Most Admired Women 2021- ಏಂಜಲೀನಾ ಜೋಲಿ ಜೊತೆ ಸ್ಥಾನ ಪಡೆದ ಐಶ್ವರ್ಯಾ, ಪ್ರಿಯಾಂಕಾ!

Suvarna News   | Asianet News
Published : Dec 17, 2021, 09:01 PM IST

2021ರ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ  (Most Admired Women 2021) ಪಟ್ಟಿ ಬಿಡುಗಡೆಯಾಗಿದೆ. ಬಾಲಿವುಡ್‌ ನಟಿಯರಾದ ಪ್ರಿಯಾಂಕ ಚೋಪ್ರಾ ಮತ್ತು ಐಶ್ವರ್ಯಾ ರೈ ಕೂಡ ಈಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಾಲಿವುಡ್ ಏಂಜಲೀನಾ ಜೋಲಿಯ ಹೆಸರು ಅಗ್ರಸ್ಥಾನದಲ್ಲಿದೆ. ಇದಲ್ಲದೇ ಸ್ಕಾರ್ಲೆಟ್ ಜಾನ್ಸನ್, ಎಮ್ಮಾ ವ್ಯಾಟ್ಸನ್ ಮತ್ತು ಟೇಲರ್ ಸ್ವಿಫ್ಟ್ ಅವರ ಹೆಸರು ಕೂಡ ಈ ಲಿಸ್ಟ್‌ನಲ್ಲಿದೆ.2021ರ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ ಸಿಕ್ಕಿದೆ ನೋಡಿ.

PREV
17
Most Admired Women 2021- ಏಂಜಲೀನಾ ಜೋಲಿ ಜೊತೆ ಸ್ಥಾನ ಪಡೆದ ಐಶ್ವರ್ಯಾ, ಪ್ರಿಯಾಂಕಾ!

'ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್'  (The Matrix Resurrections) ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ತನ್ನ ಸಿನಿಮಾವನ್ನು ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.  ‘ಸಿಟಾಡೆಲ್’ (Citadel) ಎಂಬ ಹೊಸಶೋ ಸಹ ನಟಿ ಮಾಡುತ್ತಿದ್ದಾರೆ. ಯೂಗೋವ್  (YouGov) ಸಮೀಕ್ಷೆಯಲ್ಲಿ ಪ್ರಿಯಾಂಕಾ ಚೋಪ್ರಾ 'ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ' ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ 2020 ರಲ್ಲಿ, 15 ನೇ ಸ್ಥಾನದಲ್ಲಿದ್ದರು.

27

ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರಾದ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಅವರು 13ನೇ ಸ್ಥಾನದಲ್ಲಿದ್ದಾರೆ. ಐಶ್ವರ್ಯಾ ರೈ ಬಾಲಿವುಡ್ (Bollywood) ಮಾತ್ರವಲ್ಲದೆ ಹಾಲಿವುಡ್‌ನಲ್ಲೂ  ಬ್ರೈಡ್ ಮತ್ತು ಪ್ರಿಜುಡೀಸ್ (Bride and Prejudice) ಸೇರಿದಂತೆ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರು 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದರು.

37

ಹಾಲಿವುಡ್ ಖ್ಯಾತ ನಟಿ ಏಂಜಲೀನಾ ಜೋಲಿ (Angelina Jolie) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮಿಚೆಲ್ ಒಬಾಮಾ ಮೊದಲ ಸ್ಥಾನದಲ್ಲಿದ್ದರೆ, ಏಂಜಲೀನಾ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರೂ  7.1 ಪಾಯಿಂಟ್ಸ್‌ ಪಡೆದಿದ್ದಾರೆ. ಈ ಅಮೇರಿಕನ್ ನಟಿ ಆಸ್ಕರ್ ಮತ್ತು ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಹಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಸಹ ಹಲವಾರು ಬಾರಿ ನಾಮಿನೇಟ್‌ ಆಗಿದ್ದಾರೆ.
 

47

ಹಾಲಿವುಡ್‌ನ ಪ್ರಸಿದ್ಧ ನಟಿ ಸ್ಕಾರ್ಲೆಟ್ ಜಾನ್ಸನ್  (Scarlett Johansson) ಕೂಡ 'ಮೋಸ್ಟ್ ಅಡ್‌ಮೈರ್ಡ್‌ ವುಮೆನ್ 2021' ಪಟ್ಟಿಯಲ್ಲಿ ಸೇರಿದ್ದಾರೆ.  ಮಾರ್ವೆಲ್‌ನ 'ಅವೆಂಜರ್ಸ್' ಸರಣಿಯಲ್ಲಿ ಸೂಪರ್‌ಹೀರೋ 'ಬ್ಲ್ಯಾಕ್ ವಿಡೋ' ಆಗಿರುವ ನತಾಶಾ ರೊಮಾನೋಫ್ ಪಾತ್ರವನ್ನು 37 ವರ್ಷದ ನಟಿ ನಿರ್ವಹಿಸುತ್ತಿದ್ದಾರೆ. ಈ ನಟಿ 5ನೇ ಸ್ಥಾನ ಪಡೆದಿರುತ್ತಾರೆ.

57

ಹ್ಯಾರಿ ಪಾಟರ್‌ನ ಪ್ರಮುಖ ನಟಿ ಎಮ್ಮಾ ವ್ಯಾಟ್ಸನ್ (Emma Watson) ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಎಮ್ಮಾ ಒಬ್ಬ ಶ್ರೇಷ್ಠ ನಟಿ ಹಾಗೂ ಆಕ್ಟಿವಿಸ್ಟ್‌.  ಇತ್ತೀಚೆಗೆ ಅವರು ಪರಿಸರವನ್ನು ಉಳಿಸುವ ಭಾರತೀಯ ಮಹಿಳೆಯರನ್ನು ಹೊಗಳಿದ್ದಾರೆ. ನಟಿ ತನ್ನ Instagram ನಲ್ಲಿ 1970 ಚಿಪ್ಕೋ ಚಳುವಳಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

67

ಅಮೆರಿಕದ ಖ್ಯಾತ ಪಾಪ್ ಗಾಯಕಿ, ಬರಹಗಾರ್ತಿ ಟೇಲರ್ ಸ್ವಿಫ್ಟ್   (Taylor Swift) 2021ರ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು  ಏಳನೇ ಸ್ಥಾನದಲ್ಲಿರುವ  32 ವರ್ಷದ ಗಾಯಕಿ ತನ್ನದೇ ಆದ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ಅವರು ಇಲ್ಲಿಯವರೆಗೆ 10 ಕ್ಕೂ ಹೆಚ್ಚು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ತಮ್ಮ ಹಾಡುಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಟೇಲರ್ 12 ನೇ ವಯಸ್ಸಿನಲ್ಲಿ ಗಿಟಾರ್ ಮತ್ತು ಗಾಯನವನ್ನು ಕರಗತ ಮಾಡಿಕೊಂಡಿದ್ದರು.

77
oprah winfrey

ಅಮೆರಿಕದ ಟಾಕ್ ಶೋ ನಿರೂಪಕಿ ಓಪ್ರಾ ವಿನ್‌ಫ್ರೇ  (Oprah Winfrey) ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ನಾಲ್ಕನೇ ಸ್ಥಾನದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯಾಗಿದ್ದಾರೆ. ಓಪ್ರಾ ಪ್ರಸಿದ್ಧ ಟಾಕ್ ಶೋ ಹೋಸ್ಟ್, ಇದರ ಹೊರತಾಗಿ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಓಪ್ರಾರ ಜೀವನವು ಹೋರಾಟಗಳಿಂದ ತುಂಬಿದೆ. 1954 ರಲ್ಲಿ ಅಮೆರಿಕದ ಮಿಸ್ಸಿಸ್ಸಿಪ್ಪಿಯ ಕೊಸ್ಸಿಯಸ್ ನಗರದಲ್ಲಿ ಜನಿಸಿದ ಓಪ್ರಾ ಅವರ ತಾಯಿ ಮನೆಗೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ತೊಂದರೆಯಿಂದಾಗಿ ಅವರ ತಾಯಿ ಅವರನ್ನು ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಅಷ್ಟೇ ಅಲ್ಲ, ದೈಹಿಕ ಕಿರುಕುಳವನ್ನೂ ಅನುಭವಿಸಬೇಕಾಗಿ ಬಂದ ನಟಿ, ಎಲ್ಲ ಕಷ್ಟಗಳನ್ನು ಮೆಟ್ಟುನಿಂತು ಛಲ ಬಿಡದೆ ಇಂದು ಈ ಹಂತಕ್ಕೆ ತಲುಪಿದ್ದಾರೆ.

Read more Photos on
click me!

Recommended Stories