5 ಬಾರಿ ಮದುವೆಯಾದ ನಟಿಗೆ ಒಲಿಯದ ಗಂಡಂದಿರ ಪ್ರೀತಿ, ನಯಾಪೈಸೆ ಇಲ್ಲದೆ ಮರಣ, ದೇಣಿಗೆ ಸಂಗ್ರಹಿಸಿ ಅಂತ್ಯಸಂಸ್ಕಾರ!

First Published | Jan 5, 2024, 7:33 PM IST

ಬಾಲಿವುಡ್‌ನ ಅನೇಕ ನಟರು ಪ್ರೀತಿಯಲ್ಲಿ ಬಿದ್ದರು ಆದರೆ ಕೆಲವರ ಪ್ರೀತಿ ಮಾತ್ರ ಶಾಶ್ವತವಾಗಿ ಉಳಿದಿದೆ. ಈಗ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ, ಕಿಶೋರ್ ಕುಮಾರ್ ಅವರ 4 ಮದುವೆಗಳ ಬಗ್ಗೆ ಆಗಾಗ ಮಾತನಾಡಲಾಗುತ್ತದೆ. ಆದರೆ, ತನ್ನ ಜೀವನದಲ್ಲಿ 5 ಬಾರಿ ಮದುವೆಯಾಗಿದ್ದರೂ ಒಬ್ಬಂಟಿಯಾಗಿ ಉಳಿರುವ ನಟಿಯೊಬ್ಬರು ಇದ್ದಾರೆ ಗೊತ್ತಾ?

ಆನ್-ಸ್ಕ್ರೀನ್ ನಲ್ಲಿ ಈ ನಟಿ ಇನ್ನೂ 'ಲಾರಾ ಲಪ್ಪಾ ಹುಡುಗಿ' ಎಂದು ಪ್ರಸಿದ್ಧರಾಗಿದ್ದಾರೆ. ನಾವು ಮಾತನಾಡುತ್ತಿರುವ ನಟಿ ಬ್ರಿಟಿಷ್ ಇಂಡಿಯಾದ ಪಂಜಾಬ್‌ನ ರೈವಿಂಡ್‌ನಲ್ಲಿ ಜನಿಸಿದಾಕೆ. ಅಕ್ಕ ಮುಂಬೈನಲ್ಲಿ ಒಳ್ಳೆಯ ಮನೆತನವನ್ನು ಮದುವೆಯಾದಾಗ, ಈ ನಟಿ ತನ್ನ ಸಹೋದರಿಯೊಂದಿಗೆ ಮುಂಬೈಗೆ ಬಂದರು. ಆಕೆಯ ನಿಜ ನಾಮಧೇಯ ಖುರ್ಷಿದ್ ಜಹಾನ್.

ಆದರೆ, ಸೊಹ್ರಾಬ್ ಮೋದಿ ಅವರು ತಮ್ಮ 'ಸಿಕಂದರ್' ಚಿತ್ರದ ಬಿಡುಗಡೆ ಸಮಾರಂಭದಲ್ಲಿ  ಖುರ್ಷಿದ್ ಜಹಾನ್ ಗಮನಿಸಿದಾಗ  ನಟಿಗೆ ಅದೃಷ್ಟವು ಅನಿರೀಕ್ಷಿತ ಒದಗಿ ಬಂತು ಮತ್ತು 'ಸಿಕಂದರ್' ಚಿತ್ರದಲ್ಲಿ ತಕ್ಷಿಲಾ ಕಿಂಗ್‌ನ ಸಹೋದರಿ 'ಅಂಬಿ' ಪಾತ್ರದಲ್ಲಿ ಆಕೆಗೆ ಪೋಷಕ ಪಾತ್ರ ದಕ್ಕಿತು. ಅಲ್ಲಿಂದ ಆಕೆಯ ಹೆಸರು ಮೀನಾ ಶೋರೆ.  'ಸಿಕಂದರ್' ಯಶಸ್ವಿಯಾದಾಗ, ರೂಪ್ ಕೆ ಶೋರೆ ಮೀನಾಗೆ 'ಶಾಲಿಮಾರ್' ಮತ್ತು ಮೆಹಬೂಬ್ ಖಾನ್ 'ಹುಮಾಯೂನ್'ನಲ್ಲಿ ಕೆಲಸ ಮಾಡಲು ಆಫರ್ ಮಾಡಿದರು. ಇದಲ್ಲದೇ ಆಕೆಗೆ ಇನ್ನೂ ಹಲವು ಚಿತ್ರಗಳ ಆಫರ್ ಬರತೊಡಗಿತು. 

Tap to resize

ಈ ಮಧ್ಯೆ ಮೀನಾಗೆ ಅವರಿಗೆ ಸೊಹ್ರಾಬ್ ಮೋದಿ ಪತ್ರ ಬರೆದರು. ಮೀನಾ ಅವರೊಂದಿಗೆ ಮೂರು ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿಯವರೆಗೆ ಬೇರೆ ಯಾವುದೇ ಚಿತ್ರಕ್ಕೆ ಸಹಿ ಹಾಕುವಂತಿಲ್ಲ ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು. ಈ ಒಪ್ಪಂದ ಉಲ್ಲಂಘಿಸಿದಕ್ಕೆ ಮೀನಾ ಬಳಿಕ 3 ಲಕ್ಷ ರೂ. ಕೇಳಿದರು. ಕೊನೆಗೆ ಮೋದಿಯವರ ಪತ್ನಿ ಮೆಹ್ತಾಬ್ ಅವರ ಸಹಾಯ ಪಡೆದು ಮೋದಿ ಕೇಳಿದ ಹಣವನ್ನು 30,000 ರೂ.ಗೆ ಇಳಿಸುವ ಮೂಲಕ ಒಪ್ಪಂದದಿಂದ ಮುಕ್ತರಾದರು. 
 

ಮೀನಾ ಅವರ ಮೊದಲ ಮದುವೆ ನಟ-ನಿರ್ಮಾಪಕ-ನಿರ್ದೇಶಕ ಜಹೂರ್ ರಾಜಾ ಅವರೊಂದಿಗೆ ನಡೆಯಿತು. ‘ಸಿಕಂದರ್’ ಚಿತ್ರೀಕರಣದ ವೇಳೆ ಇವರಿಬ್ಬರು ಭೇಟಿಯಾಗಿ ಪ್ರೀತಿಯಲ್ಲಿ ಮುಳುಗಿದ್ದರು. ಬಳಿಕ ಬೇರೆಯಾದರು. ಮೀನಾ ಅವರ ಎರಡನೇ ವಿವಾಹವು ನಟ ಮತ್ತು ಸಹನಟ ಅಲ್ ನಾಸಿರ್ ಅವರೊಂದಿಗೆ ಆಗಿತ್ತು. 40 ರ ದಶಕದ ಮಧ್ಯಭಾಗದಲ್ಲಿ ಅವಳು ಅವನಿಂದ ಬೇರ್ಪಟ್ಟಳು ಮತ್ತು ಅಲ್ ನಾಸಿರ್ ನಟಿ ವೀಣಾಳನ್ನು ಮದುವೆಯಾದರು.

ಮೀನಾ ಅವರ ಮೂರನೇ ವಿವಾಹವು ರೂಪ್ ಕೆ ಶೋರೆಯವರೊಂದಿಗೆ 1956ರಲ್ಲಿ ನಡೆಯಿತು. ಮೀನಾ  ಅವರ ಜೀವನದುದ್ದಕ್ಕೂ  ತಮ್ಮ ಮೂರನೇ ಗಂಡನ ಹೆಸರಿನಿಂದಲೇ ಕರೆಯಲ್ಪಟ್ಟರು ಅದೇ ಮೀನಾ ಶೋರೆ. ಪಾಕಿಸ್ತಾನ ಪ್ರವಾಸ ಮುಗಿಸಿ ರೂಪ್ ಶೋರೆ ಭಾರತಕ್ಕೆ ಹಿಂದಿರುಗಿದಾಗ ಮೀನಾ ಪಾಕ್‌ನಲ್ಲಿಯೇ  ಉಳಿಯಲು ನಿರ್ಧರಿಸಿದಾಗ ದಂಪತಿಗಳು ಬೇರ್ಪಟ್ಟರು. 

ಮೀನಾ ಅವರ ನಾಲ್ಕನೇ ವಿವಾಹವು ಪಾಕಿಸ್ತಾನಿ ಚಲನಚಿತ್ರ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕ ರಾಝಾ ಮಿರ್ ಅವರೊಂದಿಗೆ ನಡೆಯಿತು. ಈ ಸಂಬಂಧವೂ ಹೆಚ್ಚು ದಿನ ಉಳಿಯಲಿಲ್ಲ ಅವರ ಐದನೇ ವಿವಾಹವು 'ಜಮಾಲೋ' ಅವರ ಸಹನಟ ಅಸದ್ ಬೊಖಾರಿ ಅವರೊಂದಿಗೆ ನಡೆಯಿತು. ಮೀನಾ ಅವರುವ ತಮ್ಮ ಮದುವೆಯಿಂದ ಇಬ್ಬರು ಪುತ್ರರು ಸೇರಿದಂತೆ ಮೂವರು ಮಕ್ಕಳಿದ್ದರು. ಬಳಿಕ ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆದಳು.

ಆರಂಭಿಕ ಸಿನಿ ಯಶಸ್ಸಿನ ರುಚಿ ಮತ್ತು ಭರವಸೆಯ ವೃತ್ತಿಜೀವನದ ಹೊರತಾಗಿಯೂ, ಮೀನಾ ಶೋರೆ ಅವರ ಅಂತಿಮ ದಿನಗಳಲ್ಲಿ, ಹಣವಿಲ್ಲದೆ ಪರದಾಡಿದರು. ವರದಿಗಳ ಪ್ರಕಾರ, 1974-75 ರಿಂದ ಒಂದು ದಶಕಕ್ಕೂ ಹೆಚ್ಚು ಕಾಲ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ನಂತರ, ಮೀನಾ ಫೆಬ್ರವರಿ 9, 1989 ರಂದು ಪಾಕಿಸ್ತಾನದಲ್ಲಿ ಕೊನೆಯುಸಿರೆಳೆದರು. 

ಅವರ ಕೊನೆಯ ಕ್ಷಣಗಳಲ್ಲಿ ಮೀನಾ ಅವರ ಐವರು ಗಂಡಂದಿರಲ್ಲಿ ಒಬ್ಬರೂ ಕೂಡ ಜೊತೆಯಲ್ಲಿರಲಿಲ್ಲ. ಪಾಕ್‌ನಲ್ಲಿ ನಟಿಯ ಮರಣದ ನಂತರ ಮಾಡಬೇಕಾದ ಎಲ್ಲಾ ವಿಧಿವಿಧಾನ ಅಂತ್ಯಕ್ರಿಯೆಗಳಿಗೆ  ದೇಣಿಗೆ ಸಂಗ್ರಹಿಸಲಾಯಿತು. 

Latest Videos

click me!