ಸೂಪರ್‌ಸ್ಟಾರ್‌ ಜೊತೆ ಸಿನ್ಮಾ ಮಾಡಿದ ಸಹೋದರಿಯರು; ಒಬ್ಬಾಕೆ ಹೀರೋಯಿನ್‌ ಆದ್ಲು, ಇನ್ನೊಬ್ಬಾಕೆ ಸತ್ತೇ ಹೋದ್ಲು!

Published : Oct 15, 2023, 05:13 PM IST

ಆ ಇಬ್ಬರು ಸಹೋದರಿಯರು ಇಬ್ಬರು ಸೂಪರ್‌ಸ್ಟಾರ್‌ಗಳೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಒಬ್ಬರು ಸ್ಟಾರ್ ಆದರು, ಇನ್ನೊಬ್ಬರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು. ಅವರು ಯಾರೆಂದು ಗೊತ್ತಿದೆಯಾ?

PREV
18
ಸೂಪರ್‌ಸ್ಟಾರ್‌ ಜೊತೆ ಸಿನ್ಮಾ ಮಾಡಿದ ಸಹೋದರಿಯರು; ಒಬ್ಬಾಕೆ ಹೀರೋಯಿನ್‌ ಆದ್ಲು, ಇನ್ನೊಬ್ಬಾಕೆ ಸತ್ತೇ ಹೋದ್ಲು!

ಆ ಇಬ್ಬರು ಸಹೋದರಿಯರು ಇಬ್ಬರು ಸೂಪರ್‌ಸ್ಟಾರ್‌ಗಳೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಒಬ್ಬರು ಸ್ಟಾರ್ ಆದರು, ಇನ್ನೊಬ್ಬರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು. ಅವರು ಯಾರೆಂದು ಗೊತ್ತಿದೆಯಾ?

28

ಸಿನಿಮಾರಂಗ ಅಂದರೆ ಎಲ್ಲವೂ ಥಳುಕು-ಬಳುಕಿನ ಲೋಕ. ಇಲ್ಲಿ ಯಾರಿಗೆ, ಯಾವತ್ತೂ ಏನು ಆಗುತ್ತದೆಯೆಂದು ಹೇಳಲು ಸಾಧ್ಯವಿಲ್ಲ. ಕೆಲವರು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ಸೂಪರ್‌ಸ್ಟಾರ್ ಆದರೆ, ಇನ್ನು ಕೆಲವರು ಒಂದೆರಡು ಪಾತ್ರಗಳಿಗೆ ಸೀಮಿತವಾಗಿ ಕಣ್ಮರೆಯಾಗಿಬಿಡುತ್ತದೆ. ಸೂಪರ್‌ಸ್ಟಾರ್‌ ಜೊತೆ ಬಾಲಿವುಡ್‌ ಸಿನಿಮಾ ಮಾಡಿದ ಸಹೋದರಿಯರ ಕಥೆಯೂ ಹೀಗೆಯೇ ಆಗಿತ್ತು. 

38

ಒಬ್ಬಾಕೆ ಹೀರೋಯಿನ್‌ ಆದರೆ, ಇನ್ನೊಬ್ಬಾಕೆ ಸತ್ತೇ ಹೋದಳು. ಆ ಸಹೋದರಿಯರು ಮತ್ಯಾರೂ ಅಲ್ಲ. ಡಿಂಪಲ್ ಕಪಾಡಿಯಾ ಮತ್ತು ಸಿಂಪಲ್ ಕಪಾಡಿಯಾ. ಈ ಸುಂದರ ಹುಡುಗಿಯರು ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರಸಿದ್ಧರಾಗಿದ್ದರು. ಇಬ್ಬರೂ ಬಾಲಿವುಡ್‌ನಲ್ಲಿ ಕೆಲಸ ಮಾಡಿದರು.

48

ಆದರೆ ಒಬ್ಬರು ಸಾಕಷ್ಟು ಯಶಸ್ಸನ್ನು ಸಾಧಿಸಿದರೆ, ಇನ್ನೊಬ್ಬರು ನಟನೆಯನ್ನು ಇಷ್ಟಪಡಲಿಲ್ಲ. ಈ ಇಬ್ಬರು ಸಹೋದರಿಯರು ದೊಡ್ಡ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ರಿಷಿ ಕಪೂರ್ ಅವರೊಂದಿಗೆ ಕೆಲಸ ಮಾಡಿದ್ದಾರೆ.

58

ಡಿಂಪಲ್ ಕಪಾಡಿಯಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರನ್ನು ವಿವಾಹವಾದರು, ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಒಂಬತ್ತು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ಇಬ್ಬರೂ ಬೇರ್ಪಟ್ಟರು.

68

ಡಿಂಪಲ್ ಕಪಾಡಿಯಾ ಮೊದಲ ಬಾರಿಗೆ 'ಬಾಬಿ' ಚಿತ್ರದಲ್ಲಿ ರಿಷಿ ಕಪೂರ್ ಜೊತೆ ನಟಿಸಿದಳು. ಬಾಬಿ ಹಿಟ್ ಆದರು ಮತ್ತು ಡಿಂಪಲ್ ಕಪಾಡಿಯಾ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದರು. ಡಿಂಪಲ್ ಕಪಾಡಿಯಾ ಇನ್ನೂ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

78

ಮತ್ತೊಂದೆಡೆ, ಸಿಂಪಲ್ ಕಪಾಡಿಯಾ 1977ರಲ್ಲಿ ಅನುರೋಧ್ ಚಿತ್ರದೊಂದಿಗೆ ರಾಜೇಶ್ ಖನ್ನಾ ಅವರ ಜೊತೆ  ನಟನೆಗೆ ಪಾದಾರ್ಪಣೆ ಮಾಡಿದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತು.

88

ಸಿಂಪಲ್ ಕಪಾಡಿಯಾ ತನ್ನ ಸಿನಿಮಾ ಕೆರಿಯರ್‌ನಲ್ಲಿ ಫೈಲ್ಯೂರ್ ಆದರು. ನಟಿಯಾಗಿ ವಿಫಲವಾದ ನಂತರ, ಸಿಂಪಲ್ ಕಪಾಡಿಯಾ ಫ್ಯಾಷನ್ ಡಿಸೈನರ್ ಆಗಿ ಯಶಸ್ಸನ್ನು ಕಂಡರು. ಆದರೆ ಕ್ಯಾನ್ಸರ್ ನಿಂದ ನವೆಂಬರ್ 10, 2009 ರಂದು ನಿಧನರಾದರು.

Read more Photos on
click me!

Recommended Stories