ತೃಪ್ತಿ ದಿಮ್ರಿಗಿಂತಲೂ ಬೋಲ್ಡ್‌, 90ರ ದಶಕದಲ್ಲೇ ಇಂಟಿಮೇಟ್‌ ಸೀನ್‌ನಲ್ಲಿ ನಟಿಸಿ ವಿವಾದಕ್ಕೀಡಾಗಿದ್ದ ನಟಿ!

Published : Dec 29, 2023, 12:29 PM IST

ಇವತ್ತಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹಲವು ನಟಿಯರು ಬೋಲ್ಡ್ ಆಗಿ, ಇಂಟಿಮೇಟ್‌ ಸೀನ್‌ನಲ್ಲಿ ನಟಿಸುತ್ತಾರೆ. ಅದರಲ್ಲೂ ಇತ್ತೀಚಿನ ಬ್ಲಾಕ್‌ಬಸ್ಟರ್‌ ಸಿನಿಮಾ 'ಅನಿಮಲ್‌'ನಲ್ಲಿ ತೃಪ್ತಿ ದಿಮ್ರಿ ಬೆತ್ತಲಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಆದರೆ ಇದಕ್ಕಿಂತಲೂ ಮೊದಲು 80-90ರ ದಶಕದಲ್ಲಿ ನಟಿಯೊಬ್ಬರು ಇದಕ್ಕಿಂತಲೂ ಇಂಟಿಮೇಟ್ ಸೀನ್‌ನಲ್ಲಿ ನಟಿಸಿ ವಿವಾದಕ್ಕೀಡಾಗಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

PREV
18
ತೃಪ್ತಿ ದಿಮ್ರಿಗಿಂತಲೂ ಬೋಲ್ಡ್‌, 90ರ ದಶಕದಲ್ಲೇ ಇಂಟಿಮೇಟ್‌ ಸೀನ್‌ನಲ್ಲಿ ನಟಿಸಿ ವಿವಾದಕ್ಕೀಡಾಗಿದ್ದ ನಟಿ!

ಇವತ್ತಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹಲವು ನಟ-ನಟಿಯರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಇಂಥಾ ಸಮಯದಲ್ಲಿ ಬಾಲಿವುಡ್‌ನಲ್ಲಿ ಜಸ್ಟ್ ಒಂದು ಸೀನ್‌ಗಾಗಿ 1 ಕೋಟಿ ತೆಗೆದುಕೊಂಡ ನಟಿಯೊಬ್ಬರಿದ್ದಾರೆ. ಆಕೆ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಯನತಾರಾ ಇವರ್ಯಾರೂ ಅಲ್ಲ.

28

80-90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಜನಪ್ರಿಯವಾಗಿದ್ದವು. ಆ ಸಮಯದಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ವಿವಾದಗಳು ನಡೆದಿದ್ದವು. ಮಾಧುರಿ ದೀಕ್ಷಿತ್ ಮತ್ತು ವಿನೋದ್ ಖನ್ನಾ ನಡುವಿನ ಚುಂಬನದ ದೃಶ್ಯವು ಹೆಚ್ಚು ಚರ್ಚೆಯಾಗಿತ್ತು.

38

ಇಂದಿಗೂ ಆ ದೃಶ್ಯದ ಸುತ್ತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಚಿತ್ರದಲ್ಲಿ ಒಂದು ಸೀನ್‌ಗಾಗಿ ಮಾಧುರಿ ದೀಕ್ಷಿತ್ ತೆಗೆದುಕೊಂಡ ಸಂಭಾವನೆಯ ಮೊತ್ತ ಅತಿ ಹೆಚ್ಚು ಎಂದು ಪರಿಗಣಿಸಲ್ಪಟ್ಟಿದೆ.

48

1988ರಲ್ಲಿ 'ದಯಾವನ್' ಚಿತ್ರ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್, ಫಿರೋಜ್ ಖಾನ್, ಅಮರೀಶ್ ಪುರಿ ಮತ್ತು ವಿನೋದ್ ಖನ್ನಾ ಸೇರಿದಂತೆ ಅನೇಕ ಹಿರಿಯ ನಟರು ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಒಂದು ದೃಶ್ಯಕ್ಕೆ ಸಾಕಷ್ಟು ಗಲಾಟೆ ನಡೆದಿತ್ತು.

58

ಮಾಧ್ಯಮ ವರದಿಗಳ ಪ್ರಕಾರ, ಮಾಧುರಿ ದೀಕ್ಷಿತ್ ಅವರು ವಿನೋದ್ ಖನ್ನಾ ಅವರೊಂದಿಗೆ ಚುಂಬನ ಮತ್ತು ಇಂಟಿಮೇಟ್ ದೃಶ್ಯಗಳನ್ನು ಮಾಡುತ್ತಿರುವ ಈ ದೃಶ್ಯಕ್ಕಾಗಿ ಉತ್ತಮ ಸಂಭಾವನೆ ಪಡೆದಿದ್ದಾರೆ.

68

ಮಾಧುರಿ ದೀಕ್ಷಿತ್ ಅವರು ವಿನೋದ್ ಖನ್ನಾ ಅವರೊಂದಿಗೆ ಚುಂಬನ ಮತ್ತು ಇಂಟಿಮೇಟ್ ದೃಶ್ಯಗಳನ್ನು ಮಾಡಲು 1 ಕೋಟಿ ರೂ. ಪಡೆದಿದ್ದಾರೆ ಎಂದು ತಿಳಿದುಬಂದಿದೆ.

78

ಆ ಸಮಯದಲ್ಲೂ ಚಿತ್ರದಿಂದ ಈ ದೃಶ್ಯವನ್ನು ಕಟ್‌ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ ನಿರ್ದೇಶಕ ಫಿರೋಜ್ ಖಾನ್ ಇದಕ್ಕೆ ನಿರಾಕರಿಸಿದರು.

88

ಆದರೆ ಇವೆಲ್ಲಾ ಅಲ್ಲದೆಯೂ ಮಾಧುರಿ ದೀಕ್ಷಿತ್ ಹಣಕ್ಕಾಗಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯೊಂದಿಗೆ ಇಂತಹ ರೋಮ್ಯಾಂಟಿಕ್ ದೃಶ್ಯವನ್ನು ಮಾಡಿದ್ದಕ್ಕಾಗಿ ಎಲ್ಲರಿಂದಲೂ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಮಾಧುರಿ ತನ್ನ ವೃತ್ತಿಜೀವನದ ಈ ಹಂತದಲ್ಲಿ ಕಠಿಣ ಸಮಯವನ್ನು ಎದುರಿಸಿದ್ದರು.

Read more Photos on
click me!

Recommended Stories