ಭಾರತದ ಶ್ರೀಮಂತ ಮಹಿಳಾ ಗಾಯಕಿ, ಶ್ರೇಯಾ ಘೋಷಾಲ್, ಸುನಿಧಿ, ನೇಹಾ ಕಕ್ಕರ್ ಇವರು ಯಾರೂ ಅಲ್ಲ!

ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್ ಮತ್ತು ನೇಹಾ ಕಕ್ಕರ್ ಅವರು ಈಗ ಭಾರತದ ಟಾಪ್ ಮಹಿಳಾ ಗಾಯಕರಾಗಿದ್ದಾರೆ. ಲೆಜೆಂಡರಿ ಆಶಾ ಭೋಸ್ಲೆ ಅವರು ದಶಕಗಳಿಂದ ಹಾಡುತ್ತಿದ್ದಾರೆ ಮತ್ತು ಅವರು ಭಾರತೀಯ ಸಂಗೀತ ಉದ್ಯಮದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಈ ಎಲ್ಲಾ ಗಾಯಕರು ಸಾಕಷ್ಟು ಹಣ ಮತ್ತು ಖ್ಯಾತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಭಾರತದ ಶ್ರೀಮಂತ ಮಹಿಳಾ ಗಾಯಕಿಯ ವಿಷಯಕ್ಕೆ ಬಂದರೆ, ಕಡಿಮೆ ಹೆಸರುವಾಸಿಯಾದರೂ ಯುವ ಗಾಯಕಿ ಸಂಭಾವನೆಯಲ್ಲಿ ಮತ್ತು ಆಸ್ತಿಯಲ್ಲಿ ಬೇರೆ ಮಹಿಳಾ ತಾರೆಗಳಿಗಿಂತ ಮುಂದಿದ್ದಾರೆ.

ಅವರೇ ಯುವ ಗಾಯಕಿ ತುಳಸಿ ಕುಮಾರ್ ಮತ್ತು ಅವರು 200 ಕೋಟಿ ರೂಪಾಯಿಗಳ ಅಂದಾಜು ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಶ್ರೀಮಂತ ಮಹಿಳಾ ಗಾಯಕಿಯಾಗಿದ್ದಾರೆ. ಮಾತ್ರವಲ್ಲ ಈಕೆ ಇನ್ನಷ್ಟೇ ಹೆಸರು ಮಾಡುತ್ತಿದ್ದಾರೆ.


ತುಳಸಿ ಕುಮಾರ್ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರ ಸಹೋದರಿ. ಅವರು ದಿವಂಗತ ಗಾಯಕ ಮತ್ತು ಟಿ-ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಪುತ್ರಿಯಾಗಿದ್ಧಾರೆ. ಅವರ ಸಹೋದರಿ ಕುಶಾಲಿ ಕುಮಾರ್ ನಟಿಯಾಗಿದ್ದಾರೆ. 

ತುಳಸಿ ಕುಮಾರ್ ಅವರ ನಿವ್ವಳ ಮೌಲ್ಯವು ಶ್ರೇಯಾ ಘೋಷಾಲ್, ಸುನಿಧಿ ಚೌಹಾನ್, ನೇಹಾ ಕಕ್ಕರ್ ಮುಂತಾದವರ ಒಟ್ಟು ಸಂಪತ್ತಿಗಿಂತ ಹೆಚ್ಚು ಎಂದು ವರದಿ ತಿಳಿಸಿದೆ.

ತುಳಸಿ ಕುಮಾರ್ ಅವರು 2009 ರಲ್ಲಿ 'ಲವ್ ಹೋ ಜಾಯೆ' ಆಲ್ಬಂನೊಂದಿಗೆ ತಮ್ಮ ಗಾಯನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಪಾಠಶಾಲಾ ಚಿತ್ರದ 'ಮುಜೆ ತೇರಿ', ಬಿಲ್ಲು ಚಿತ್ರದ 'ಲವ್ ಮೇರಾ ಹಿಟ್' ಮತ್ತು 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ'ನ 'ತುಮ್ ಜೋ ಆಯೆ' ಹಾಡುಗಳನ್ನು ಒಳಗೊಂಡಂತೆ ಅವರು ಅನೇಕ ಚಲನಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. 

33 ವರ್ಷದ ಗಾಯಕಿ ತುಳಸಿ ಕುಮಾರ್ 2015 ರಲ್ಲಿ  ಹಿತೇಶ್ ರಾಲ್ಹಾನ್ ಅವರನ್ನು  ವಿವಾಹವಾದರು. ಹಿತೇಶ್ ರಾಲ್ಹಾನ್ ಟಿ-ಸೀರೀಸ್ ಸ್ಟೇಜ್‌ವರ್ಕ್ಸ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ, ಇದು ಸಂಗೀತ, ನೃತ್ಯ, ನಟನೆ ಮತ್ತು ಇತರ ಪ್ರದರ್ಶನ ಕಲೆಗಳಲ್ಲಿ ತರಬೇತಿ ಮತ್ತು ಶಿಕ್ಷಣವನ್ನು ಒದಗಿಸುವ ಕಂಪನಿಯಾಗಿದೆ. 

ಶ್ರೇಯಾ ಘೋಷಾಲ್ ಅವರ ನಿವ್ವಳ ಮೌಲ್ಯ ಸುಮಾರು 180-185 ಕೋಟಿ ರೂ. ಸುನಿಧಿ ಚೌಹಾಣ್ 100 ಕೋಟಿ ರೂ.ಗೂ ಅಧಿಕ ಸಂಪತ್ತು ಹೊಂದಿದ್ದರೆ, ಆಶಾ ಭೋಂಸ್ಲೆ 80 ಕೋಟಿ ರೂ. ಸೆನ್ಸೇಷನಲ್‌ ಗಾಯಕಿ ನೇಹಾ ಕಕ್ಕರ್ ಸುಮಾರು 40 ಕೋಟಿ ರೂ.  ನಿವ್ವಳ ಮೌಲ್ಯ ಹೊಂದಿದ್ದಾರೆ. 
 

Latest Videos

click me!