ಪ್ರೈವೆಟ್ ಜೆಟ್ ನಿಂದ ಹಿಡಿದು 200 ಕೋಟಿಯ ಮನೆಯವರೆಗೂ…. ಶಾರುಖ್ ಖಾನ್ ಬಳಿ ಇವೆ ಈ ದುಬಾರಿ ವಸ್ತುಗಳು

Published : Oct 24, 2025, 10:16 PM IST

ಶಾರುಖ್ ಖಾನ್ ಬಿಲಿಯನೇರ್ ಕ್ಲಬ್ ಸೇರಿದ್ದಾರೆ. ಅವರ ಒಟ್ಟು ನೆಟ್ ವರ್ತ್ $1.4 ಬಿಲಿಯನ್ ಆಗಿದ್ದು , ಇದೀಗ ವಿಶ್ವದ ಅತ್ಯಂತ ಶ್ರೀಮಂತ ನಟರಾಗಿದ್ದಾರೆ. ಶಾರುಖ್ ಖಾನ್ ಬಳಿ ಏನೆಲ್ಲಾ ದುಬಾರಿ ವಸ್ತುಗಳು ಇವೆ ಅನ್ನೋದನ್ನು ನೋಡೋಣ.

PREV
19
ವಿಶ್ವದ ಅತ್ಯಂತ ಶ್ರೀಮಂತ ನಟ

ಶಾರುಖ್ ಖಾನ್ ಹಲವು ವರ್ಷಗಳಿಂದ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ವಿಶ್ವದಾದ್ಯಂತ ಜನರು ಇಷ್ಟಪಡುವ ಕೆಲವೇ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರು ಇತ್ತೀಚೆಗೆ ವಿಶ್ವದ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ . ಕಿಂಗ್ ಖಾನ್ ಹಲವಾರು ದುಬಾರಿ ಆಸ್ತಿಗಳನ್ನು ಸಹ ಹೊಂದಿದ್ದಾರೆ. ಶಾರುಖ್ ಬಳಿ ಇರುವ ಅತ್ಯಂತ ದುಬಾರಿ ವಸ್ತುಗಳು, ಆಸ್ತಿಗಳು ಯಾವುವು ಅನ್ನೋದನ್ನು ನೋಡೋಣ.

29
ಕೋಲ್ಕತ್ತಾ ನೈಟ್ ರೈಡರ್ಸ್

ಶಾರುಖ್ ಖಾನ್ ಕೇವಲ ಸಿನಿಮಾ ಮಾತ್ರವಲ್ಲ, ಕ್ರಿಕೆಟ್ ನಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾಲೀಕರಲ್ಲಿ ಒಬ್ಬರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಟ್ಟು ಮೌಲ್ಯ 943 ಕೋಟಿಯಾಗಿದ್ದು, ಇದರಲ್ಲಿ 55% ಭಾಗ ಶಾರುಖ್ ಗೆ ಸೇರಿದೆ.

39
ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್

ಶಾರುಖ್ ಖಾನ್ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಎನ್ನುವ ನಿರ್ಮಾಣ ಸಂಸ್ಥೆಯನ್ನು ಸಹ ಹೊಂದಿದ್ದು, ಇದರ ಮೌಲ್ಯ ಬರೋಬ್ಬರಿ 500 ಕೋಟಿಯಾಗಿದೆ.

49
ಮನ್ನತ್

ಶಾರುಖ್ ಮನೆ ಮನ್ನತ್ ಯಾವ ಅರಮನೆಗೂ ಕಡಿಮೆ ಇಲ್ಲ ಅಂತಾನೆ ಹೇಳಬಹುದು. ಈ ಆರು ಅಂತಸ್ತಿನ ಕಡಲತೀರದ ಬಂಗಲೆ ಮುಂಬೈನ ಬಾಂದ್ರಾದಲ್ಲಿದೆ. ಶಾರುಖ್ ಖಾನ್ ಈ ಬಂಗಲೆ ಬರೋಬ್ಬರಿ ₹200 ಕೋಟಿ ಮೌಲ್ಯದ್ದಾಗಿದೆ.

59
ಖಾಸಗಿ ಜೆಟ್

ಶಾರುಖ್ ಖಾನ್ ₹260 ಕೋಟಿ ಮೌಲ್ಯದ ಖಾಸಗಿ ಜೆಟ್ ವಿಮಾನವನ್ನೂ ಹೊಂದಿದ್ದಾರೆ. ಕಿಂಗ್ ಖಾನ್ ಗಲ್ಫ್‌ಸ್ಟ್ರೀಮ್ G550 ವಿಮಾನವನ್ನು ಹಾರಿಸುತ್ತಾರೆ.

69
ದೆಹಲಿಯಲ್ಲಿ ₹200 ಕೋಟಿ ಮೌಲ್ಯದ ಮನೆ

ಶಾರುಖ್ ಖಾನ್ ಗೌರಿ ಖಾನ್ ಗಾಗಿ ದೆಹಲಿಯಲ್ಲಿ ಒಂದು ಮನೆಯನ್ನು ಖರೀದಿಸಿದ್ದಾರೆ. 2001 ರಲ್ಲಿ ಖರೀದಿಸಲಾದ ಈ ಮನೆ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿದ್ದು, ಈಗ ಅದರ ಮೌಲ್ಯ ಸುಮಾರು ₹200 ಕೋಟಿ. ಗೌರಿ ಖಾನ್ ಅವರೇ ವಿನ್ಯಾಸಗೊಳಿಸಿದ ಈ ಪಾರಂಪರಿಕ ವಿಲ್ಲಾ ಆರಾಮದಾಯಕವಾದ ವಿಶ್ರಾಂತಿ ಗೃಹವಾಗಿದೆ.

79
ಲಂಡನ್ ನಲ್ಲಿ ಬಂಗಲೆ

ಇನ್ನು ಶಾರುಖ್ ಖಾನ್ ಅವರಿಗೆ ಲಂಡನ್‌ನಲ್ಲಿ ಕೂಡ ಐಷಾರಾಮಿ ಬಂಗಲೆ ಇದೆ. ಈ ವಿಲ್ಲಾ 175 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

89
ಅಲಿಬಾಗ್ ಬಂಗಲೆ

ದೇಜಾ ವು ಫಾರ್ಮ್ಸ್‌ನಲ್ಲಿ ನೆಲೆಗೊಂಡಿರುವ ಶಾರುಖ್ ಖಾನ್ ಅವರ ₹15 ಕೋಟಿ ಮೌಲ್ಯದ ವಿಲ್ಲಾ ಸುಮಾರು 20,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಖಾಸಗಿ ಈಜುಕೊಳ ಮತ್ತು ಖಾಸಗಿ ಹೆಲಿಪ್ಯಾಡ್ ಅನ್ನು ಒಳಗೊಂಡಿದೆ.

99
ಐಷಾರಾಮಿ ಕಾರುಗಳು ಮತ್ತು ಕೈಗಡಿಯಾರಗಳು

ಶಾರುಖ್ ಖಾನ್ ಬಳಿ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ (ರೂ 10 ಕೋಟಿ), ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ (ರೂ 4.01 ಕೋಟಿ), ಮತ್ತು ಬಿಎಂಡಬ್ಲ್ಯೂ ಐ 8 (ರೂ 2.6 ಕೋಟಿ) ಕಾರುಗಳನ್ನು ಹೊಂದಿದ್ದಾರೆ. ಒಟ್ಟು 20 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಈ ಕಾರುಗಳು ಅವರ ಅತಿದೊಡ್ಡ ಆಸ್ತಿಗಳಲ್ಲಿ ಸೇರಿವೆ. ಇನ್ನು ಕಿಂಗ್ ಖಾನ್ ಮೆಟ್ ಗಾಲಾ 2025 ರ ಚೊಚ್ಚಲ ಪ್ರವೇಶದ ಸಮಯದಲ್ಲಿ ಪ್ರದರ್ಶಿಸಿದ ಅವರ ಪಾಟೆಕ್ ಫಿಲಿಪ್ ಗ್ರ್ಯಾಂಡ್ ಕಾಂಪ್ಲಿಕೇಶನ್ ವಾಚ್‌ ಧರಿಸಿದ್ದು, ಇದನ್ನು ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದಾರೆ ಮತ್ತು ಇದರ ಮೌಲ್ಯ ರೂ 21 ಕೋಟಿ ವರೆಗೆ ಇರುತ್ತದೆ.

Read more Photos on
click me!

Recommended Stories