ಗಾಯಕ ಮಿಲಿಂದ್ ಮತ್ತು- ಪ್ರಿಯಾ ಬೆನಿವಾಲ್ ರಾಯಲ್ ಮದುವೆಗೆ 'ವಾವ್' ಎಂದ ಫ್ಯಾನ್ಸ್

First Published | Apr 18, 2022, 5:11 PM IST

ಜನಪ್ರಿಯ ಪಂಜಾಬಿ ಗಾಯಕ ಮಿಲಿಂದ್ ಗಾಬಾ ದೀರ್ಘಕಾಲದ ಗೆಳತಿ ಪ್ರಿಯಾ ಬೆನಿವಾಲ್ ಜೊತೆ ಹಸೆಮಣೆ ಏರಿದರು. ಏಪ್ರಿಲ್ 16ರಂದು ದೆಹಲಿಯಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಪ್ರಿಯಾ ಮತ್ತು ಮಿಲಿಂದ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜನಪ್ರಿಯ ಪಂಜಾಬಿ ಗಾಯಕ ಮಿಲಿಂದ್ ಗಾಬಾ ದೀರ್ಘಕಾಲದ ಗೆಳತಿ ಪ್ರಿಯಾ ಬೆನಿವಾಲ್ ಜೊತೆ ಹಸೆಮಣೆ ಏರಿದರು. ಏಪ್ರಿಲ್ 16ರಂದು ದೆಹಲಿಯಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಪ್ರಿಯಾ ಮತ್ತು ಮಿಲಿಂದ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇಬ್ಬರು ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಪ್ರಿಯಾ ಮತ್ತು ಮಿಲಿಂದ್ ಮದುವೆಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Tap to resize

ಮದುವೆಯಲ್ಲಿ ಗಾಯಕ ಮಿಲಿಂದ್ ಗಾಬಾ ಶರ್ವಾನಿ ಧರಿಸಿದ್ದರು. ಸಖತ್ ರಾಯಲ್ ಆಗಿ ಮಿಲಿಂದ್ ಕಾಣಿಸುತ್ತಿದ್ದ. ಇನ್ನು ಪತ್ನಿ ಪ್ರಿಯಾ ಬೆನಿವಾಲ್ ಕೆಂಪು ಬಣ್ಣದ ಕಸೂತಿ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದಾರೆ. ಇಬ್ಬರ ರಾಯಲ್ ವೆಡ್ಡಿಂಗ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ದೆಹಲಿಯಲ್ಲಿ ನಡೆದ ಪ್ರಿಯಾ ಮತ್ತು ಮಿಲಿಂದ್ ಮದುವೆಯಲ್ಲಿ ಕುಟುಂಬಸ್ಥರು ಮತ್ತು ಕೇವಲ ಆಪ್ತರು ಮಾತ್ರ ಭಾಗಿಯಾಗಿದ್ದರು. ಭೂಷಣ್ ಕುಮಾರ್, ಸಪ್ನಾ ಚೌಧರಿ, ಸುರೇಶ್ ರೈನಾ, ಗುರು ರಾಂಧವ, ಪ್ರಿನ್ಸ್ ನರುಲಾ ಸೇರಿದಂತೆ ಕೆಲವೇ ಕೆಲವು ಆಪ್ತರು ಮಾತ್ರ ಭಾಗಿಯಾಗಿದ್ದರು.

ಮಿಲಿಂದ್ ಮತ್ತು ಪ್ರಿಯಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಾರದ ಆರಂಭದಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮದುವೆಗೆ ಸಿದ್ಧರಾಗಿದ್ದರು. ನಿಶ್ಚಿತಾರ್ಥದ ಫೋಟೋಗಳು ಸಹ ವೈರಲ್ ಆಗಿತ್ತು.

ಏಪ್ರಿಲ್ 11ರಿಂದ ಪ್ರಿಯಾ-ಮಿಲಿಂದ್ ಮದುವೆ ಸಮಾರಂಭ ಪ್ರಾರಂಭವಾಗಿದೆ. ಒಂದೆಡೆ ಬಾಲಿವುಡ್ ಸ್ಟಾರ್ ಜೊತ ಅಲಿಯಾ ಮತ್ತು ರಣಬೀರ್ ಮದುವೆ ಸಮಾರಂಭ ನಡೆಯುತ್ತಿದ್ದರೆ ದೆಹಲಿಯಲ್ಲಿ ಪ್ರಿಯಾ ಮತ್ತು ಮಿಲಿಂದ್ ಮದುವೆ ಸಮಾರಂಭ ಜೋರಾಗಿತ್ತು. ಸಂಗೀತ ಮತ್ತು ಹೆಮಂದಿ ಶಾಸ್ತ್ರಗಳು ಅದ್ದೂರಿಯಾಗಿ ನೆರವೇರಿದೆ.

ವೃತ್ತಿ ಜೀವನದ ಬಗ್ಗೆ ಹೇಳುವುದಾರೆ ಮಿಲಿಂದ್ ಅನೇಕ ಪಾರ್ಟಿ ಗಳನ್ನು ಕಂಪೋಸ್ ಮಾಡಿದ್ದಾರೆ. ಕರಣ್ ಜೋಹರ್ ನಡೆಸಿಕೊಟ್ಟ ಬಿಗ್ ಬಾಸ್ ಒಟಿಟಿಯಲ್ಲಿ ಭಾಗಿಯಾಗಿದ್ದರು. ಕೊನೆಯದಾಗಿ ಮಿಲಿಂದ್ ಒಟಿಟಿಯಲ್ಲಿ ಮಿಂಚಿದ್ದರು.

Latest Videos

click me!