ಯಾವಾಗಲೂ ಶಾರುಖ್‌ ಅವರ ಜೊತೆ ಇರುವ ಮಹಿಳೆ ಯಾರು? ಇಬ್ಬರ ಬರ್ತ್‌ಡೇ ಕೂಡ ಒಂದೇ ದಿನ

Published : Nov 02, 2022, 04:42 PM ISTUpdated : Nov 02, 2022, 04:43 PM IST

ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan)  ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ನವೆಂಬರ್ 2 ರಂದು ಶಾರುಖ್ ಜೊತೆ ಯಾವಾಗಲೂ ಕಾಣಿಸಿಕೊಳ್ಳುವ  ಮಹಿಳೆಯ ಜನ್ಮದಿನವೂ ಆಗಿದೆ. ಶಾರುಖ್‌ ಜೊತೆ ಸದಾ ಇರುವ ಈ 39 ವರ್ಷದ ಮಹಿಳೆ ಯಾರು ಗೊತ್ತಾ? ಇಲ್ಲಿದೆ ಮಹಿಳೆಯ ಬಗ್ಗೆ ಸಂಪೂರ್ಣ ಮಾಹಿತಿ

PREV
17
ಯಾವಾಗಲೂ ಶಾರುಖ್‌ ಅವರ ಜೊತೆ ಇರುವ ಮಹಿಳೆ ಯಾರು? ಇಬ್ಬರ ಬರ್ತ್‌ಡೇ ಕೂಡ ಒಂದೇ ದಿನ

ಶಾರುಖ್ ಖಾನ್ ಜೊತೆ ನೆರಳಿನಂತೆ ಬದುಕುತ್ತಿರುವ ಈ ಮಹಿಳೆಯ ಹೆಸರು ಪೂಜಾ ದಾದ್ಲಾನಿ, 2 ನವೆಂಬರ್ 1983 ರಂದು ಮುಂಬೈನಲ್ಲಿ ಜನಿಸಿದ ಪೂಜಾ ಶಾರುಖ್ ಖಾನ್ ಅವರ ಮ್ಯಾನೇಜರ್ ಆಗಿದ್ದು, ಕಳೆದ 10 ವರ್ಷಗಳಿಂದ ಅವರ ಬಳಿ ಕೆಲಸ ಮಾಡುತ್ತಿದ್ದಾರೆ.  

27

2012 ರಿಂದ  ಶಾರುಖ್ ಖಾನ್ ಅವರ ಸಂಪರ್ಕದಲ್ಲಿರುವ  ಪೂಜಾ ಅವರು ಅಂದಿನಿಂದ ಇಲ್ಲಿಯವರೆಗೆ ಪ್ರತಿ ಸಂತೋಷ ಮತ್ತು ದುಃಖದ ಸಮಯದಲ್ಲಿ ಶಾರುಖ್‌
ಬೆಂಬಲಕ್ಕೆ ನಿಂತಿದ್ದಾರೆ.

37

ಪೂಜಾ ಶಾರುಖ್ ಖಾನ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದಲ್ಲದೆ, ಅವರು ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್, ಮಗ ಆರ್ಯನ್, ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಮ್ ಅವರೊಂದಿಗೆ ಬಹಳ ಸುಂದರವಾದ ಸಂಬಂಧವನ್ನು ಹಂಚಿಕೊಂಡಿದ್ದಾರೆ.

47

ಕಳೆದ ವರ್ಷ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾದಾಗ ಖಾನ್ ಕುಟುಂಬದ ಜೊತೆ  ಪೂಜಾ ಬಂಡೆಯಂತೆ ನಿಂತಿದ್ದರು. ಆರ್ಯನ್ ಕಸ್ಟಡಿಯಲ್ಲಿದ್ದಾಗ ಆತನನ್ನು ಭೇಟಿಯಾಗಲು ಪೂಜಾ ಹೋಗುತ್ತಿದ್ದರು ಮತ್ತು ಆತನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.


 

57

ಪೂಜಾ ಶಾರುಖ್ ಖಾನ್ ಅವರ ಸಿನಿಮಾ  ಮತ್ತು ಅನುಮೋದನೆ ಕಾರ್ಯವನ್ನು ನಿರ್ವಹಿಸುವುದು ಮಾತ್ರವಲ್ಲದೆ SRK ಅವರ IPL ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸಹ ನಿರ್ವಹಿಸುತ್ತಾರೆ.


 

67

ಪೂಜಾ ದದ್ಲಾನಿ ಬಾಲಿವುಡ್‌ನಲ್ಲಿ ಉತ್ತಮ  ಸಂಪರ್ಕ ಹೊಂದಿದ್ದಾರೆ ಅವರು ಕರಣ್ ಜೋಹರ್, ಫರಾ ಖಾನ್, ಅನುಷ್ಕಾ ಶರ್ಮಾ ಮತ್ತು ಜೂಹಿ ಚಾವ್ಲಾ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸ್ನೇಹ ಸಂಬಂಧವನ್ನು ಹಂಚಿಕೊಳ್ಳುವುದನ್ನು ಸಹ ಕಾಣಬಹುದು.


 

77

ಪೂಜಾ ಕುಟುಂಬದ ಬಗ್ಗೆ ಹೇಳುವುದಾದರೆ, ಅವರು ಮದುವೆಯಾಗಿದ್ದು, ಮಗಳ ತಾಯಿಯಾಗಿದ್ದಾರೆ. ಅವರು ದಿಯಾ ಮಿರ್ಜಾ ಅವರ ಎರಡನೇ ಪತಿ ಮತ್ತು ಉದ್ಯಮಿ ವೈಭವ್ ರೇಖಿಯ ಸಂಬಂಧಿ ಎಂದು ಹೇಳಲಾಗಿದೆ.

Read more Photos on
click me!

Recommended Stories