ಲಂಡನ್‌ನಲ್ಲಿ ಖ್ಯಾತ ನಟನ ಪುತ್ರಿ ಜೇಬಿಗೆ ಕನ್ನ, ಕಳ್ಳಿ ಬಗ್ಗೆ ಗೊತ್ತಾದ್ರೂ ಕ್ಯಾರೇ ಅನ್ನದ ಪೊಲೀಸರು!

First Published | Jan 6, 2024, 2:03 PM IST

 ಕಳ್ಳಿ ಎಲ್ಲಿದ್ದಾಳೆಂದು ಈಗಲೂ ಗೊತ್ತಾಗುತ್ತಿದೆ ಆದರೆ ಏನೂ ಮಾಡಲಾಗುತ್ತಿಲ್ಲ ಎಂದು ಬೇಸರದಲ್ಲಿ ವಿಡಿಯೋ ಮಾಡಿದ ಇಶಾನಿ. 

ಮಲಯಾಳಂ ಖ್ಯಾತ ನಟ ಕೃಷ್ಣ ಕುಮಾರ್ ಹೊಸ ವರ್ಷದ ಪ್ರಯುಕ್ತ ಕುಟುಂಬದ ಜೊತೆ ಸುಮಾರು 10 ದಿನಗಳಿಂದೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ.

ನಟಿ, ಮಾಡಲ್ ಮತ್ತು ಯುಟ್ಯೂಬರ್ ಅಗಿರುವ ಕೃಷ್ಣ ಕುಮಾರ್ ಅವರ ತೃತೀಯಾ ಪುತ್ರಿ ಇಶಾಗೆ ಕಳ್ಳತನವಾಗಿದೆ. ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

Tap to resize

ಫ್ಯಾಮಿಲಿ ಜೊತೆ ಸಿಕ್ಕಾಪಟ್ಟೆ ಶಾಪಿಂಗ್ ಮಾಡಿರುವ ಇಶಾನಿ ಕೈ ತುಂಬಾ ಶಾಪಿಂಗ್ ಬ್ಯಾಗ್ ಹಿಡಿದುಕೊಂಡಿದ್ದ ಕಾರಣ ಜೇಬಿನಲ್ಲಿ ಐ-ಪೋನ್ ಇಟ್ಟುಕೊಂಡಿದ್ದರು. 

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎದುರಿಗೆ ಒಂದ ಮಹಿಳೆ ಗುದ್ದಿದ್ದಾರೆ. ಜಾಗವಿಲ್ಲ ಹಾಗೆ ಆಗಿರಬೇಕು ಎಂದುಕೊಂಡು ಇಶಾನಿ ಸುಮ್ಮನಾಗಿದ್ದಾರೆ. ಸಮಯ ಕಳೆದ ನಂತರ ಫೋನ್‌ ಕಡೆ ಗಮನ ಕೊಡುತ್ತಾರೆ.

ಜೇಬಿನಲ್ಲಿ ಫೋನ್ ಕಾಣದ ತಕ್ಷಣ ಹುಡುಕಾಟ ಶುರು ಮಾಡುತ್ತಾರೆ. ಕಳ್ಳತನ ಆಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಅಲ್ಲಿ ಯೋಚನೆ ಮಾಡಲು ಶುರು ಮಾಡಿದಾಗ ಡಿಕ್ಕಿ ಹಿಡೆದು ಮಹಿಳೆ ನೆನಪಾಗುತ್ತಾರೆ.

ಸಂಪೂರ್ಣ ಘಟನೆಯನ್ನು ವಿಡಿಯೋದಲ್ಲಿ ವಿವರಿಸಿ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಮತ್ತೊಂದು ಫೋನ್‌ನಲ್ಲಿ  Find my Phone ಆಪ್‌ ಬಳಸಿ ಫೋನ್ ಉಡುಕಲು ಶುರು ಮಾಡಿದ್ದಾರೆ.

ತಮ್ಮ ಫೋನ್‌ ಎಲ್ಲೋ ಹತ್ತಿರದಲ್ಲಿ ಇದೆ ಎಂದು ಫಾಲೋ ಮಾಡಲು ಶುರು ಮಾಡುತ್ತಾರೆ ಆದರೆ ಇದ್ದಕ್ಕಿದ್ದಂತೆ ನಡುವಲ್ಲಿ ಪೊಲೀಸರು ತಡೆದು ವಾಪಸ್‌ ಕಳುಹಿಸುತ್ತಾರೆ.

ಈ ಕ್ಷಣದವರೆಗೂ ಫೋನ್ ಎಲ್ಲಿದೆ ಎಂದು ಕೃಷ್ಣ ಕುಮಾರ್ ಫ್ಯಾಮಿಲಿ ಮಂದಿ ನೋಡುತ್ತಿದ್ದಾರೆ ಆದರೆ ಪೊಲೀಸರು ಕ್ಯಾರೆ ಅನ್ನದೆ ಸುಮ್ಮನಿರುವುದು ಬೇಸರ ಎಂದಿದ್ದಾರೆ.

Latest Videos

click me!