ಸೌಂದರ್ಯವತಿಯಾಗಿದ್ದ ಶಾರುಖ್ ಖಾನ್‌ ಸಹೋದರಿ ಜೀವನಪೂರ್ತಿ ಹೀಗಿರಲು ಕಾರಣ ಆ ಒಂದು ದುರಂತ!

First Published Feb 6, 2024, 5:43 PM IST

ಬಾಲಿವುಡ್‌ ನಟ ಶಾರುಖ್ ಖಾನ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  ಅಭಿಮಾನಿಗಳಿಗೆ ಅವರ ಪತ್ನಿ ಗೌರಿ ಖಾನ್, ಪುತ್ರರಾದ ಆರ್ಯನ್ ಮತ್ತು ಅಬ್ರಾಮ್ ಮತ್ತು ಮಗಳು ಸುಹಾನಾ ಖಾನ್ ಸೇರಿದಂತೆ ಅವರ ಕುಟುಂಬದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಶಾರುಖ್ ಖಾನ್ ಸಹೋದರಿಯ ಬಗ್ಗೆ  ಎಷ್ಟು ಮಂದಿಗೆ ಗೊತ್ತು?

ಶಾರುಖ್ ಖಾನ್ ಅವರಿಗೆ ಒಬ್ಬ ಸಹೋದರಿ ಇದ್ದಾರೆ, ಅವರ ಹೆಸರು ಶಹನಾಜ್ ಲಾಲಾರುಖ್ ಖಾನ್. ಅವರಿಗೆ ಈಗ 64 ವರ್ಷವಾಗಿದೆ. ಆದರೆ ತಮ್ಮ ಯೌವನದಲ್ಲಿ ತುಂಬಾ ಸೌಂದರ್ಯವತಿಯಾಗಿದ್ದರು. ಆದರೆ ಬದುಕಿನಲ್ಲಿ ನಡೆದ ದುರಂತ ಆಕೆಯನ್ನು ನ್ಯೂನತೆಗಳಿಂದ ಬಳಲುವಂತೆ ಮಾಡಿತು.  ಹೆಚ್ಚಾಗಿ ಶಹನಾಜ್ ಅವರು ಸಾರ್ವಜನಿಕ ಜೀವನದಿಂದ ದೂರವಿದ್ದರೂ, ಅವರು SRK ಮತ್ತು ಗೌರಿಯ ಕುಟುಂಬದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ.  ಡ್ರಗ್ಸ್ ಪ್ರಕರಣದ ನಂತರ ಆರ್ಯನ್ ಖಾನ್ ಜೈಲಿನಿಂದ ಹೊರಬಂದಾಗಲೂ ಮನ್ನತ್‌ನಲ್ಲಿ ಅವರು ಫ್ಯಾಮಿಲಿ ಜೊತೆಗೆ ಕಂಡುಬಂದಿದ್ದರು.

ಬಾಲಿವುಡ್ ಐಕಾನ್ ಶಾರುಖ್ ಖಾನ್ ಅವರ ಸಹೋದರಿ ಶೆಹನಾಜ್ ಲಾಲಾರುಖ್ ಖಾನ್ ಅವರು ತಮ್ಮ ಪ್ರಸಿದ್ಧ ಸಹೋದರನಿಗಿಂತ ಸಂಪೂರ್ಣವಾಗಿ ಭಿನ್ನವಾಗಿವಾಗಿದ್ದಾರೆ.  ಅವರು ಕೆಲವು ನ್ಯೂನತೆಗಳಿಂದ ಬಳಲುತ್ತಿದ್ದಾರೆ. ಹಲವು ವರ್ಷಗಳಿಂದ ಡಿಪ್ರೆಶನ್‌ನಿಂದ ಬಳಲುತ್ತಿದ್ದಾರೆ. ಕಾರಣ ಅವರು ತಮ್ಮ ತಂದೆ  ಮೀರ್‌ ತಾಜ್ ಮಹಮ್ಮದ್ ಖಾನ್ ಅವರ ಪಾರ್ಥಿವ ಶರೀರವನ್ನು ನೋಡಿದ ಬಳಿಕ ಶಾಕ್‌ ನಿಂದ ಹೀಗಾಗಿದ್ದಾರಂತೆ. ಇದಾದ ಬಳಿಕ ಅವರು ಒಂದು ಬಾರಿ ಬಿದ್ದು ಪೆಟ್ಟು ಮಾಡಿಕೊಂಡು ತಲೆಗೆ ಗಂಭೀರವಾದ ಗಾಯ ಮಾಡಿಕೊಂಡಿದ್ದರು. ಬರೋಬ್ಬರಿ 2 ವರ್ಷಗಳ ಕಾಲ ಯಾರೊಂದಿಗೂ ಮಾತನಾಡುತ್ತಿರಲಿಲ್ಲವಂತೆ.

 ಸಹೋದರಿ ಬಗ್ಗೆ ಶಾರುಖ್ ಕೂಡ ಹೇಳಿಕೊಂಡಿದ್ದರು ನನ್ನ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ  ಶೂಟಿಂಗ್‌ ಸಮಯದಲ್ಲಿ, ಅವಳು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಳು ಮತ್ತು ಅವಳು ಬದುಕುವುದಿಲ್ಲ ಎಂದು ವೈದ್ಯರು ಹೇಳಿದರು. ನಾನು ಅವಳನ್ನು ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದು, ತುಜೆ ದೇಖಾ ತೋ ಯೆ ಜಾನಾ ಸನಮ್ ಶೂಟಿಂಗ್‌ನಲ್ಲಿದ್ದಾಗ ಆಕೆಗೆ ಚಿಕಿತ್ಸೆ ಕೊಡಿಸಿದೆ. ಆದರೆ ಅವಳು ತಂದೆಯನ್ನು ಕಳೆದುಕೊಂಡ ಶಾಕ್ ನಿಂದ ಅವರ ಹಠಾತ್ ನಿಧನದಿಂದ ಇನ್ನೂ ಚೇತರಿಸಿಕೊಂಡಿಲ್ಲ. ನಂತರ  ತಾಯಿಯು 10 ವರ್ಷಗಳ ನಂತರ ತೀರಿಕೊಂಡರು. ಇದು ಕೂಡ ಸೇರಿಕೊಂಡಿತು ಎಂದಿದ್ದಾರೆ.

ಅವಳು ಅಳಲಿಲ್ಲ, ಏನನ್ನೂ ಹೇಳಲಿಲ್ಲ, ಅವಳು ಬಿದ್ದು ನೆಲಕ್ಕೆ  ಆಕೆಯ ತಲೆ ಹೊಡೆಯಿತು. ಎರಡು ವರ್ಷ ಕಳೆದರೂ ಅವಳು ಅಳಲಿಲ್ಲ, ಅವಳು ಮಾತನಾಡಲಿಲ್ಲ, ಅವಳು ಆಕಾಶವನ್ನೇ ಮೌನವಾಗಿ ನೋಡುತ್ತಲೇ ಇದ್ದಳು. ಇದು ಅವಳ ಜಗತ್ತನ್ನು ಬದಲಿಸಿದೆ. ಈಗ ಅವಳು ಉತ್ತಮವಾಗಿದ್ದಾಳೆ ಆದರೆ ಅವಳು ಕೆಲವು ಕೊರತೆಗಳನ್ನು ಹೊಂದಿದ್ದಾಳೆ. - ಶಾರುಖ್‌ ಖಾನ್ 

ನಾನು ಹೇಗಾದರೂ ಇದರಿಂದ ಹೊರಬರಲು ಸುಳ್ಳು ಧೈರ್ಯವನ್ನು ನನ್ನಲ್ಲೇ ಅಭಿವೃದ್ಧಿಪಡಿಸಿಕೊಂಡೆ. ನನಗೆ ನಾನೇ ಧೈರ್ಯ ತೆಗೆದುಕೊಂಡೆ. ನಾನು ಸಾರ್ವಜನಿಕವಾಗಿ ಆಕೆಯನ್ನು ತೋರಿಸುತ್ತೇನೆ, ಹಾಸ್ಯದ ಪ್ರಜ್ಞೆ ಮತ್ತು ಜನರು ತುಂಬಾ ಅಬ್ಬರಿಸುವ ಮತ್ತು ಬಾಲಿವುಡ್‌ಲ್ಲಿರುವ ಬಹಳಷ್ಟು ಸಂಗತಿಗಳನ್ನು ನನ್ನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದುಃಖವನ್ನು ಮುಚ್ಚಿಡಲು ನಾನು ಹಾಗೆ ಆಗುತ್ತಿದ್ದೇನೆ. ಏಕೆಂದರೆ ಆಕೆ ನನ್ನ ಅಕ್ಕ.- ಶಾರುಖ್ ಖಾನ್ 

 ನಾನು ಹೇಗಾದರೂ ಇದರಿಂದ ಹೊರಬರಲು ಸುಳ್ಳು ಧೈರ್ಯವನ್ನು ನನ್ನಲ್ಲೇ ಅಭಿವೃದ್ಧಿಪಡಿಸಿಕೊಂಡೆ. ನನಗೆ ನಾನೇ ಧೈರ್ಯ ತೆಗೆದುಕೊಂಡೆ. ನಾನು ಸಾರ್ವಜನಿಕವಾಗಿ ಆಕೆಯನ್ನು ತೋರಿಸುತ್ತೇನೆ, ಹಾಸ್ಯದ ಪ್ರಜ್ಞೆ ಮತ್ತು ಜನರು ತುಂಬಾ ಅಬ್ಬರಿಸುವ ಮತ್ತು ಬಾಲಿವುಡ್‌ಲ್ಲಿರುವ ಬಹಳಷ್ಟು ಸಂಗತಿಗಳನ್ನು ನನ್ನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದುಃಖವನ್ನು ಮುಚ್ಚಿಡಲು ನಾನು ಹಾಗೆ ಆಗುತ್ತಿದ್ದೇನೆ. ಏಕೆಂದರೆ ಆಕೆ ನನ್ನ ಅಕ್ಕ.- ಶಾರುಖ್ ಖಾನ್

ಶಾರುಖ್ ಅವರಿಗೆ 15 ವರ್ಷ ವಯಸ್ಸಾಗಿತ್ತು, ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ (ಅವರ ಹೆಸರಿನಲ್ಲಿ ಖಾನ್  ತಮ್ಮ ಎನ್‌ಜಿಒ ಮೀರ್ ಫೌಂಡೇಶನ್ ತೆರೆದಿದ್ದಾರೆ) ಕ್ಯಾನ್ಸರ್ ನಿಂದಾಗಿ ನಿಧನರಾದರು. ಮಧುಮೇಹದ ತೊಂದರೆಗಳಿಂದ ಅವರು ತಮ್ಮ ತಾಯಿ ಲತೀಫ್ ಫಾತಿಮಾ ಖಾನ್ ಅವರನ್ನು ಕಳೆದುಕೊಂಡಾಗ ಅವರು 26 ವರ್ಷ ವಯಸ್ಸಿನವರಾಗಿದ್ದರು.  ತಾನು ದೆಹಲಿಗೆ ಹೋದಾಗಲೆಲ್ಲಾ ತಡರಾತ್ರಿಯಲ್ಲಿ ತನ್ನ ಹೆತ್ತವರ ಸಮಾಧಿಗೆ ಭೇಟಿ ನೀಡುತ್ತೇನೆ ಎಂದು ಶಾರುಖ್ ಈ ಹಿಂದೆ ಹೇಳಿದ್ದರು.

click me!