ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಮಗಳು ದುವಾ, ಇಬ್ಬರು ಅಜ್ಜಿಯಂದಿರ ಕಣ್ಗಾವಲಿನಲ್ಲಿ ದೊಡ್ಡವಳಾಗ್ತಿದ್ದಾಳೆ. ದೀಪಿಕಾ ತಂದೆ, ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಮೊಮ್ಮಗಳು ದುವಾ ಬೆಂಗಳೂರಿಗೆ ಬಂದ್ರೆ ಏನು ಮಾಡ್ತಾಳೆ ಅನ್ನೋದನ್ನು ಹೇಳಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮಗಳು ದುವಾಗೆ ಎರಡು ವರ್ಷವಾಗ್ತಿದೆ. 2024 ಸೆಪ್ಟೆಂಬರ್ 8 ರಂದು ಜನಿಸಿರುವ ದುವಾ, ಇಬ್ಬರು ಅಜ್ಜ- ಇಬ್ಬರು ಅಜ್ಜಿಯಂದಿರ ಜೊತೆ ದೊಡ್ಡವಳಾಗ್ತಿದ್ದಾಳೆ. ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ದುವಾ ಅಜ್ಜ ಪ್ರಕಾಶ್ ಪಡುಕೋಣೆ ಮೊಮ್ಮಗಳ ಮಾತು, ಸ್ವಭಾವದ ಬಗ್ಗೆ ಮಾತನಾಡಿದ್ದಾರೆ.
25
ಮೆಟ್ರೋದಲ್ಲಿ ಓಡಾಟ
ದುವಾ, ಅಜ್ಜನ ಮನೆ ಬೆಂಗಳೂರಿಗೆ ಬಂದ್ರೆ ಮೆಟ್ರೋ ಹಾಗೂ ರಿಕ್ಷಾದಲ್ಲಿ ಓಡಾಡುತ್ತಾಳಂತೆ. ಪಾರ್ಕ್ ನಲ್ಲಿ ಸುತ್ತಾಡುವ ದುವಾ, ಎಲ್ಲವನ್ನೂ ಎಂಜಾಯ್ ಮಾಡ್ತಿದ್ದಾಳೆ. ಮೊಮ್ಮಕ್ಕಳು ಬಂದ್ರೆ ಏನಾಗುತ್ತೆ ಅನ್ನೋದು ನನಗೆ ತಿಳಿದಿರಲಿಲ್ಲ. ಆದ್ರೀಗ ದುವಾ ಜೊತೆ ಸಮಯ ಕಳೆಯುವುದನ್ನು ಎಂಜಾಯ್ ಮಾಡ್ತಿದ್ದೇನೆ ಎಂದು ಪ್ರಕಾಶ್ ಪಡುಕೋಣೆ ಹೇಳಿದ್ದಾರೆ.
35
ದುವಾ ಸ್ವಭಾವ
ದುವಾ ಸ್ನೇಹಜೀವಿ. ಪ್ರತಿಯೊಬ್ಬರನ್ನು ದುವಾ ಮಾತನಾಡಿಸ್ತಾಳೆ. ಯಾರೇ ಕಂಡ್ರೂ ಹಾಯ್ ಎನ್ನುತ್ತಾಳೆ. ಅವಳಿಗೆ ಪೆಡಲ್ ಇಷ್ಟ. ಬೆಂಗಳೂರಿಗೆ ಬಂದಾಗ ಮನೆಯ ಸಮೀಪವಿರುವ ಹತ್ತಿರದ ಪೆಡಲ್ ಪಾರ್ಕ್ ಗೆ ಹೋಗ್ತಾರೆ. ಟ್ರೈನ್ ನೋಡೋದನ್ನು ಅವಳು ಇಷ್ಟಪಡ್ತಾಳೆ. ಬಾಲ್ಯದಿಂದಲೂ ಟ್ರಾವೆಲ್ ಮಾಡ್ತಿರೋದ್ರಿಂದ ಇದು ಅವಳ ಗ್ರೋಥ್ ಗೆ ಸಹಾಯ ಮಾಡಿದೆ. ಅವಳು ಬೇಗ ಬೇಗ ಬೆಳೆಯುತ್ತಿದ್ದಾಳೆ ಅಂತ ಪಡುಕೋಣೆ ಹೇಳಿದ್ದಾರೆ.
ರಣವೀರ್ ಮತ್ತು ದೀಪಿಕಾ ಇಬ್ಬರೂ ದುವಾ ಆರೈಕೆ ಮಾಡ್ತಾರೆ. ಆದ್ರೆ ದೀಪಿಕಾ ಸ್ವಲ್ಪ ಹೆಚ್ಚು. ರಣವೀರ್ ಶೂಟಿಂಗ್ ಇಲ್ದೆ ಮನೆಯಲ್ಲಿದ್ದಾಗ ದುವಾ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಮಗುವನ್ನು ನೋಡಿಕೊಳ್ಳಲು ಎರಡೂ ಕುಟುಂಬಗಳಿವೆ. ಅಜ್ಜನಾದ ನಂತ್ರ ಇಷ್ಟೊಂದು ಬದಲಾಗುತ್ತೆ ಅಂತ ನಾನು ಅಂದ್ಕೊಂಡಿರಲಿಲ್ಲ ಎಂದು ಪಡುಕೋಣೆ ಹೇಳಿದ್ದಾರೆ.
55
ಎರಡನೇ ಮಗು ನಿರೀಕ್ಷೆಯಲ್ಲಿ ದೀಪಿಕಾ
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ತಮ್ಮ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಮಗಳು ದುವಾ ತನ್ನ ಪ್ರೆಗ್ನೆನ್ಸಿ ಕಿಟ್ ಹಿಡಿದಿರುವ ಸಿಹಿ ಫೋಟೋವನ್ನು ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.