊಂಡ ಕಥೆ ಇದು. ಫ್ಯಾನ್ಸ್ ಕೂಡ ಚಿರು ಹಿಟ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಟೀಸರ್ ನೋಡಿದ್ರೆ ಇಂಡಸ್ಟ್ರಿ ಹಿಟ್ ಪಕ್ಕಾ ಎನ್ನುವ ನಿರೀಕ್ಷೆಗಳಿವೆ. ಮೆಗಾಸ್ಟಾರ್ ಲುಕ್, ವಿಶುವಲ್ಸ್ ಅದ್ಭುತವಾಗಿದೆ ಅಂತ ಎಲ್ಲರೂ ಹೇಳ್ತಿದ್ದಾರೆ. ಚಿರು ನಂಬಿಕೆ ಉತ್ತಮವಾಗಿದೆ. ವಿಶ್ವಂಭರದಿಂದ ಚಿರು ಮತ್ತೆ ಗೆಲುವಿನ ಬಾವುಟ ಹಾರಿಸಲಿದ್ದಾರೆ. ಹಾಗಾಗಿ ರಿಲೀಸ್ ಯಾವಾಗ ಅಂತ ಎಲ್ಲರೂ ಕಾಯ್ತಿದ್ದಾರೆ.

ಚಿರು, ವಿಶ್ವಂಭರ, ರಿಲೀಸ್ ಡೇಟ್

ಯು.ವಿ.ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸುಮಾರು 200 ಕೋಟಿ ಬಜೆಟ್‌ನಲ್ಲಿ ವಿಕ್ರಮ್, ವಂಶಿ, ಪ್ರಮೋದ್ ನಿರ್ಮಿಸುತ್ತಿದ್ದಾರೆ. ಸಂಕ್ರಾಂತಿಗೆ ಜನವರಿ 10 ರಂದು ರಿಲೀಸ್ ಪ್ಲಾನ್ ಇತ್ತು. ಆದರೆ, ಅವರ ಪುತ್ರ ರಾಮ್ ಚರಣ್ ತೇಜ ಅವರ 'ಗೇಮ್ ಚೇಂಜರ್' ಸಿನಿಮಾ ಸಂಕ್ರಾಂತಿಗೆ ಬರುತ್ತಿರುವುದರಿಂದ ವಿಶ್ವಂಭರ ಮುಂದೂಡಲ್ಪಟ್ಟಿದೆ. ಮೊದಲು ಗೇಮ್ ಚೇಂಜರ್ ಡಿಸೆಂಬರ್‌ನಲ್ಲಿ ಬರಬೇಕಿತ್ತು. ಆದರೆ, ಈಗ ಸಂಕ್ರಾಂತಿಗೆ ಮುಂದೂಡಿಕೆ ಮಾಡಲಾಗುದೆ ಎಂದು ಇದರ ನಿರ್ಮಾಪಕ ದಿಲ್ ರಾಜು ಸ್ಪಷ್ಟನೆ ನೀಡಿದ್ದಾರೆ.

Tap to resize

ಚಿರು, ವಿಶ್ವಂಭರ ರಿಲೀಸ್ ಡೇಟ್

ದಿಲ್ ರಾಜು ಅವರು ಗೇಮ್ ಚೇಂಜರ್ ಮೊದಲು ಕ್ರಿಸ್‌ಮಸ್‌ಗೆ ರಿಲೀಸ್ ಮಾಡಬೇಕು ಎಂದುಕೊಂಡಿದ್ದೆವು. ಆದರೆ ವರ್ಲ್ಡ್ ವೈಡ್ ರಿಲೀಸ್‌ಗೆ ಸಂಕ್ರಾಂತಿ ಬೆಸ್ಟ್ ಅಂತ ಎಲ್ಲ ಡಿಸ್ಟ್ರಿಬ್ಯೂಟರ್ಸ್ ಅಭಿಪ್ರಾಯಪಟ್ಟರು. ಕೂಡಲೇ ಈ ವಿಷಯವನ್ನು ಚಿರಂಜೀವಿ ಹಾಗೂ ಯುವಿ ಕ್ರಿಯೇಷನ್ಸ್‌ಗೆ ತಿಳಿಸಿದ್ದಾರೆ.  ನಾವು ಮೂರು ವರ್ಷದಿಂದ ಗೇಮ್ ಚೇಂಜರ್ ಮಾಡ್ತಿದ್ದೀವಿ. ಆದರೆ, ವಿಶ್ವಂಭರ ಕೂಡ ಬಿಗ್ ಬಜೆಟ್ ಸಿನಿಮಾ. ಗೇಮ್ ಚೇಂಜರ್ ಅನ್ನು ಸಂಕ್ರಾಂತಿಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಚಿರು, ವಿಶ್ವಂಭರ, ರಿಲೀಸ್ ಡೇಟ್

ಇನ್ನು ಚಿರಂಜೀವಿ ಅವರ ಮುಂದೆ ಗೇಮ್ ಚೇಂಜರ್ ಸಿನಿಮಾ ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಮಾಡಿದ ಬಗ್ಗೆ ಹೇಳುತ್ತಿದ್ದಂತೆ, ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ವಿಶ್ವಂಭರ ಸಿನಿಮಾ ರಿಲೀಸ್ ಮುಂದೂಡುವುದಕ್ಕೆ  ಚಿರಂಜೀವಿ ಅವರು ಒಪ್ಪಿಕೊಂಡರು. ಗೇಮ್ ಚೇಂಜರ್ ಸಂಕ್ರಾಂತಿಗೆ ರಿಲೀಸ್ ಪಕ್ಕಾ ಆಗಿದೆ. ಆದರೆ, ವಿಶ್ವಂಭರ ಹೊಸ ಡೇಟ್ ಶೀಘ್ರದಲ್ಲೇ ಘೋಷಣೆ ಆಗಲಿದೆ. ವಿಶ್ವಂಭರ ಪೋಸ್ಟ್ ಪ್ರೊಡಕ್ಷನ್ ಕೂಡ ಪೂರ್ತಿಯಾಗಿದೆ. ಆದರೆ, ನನ್ನ ಸಿನಿಮಾಗಾಗಿ ಅವರು ಡೇಟ್ ಬಿಟ್ಟುಕೊಟ್ಟರು. ಚಿರು, ಯುವಿ ಕ್ರಿಯೇಷನ್ಸ್‌ಗೆ ಥ್ಯಾಂಕ್ಸ್ ಎಂದು ಹೇಳಿದ್ದಾರೆ.

ಚಿರು, ವಿಶ್ವಂಭರ, ರಿಲೀಸ್ ಡೇಟ್

ಗೇಮ್ ಚೇಂಜರ್ ಸಂಕ್ರಾಂತಿಗೆ ರಿಲೀಸ್ ಆಗಲಿದ್ದು,  ಅಭಿಮಾನಿಗಳಿಗೆ ಇಷ್ಟವಾಗುವಂತೆ ಸಿನಿಮಾ ಮಾಡಿದ್ದೀವಿ. ಎರಡು ಹಾಡುಗಳು ಸೂಪರ್ ಹಿಟ್ ಇವೆ. ಇನ್ನು ಮೂರು ಹಾಡುಗಳ  ಟೀಸರ್ ಅನ್ನು ಶೀಘ್ರವೇ ರಿಲೀಸ್ ಮಾಡ್ತೀವಿ ಎಂದು ವಿಶ್ವಂಭರ ನಿರ್ದೇಶಕ ವಶಿಷ್ಠ ಹೇಳಿದ್ದಾರೆ. ವಿಶ್ವಂಭರ ಸಂಕ್ರಾಂತಿಗೆ ರಿಲೀಸ್ ಪ್ಲಾನ್ ಇತ್ತು. ಆದರೆ ರಾಮ್ ಚರಣ್ ಗೇಮ್ ಚೇಂಜರ್ ಕೂಡ ಸಂಕ್ರಾಂತಿಗೆ ಬರ್ತಿತ್ತು. ಹಾಗಾಗಿ ಚಿರು ಡೇಟ್ ಬದಲಿಸಲು ನಿರ್ಧರಿಸಿದರು ಎಂದು ಹೇಳಿದರು. ವಿಶ್ವಂಭರ ರಿಲೀಸ್ ಯಾವಾಗ ಅನ್ನೋದು ಚರ್ಚೆಯಲ್ಲಿದೆ. ಮೇ 9, 2025ರಂದು ರಿಲೀಸ್ ಆಗಬಹುದು ಎಂಬ ನಿರೀಕ್ಷೆಯಿದೆ. ಕೀರವಾಣಿ ಸಂಗೀತ, ತ್ರಿಷಾ, ಆಶಿಕಾ, ಕುನಾಲ್ ಕಪೂರ್ ನಟಿಸಿದ್ದಾರೆ. 

Latest Videos

click me!