ಮಾರ್ಡನ್ ಡ್ರೆಸ್‌ನಲ್ಲಿ ಮುದ್ದಾದ ನಗೆ ಬೀರಿದ ಕೂರ್ಗ್​ ಚೆಲುವೆ: ಇವರಿಗೆ ಹೋಲುತ್ತೆ ರಶ್ಮಿಕಾ ಹೇರ್​ಸ್ಟೈಲ್!

Published : Apr 11, 2024, 09:39 PM IST

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಬಳಿಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡದ ಸೂಪರ್ ಸ್ಟಾರ್‌ಗಳ ಜೊತೆಗೆ ನಟಿಸಿರುವ ಅವರು ಕೆಲವೇ ವರ್ಷಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.  

PREV
18
ಮಾರ್ಡನ್ ಡ್ರೆಸ್‌ನಲ್ಲಿ ಮುದ್ದಾದ ನಗೆ ಬೀರಿದ ಕೂರ್ಗ್​ ಚೆಲುವೆ: ಇವರಿಗೆ ಹೋಲುತ್ತೆ ರಶ್ಮಿಕಾ ಹೇರ್​ಸ್ಟೈಲ್!

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವುದು ಗೊತ್ತೇ ಇದೆ. ಇದರ ನಡುವೆ ನಟಿ ಸದ್ಯ ಕ್ಯೂಟ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

28

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಇನ್ಸ್ಟಾದಲ್ಲಿ ಚೆಂದದ ಫೋಟೋ ಶೇರ್ ಮಾಡಿದ್ದು, ಮಾರ್ಡನ್ ಡ್ರೆಸ್‌, ಹೊಸ​ ಹೇರ್​ಸ್ಟೈಲ್ ಹಾಗೂ ಕ್ಯೂಟ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ. 

38

ನಟಿ ರಶ್ಮಿಕಾ ಮಂದಣ್ಣ ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಪ್ರಯೋಗ ಮಾಡಿಸಿದ್ದಾರೆ. ಶಾರ್ಟ್ ಹೇರ್‌ನಲ್ಲಿ ಇನ್ನು ಮುದ್ದಾಗಿ ಕಾಣುತ್ತಿರುವ ಅವರು ಮಾರ್ಡನ್ ಡ್ರೆಸ್‌ನಲ್ಲಿ ಬಾಸ್ ಲೇಡಿಯ ಹಾಗೆ ಫೋಟೋಗಳಿಗೆ ಫೋಸ್ ನೀಡಿದ್ದಾರೆ.

48

ಸದ್ಯ ರಶ್ಮಿಕಾ ಮಂದಣ್ಣ ಅವರ ಹೊಸ ಹೇರ್​ಸ್ಟೈಲ್ ನೋಡಿದ ನೆಟ್ಟಿಗರು, ನಿಮ್ಮ ಹೊಸ ಹೇರ್​ಸ್ಟೈಲ್ ನಿಮ್ ತಾಯಿ ತರಹ ಇದೆ, ಜೊತೆಗೆ ಕ್ರಶ್ಮಿಕಾ, ಸೂಪರ್ ಸ್ಮೈಲ್, ಸೋ ಬ್ಯೂಟಿಫುಲ್ ಅಂತೆಲ್ಲಾ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

58

ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆಗಿನ ಕೊನೆಯ ಚಿತ್ರ 'ಅನಿಮಲ್' ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕ್ರಂಚೈರೋಲ್ ಅನಿಮೆ ಅವಾರ್ಡ್ಸ್‌ನಲ್ಲಿ ಭಾಗವಹಿಸಲು ಜಪಾನ್‌ನ ಟೋಕಿಯೊಗೆ ಭೇಟಿ ನೀಡಿದ್ದರು.

68

ಕನ್ನಡದ ಈ ಚೆಲುವೆ ರಶ್ಮಿಕಾ ಇತ್ತೀಚೆಗೆ ಫೋರ್ಬ್ಸ್ ಇಂಡಿಯಾ ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2024ರ ಯಂಗ್ ಡಿಸ್ರಪ್ಟರ್ಸ್ ಮತ್ತು ಟ್ರೈಲ್ಬ್ಲೇಜರ್ಸ್ ವಿಭಾಗದಲ್ಲಿ ರಶ್ಮಿಕಾ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ಇಂಡಿಯಾ ಪ್ರಕಟಿಸಿತ್ತು.

78

ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಕೈ ತುಂಬಾ ಸಿನಿಮಾಗಳಿವೆ. ಪುಷ್ಪಾ ದಿ ರೂಲ್ ಜೊತೆಗೆ ಲೇಡಿ ಸೆಂಟ್ರಿಕ್ ಸಿನಿಮಾ ರೇನ್ಬೋದಲ್ಲಿ ಶೂಟಿಂಗ್ ಕೆಲಸ ಕೂಡ ಮಾಡುತ್ತಿದ್ದಾರೆ. 

88

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಬಳಿಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡದ ಸೂಪರ್ ಸ್ಟಾರ್‌ಗಳ ಜೊತೆಗೆ ನಟಿಸಿರುವ ಅವರು ಕೆಲವೇ ವರ್ಷಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದವರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories