ಟೀನಾ ಅಂಬಾನಿಯ ಒಡಹುಟ್ಟಿದಾಕೆ ಮತ್ತು ಅವಳಿ ಜವಳಿ ಸಹೋದರಿಯರ ಬಗ್ಗೆ ಗೊತ್ತೇ?

First Published | Apr 12, 2024, 7:14 PM IST

ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಅಂಬಾನಿ ಕುಟುಂಬವು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇಂದು ನಾವು ಮುಖೇಶ್ ಅಂಬಾನಿ ಅವರ ಅತ್ತಿಗೆ ಟೀನಾ ಅಂಬಾನಿ ಅವರ ಸಹೋದರಿ ಭಾವನಾ ಮೋತಿವಾಲಾ ಮತ್ತು ಇಬ್ಬರು ಅವಳಿ ಜವಳಿ ಸಹೋದರಿಯರ ಬಗ್ಗೆ   ಹೇಳುತ್ತೇವೆ.

ಭಾರತದ ಮಾಜಿ ನಟಿ ಟೀನಾ ಅಂಬಾನಿ ಅವರು ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಅವರನ್ನು ವಿವಾಹವಾಗಿದ್ದಾರೆ. ಅಂಬಾನಿ ಕುಟುಂಬದಲ್ಲಿ ಮದುವೆಯಾದ ನಂತರ ಟೀನಾ ಅಂಬಾನಿ ಚಿತ್ರರಂಗವನ್ನು ತೊರೆದರು, ಅವರ ಒಡಹುಟ್ಟಿದವರ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಟೀನಾ ತಂಗಿಗೂ ಚಿತ್ರರಂಗಕ್ಕೂ ನಂಟಿದೆ. ಜೊತೆಗೆ ಅವರಿಗೆ ಇಬ್ಬರು ಅವಳಿ ಜವಳಿ ಸಹೋದರಿಯರಿದ್ದಾರೆ.

ಭಾವನಾ ಮೋತಿವಾಲಾ (ಈ ಮುಂಚೆ ಭಾವನಾ ಮುನಿಮ್) ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿ ಮತ್ತು ರಾಕಿ (1981), ಸೌತೇನ್ (1983), ಮತ್ತು ಆಖಿರ್ ಕ್ಯೋಂ (1985) ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಭಾವನಾ ಮೋತಿವಾಲಾ ಅವರು ತುಷಾರ್ ಮೋತಿವಾಲಾ ಅವರನ್ನು ವಿವಾಹವಾಗಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅಂತರಾ ಮೋತಿವಾಲಾ ಎಂಬ ಮಗಳು ಮತ್ತು ಕರಣ್ ಮೋತಿವಾಲಾ ಎಂಬ ಮಗ.

Tap to resize

ಭಾವನಾ ಮೋತಿವಾಲಾ ಅವರ ಮಗಳು ಅಂತರಾ ಮೋತಿವಾಲಾ ಅನಿಲ್ ಕಪೂರ್ ಅವರ ಸೋದರಳಿಯ ಮೋಹಿತ್ ಮರ್ವಾ ಅವರನ್ನು ಮದುವೆಯಾಗಿದ್ದಾರೆ ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಟೀನಾ ಅಂಬಾನಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಹೋದರಿಯರ ಬಗ್ಗೆ ಪೋಸ್ಟ್ ಮಾಡುತ್ತಾರೆ. ಟೀನಾ ಅಂಬಾನಿ ಅವರ ಇಬ್ಬರು ಸಹೋದರಿಯರು ಅವಳಿ ಮಕ್ಕಳಾಗಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಅವರ ಹೆಸರು ಜಗ್ರುಬೆನ್ ಮತ್ತು ಹರಿನಾಬೆನ್.

ಅಂತಾರಾ ಅವರು ಚಲನಚಿತ್ರೋದ್ಯಮದಲ್ಲಿ  ಗುರುತಿಸಿಕೊಂಡಿದ್ದಾರೆ. ಮತ್ತು ಈ ಹಿಂದೆ GQ ಗೆ ಫ್ಯಾಷನ್ ಸಂಪಾದಕರಾಗಿದ್ದರು. ಅವರು ಈಗ ಫ್ಯಾಷನ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
 

Tina Ambani sister

ಟೀನಾ ಅಂಬಾನಿ 90 ರ ದಶಕದಲ್ಲಿ ಪ್ರಸಿದ್ಧ ಬಾಲಿವುಡ್ ನಟಿ.   1991 ರಲ್ಲಿ ಅನಿಲ್ ಅಂಬಾನಿಯೊಂದಿಗೆ ಮಾದುವೆಯಾದ ನಂತರ   ಅಂಬಾನಿ ಕುಟುಂಬದ ಕಿರಿ ಸೊಸೆಯಾದರು. ಈಗ ಟೀನಾ ಜೈ ಅನ್ಮೋಲ್ ಅಂಬಾನಿ ಮತ್ತು ಜೈ ಅನ್ಶುಲ್ ಅಂಬಾನಿ ಎಂಬ ಇಬ್ಬರು ಮಕ್ಕಳ ತಾಯಿಯಾಗಿ ತಮ್ಮ ಪಾತ್ರವನ್ನು ಆನಂದಿಸುತ್ತಿದ್ದಾರೆ. 2022 ರಲ್ಲಿ, ಟೀನಾ ಅಂಬಾನಿ ಅವರ ಮೊದಲ ಮಗ ಅನ್ಮೋಲ್ ಅಂಬಾನಿ ಕೃಷ್ಣ ಶಾ ಅವರನ್ನು ವಿವಾಹವಾದರು.

Latest Videos

click me!