ಜದ್ದನ್ಬಾಯಿ ಮಗಳು ನರ್ಗೀಸ್ ಅವರು ಸುನಿಲ್ ದತ್ ಅವರನ್ನು ಮದುವೆಯಾದರು. ಅವರಿಗೆ ಪ್ರಿಯಾ, ನಮ್ರತಾ ಮತ್ತು ಸಂಜಯ್ ದತ್ ಹುಟ್ಟಿದರು. ಹೀಗಾಗಿ ಜದ್ದನ್ಬಾಯಿ ಈ ಮೂವರು ಮಕ್ಕಳಿಗೆ ಅಜ್ಜಿಯಾದರು. ಜದ್ದನಬಾಯಿ ಅವರು ಏಪ್ರಿಲ್ 8, 1949 ರಂದು ನಿಧನರಾದರು. ಭಾರತೀಯ ಚಿತ್ರರಂಗದ ಶ್ರೇಷ್ಠ ಹಾಡುಗಾರ್ತಿಯ ಗೌರವಾರ್ಥವಾಗಿ, ಚಲನಚಿತ್ರಗಳ ಚಿತ್ರೀಕರಣವನ್ನು ರದ್ದುಗೊಳಿಸಲಾಯಿತು ಮತ್ತು ಸ್ಟುಡಿಯೋಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಲಾಯಿತು.