ಅಪ್ಪ ಲೆಜೆಂಡರಿ ಸೂಪರ್‌ಸ್ಟಾರ್‌, ಆದ್ರೆ ಮಗ ಸಿನಿಮಾರಂಗ ಕಂಡ ಅತೀ ದೊಡ್ಡ ಫ್ಲಾಪ್‌ ಸ್ಟಾರ್‌!

Published : Jun 16, 2026, 06:45 PM IST

ಬಾಲಿವುಡ್ ಸೂಪರ್‌ಸ್ಟಾರ್ ಮಿಥುನ್ ಚಕ್ರವರ್ತಿ ಅವರ ಪುತ್ರ ಮಿಮೋಹ್ ಚಕ್ರವರ್ತಿ, 18ಕ್ಕೂ ಹೆಚ್ಚು ಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸಿದರೂ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಅವರ ವೃತ್ತಿಜೀವನದಲ್ಲಿ ಹಿಟ್‌ ಆಗಿದ್ದು ಒಂದೇ ಒಂದು ಚಿತ್ರ.

PREV
16
ಬಾಲಿವುಡ್ ಸ್ಟಾರ್ ಪುತ್ರನಿಗೆ ಸಿಗದ ಯಶಸ್ಸು

ಈತ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಪುತ್ರ, ತನ್ನ ಸಿನಿಮಾ ವೃತ್ತಿಜೀವನದಲ್ಲಿ ಬರೋಬ್ಬರಿ 18 ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ (Web Series) ನಟಿಸಿದರೂ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ತನ್ನ ಇಡೀ ಕೆರಿಯರ್‌ನಲ್ಲಿ ಈ ನಟ ಬಾಕ್ಸ್ ಆಫೀಸ್‌ನಲ್ಲಿ ನೀಡಿದ್ದು ಕೇವಲ ಒಂದೇ ಒಂದು ಹಿಟ್ ಸಿನಿಮಾ!

26
ನೆಪೋಟಿಸಂ ಇದ್ದರೂ ಕೈಹಿಡಿಯದ ಅದೃಷ್ಟ

ಬಾಲಿವುಡ್‌ನಲ್ಲಿ ಅನೇಕ ನಟ-ನಟಿಯರಿಗೆ ಅವರ ಪೋಷಕರ ಹೆಸರಿನಿಂದಾಗಿ ಆರಂಭದಲ್ಲಿ ಸುಲಭವಾಗಿ ಅವಕಾಶಗಳು ಸಿಗುತ್ತವೆ. ಆದರೆ ಆಫರ್ ಸಿಕ್ಕ ತಕ್ಷಣ ಎಲ್ಲರೂ ಯಶಸ್ವಿ ನಟರಾಗಲು ಸಾಧ್ಯವಿಲ್ಲ ಎಂಬುದಕ್ಕೆ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಪುತ್ರ ಮಿಮೋಹ್ ಚಕ್ರವರ್ತಿ (Mimoh Chakraborty) ಅವರ ಸಿನಿಮಾ ಬದುಕೇ ದೊಡ್ಡ ಎಕ್ಸಾಂಪಲ್‌

36
ತಂದೆಯಂತೆ ಮಿನುಗದ ಮಗ: ‘ಜಿಮ್ಮಿ’ ಮೂಲಕ ಎಂಟ್ರಿ

ಒಂದಾನೊಂದು ಕಾಲದಲ್ಲಿ ನಟ ಮಿಥುನ್ ಚಕ್ರವರ್ತಿ ಅವರು ಬಾಲಿವುಡ್‌ನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ ಸೂಪರ್‌ಸ್ಟಾರ್ ಆಗಿ ಮೆರೆದಿದ್ದರು. ಆದರೆ ಅವರ ಮಗ ಮಿಮೋಹ್‌ಗೆ ತಂದೆಯಂತೆ ಜನಪ್ರಿಯತೆ ಗಳಿಸಲು ಸಾಧ್ಯವಾಗಲಿಲ್ಲ. ಮಿಮೋಹ್ 2008 ರಲ್ಲಿ ಬಿಡುಗಡೆಯಾದ ‘ಜಿಮ್ಮಿ’ (Jimmy) ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ಅವರ ಮೊದಲ ಸಿನಿಮಾವೇ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು.

46
ವೃತ್ತಿಜೀವನದ ಏಕೈಕ ಹಿಟ್ ಚಿತ್ರ ‘ಹಾಂಟೆಡ್ 3D’

ಮೊದಲ ಸಿನಿಮಾ ಸೋತ ನಂತರ ಮಿಮೋಹ್ ಹಲವು ಚಿತ್ರಗಳಲ್ಲಿ ನಟಿಸಿದರಾದರೂ, ಅವುಗಳಲ್ಲಿ ಬಹುತೇಕ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾದವು. ಮಿಮೋಹ್ ಅವರ ಚಿತ್ರಜೀವನದ ಅತ್ಯಂತ ದೊಡ್ಡ ಮತ್ತು ಏಕೈಕ ಯಶಸ್ಸು ಸಿಕ್ಕಿದ್ದು 2011 ರಲ್ಲಿ ತೆರೆಕಂಡ ‘ಹಾಂಟೆಡ್ 3D’ (Haunted 3D) ಎಂಬ ಹಾರರ್-ಥ್ರಿಲ್ಲರ್ ಚಿತ್ರದಿಂದ. ಸುಮಾರು 13 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 34 ಕೋಟಿ ರೂಪಾಯಿ ಗಳಿಸಿ ಸೂಪರ್ ಹಿಟ್ ಎನಿಸಿಕೊಂಡಿತ್ತು.

56
ಒಟಿಟಿ ಜಗತ್ತಿಗೆ ಲಗ್ಗೆ ಇಟ್ಟ ನಟ

ಇತ್ತೀಚಿನ ದಿನಗಳಲ್ಲಿ ಬೆಳ್ಳಿಪರದೆ ಜೊತೆಗೆ ಡಿಜಿಟಲ್ ಮಾಧ್ಯಮಕ್ಕೂ (OTT) ಪ್ರವೇಶಿಸಿರುವ ಮಿಮೋಹ್, ‘ಖಾಕಿ: ದಿ ಬೆಂಗಾಲ್ ಚಾಪ್ಟರ್’ (Khakee: The Bengal Chapter) ಎಂಬ ಜನಪ್ರಿಯ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ‘ಜೋಗಿರಾ ಸಾರಾ ರಾ ರಾ’ ಚಿತ್ರದಲ್ಲೂ ಇವರ ನಟನೆಗೆ ಸ್ವಲ್ಪ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು.

66
ಸ್ಟಾರ್ ಕಿಡ್ ಆದರೂ ಸಿಗದ ಸ್ಟಾರ್‌ಡಮ್

ಚಿತ್ರರಂಗದಲ್ಲಿ ಕಳೆದ ಸುಮಾರು 18 ವರ್ಷಗಳ ಸುದೀರ್ಘ ಅವಧಿಯಲ್ಲಿ ಮಿಮೋಹ್ ಚಕ್ರವರ್ತಿ ಅವರು 18 ಕ್ಕೂ ಹೆಚ್ಚು ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ. ಒಬ್ಬ ಸ್ಟಾರ್ ಕಿಡ್ ಆಗಿದ್ದರೂ ಸಹ ಅವರಿಗೆ ಬಾಲಿವುಡ್‌ನಲ್ಲಿ ತಮ್ಮ ತಂದೆ ಮಿಥುನ್ ಚಕ್ರವರ್ತಿ ಅವರಂತೆ ದೊಡ್ಡ ಮಟ್ಟದ ಯಶಸ್ಸು, ಮಾರುಕಟ್ಟೆ ಮತ್ತು ಸ್ಟಾರ್‌ಡಮ್ ಗಳಿಸಲು ಇಂದಿಗೂ ಸಾಧ್ಯವಾಗಿಲ್ಲ.

\

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories