ಸಲ್ಮಾನ್‌ ಖಾನ್‌ಗಿಂತ 5 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದ ಈ ರಾಜಮನೆತನದ ನಟಿ ಪ್ರೀತಿಗಾಗಿ ಎಲ್ಲ ತೊರೆದ್ರು!

First Published | Mar 11, 2024, 10:33 AM IST

ರಾಜಮನೆತನದಿಂದ ಬಂದ ಈ ನಟಿ, ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಸಲ್ಮಾನ್‌ಖಾನ್‌ಗಿಂತ 5 ಪಟ್ಟು ಸಂಭಾವನೆ ಪಡೆದಿದ್ದರು. ಆದರೂ, ಪ್ರೀತಿಗಾಗಿ ತಮ್ಮ ಮನೆತನ, ಬಾಲಿವುಡ್‌ನಲ್ಲಿ ಗಳಿಸಿದ ಹೆಸರು ಎಲ್ಲವನ್ನೂ ತೊರೆದ್ರು.

ಈಕೆ ನಟಿಸಿದ ಮೊದಲ ಚಿತ್ರವೇ ಸೂಪರ್ ಡೂಪರ್ ಹಿಟ್. ಖ್ಯಾತ ನಟ ಸಲ್ಮಾನ್ ಖಾನ್ ಎದುರು ನಾಯಕಿಯಾಗಿ ನಟಿಸಿ, ಸಲ್ಲುಗಿಂತ 5 ಪಟ್ಟು ಹೆಚ್ಚು ಸಂಭಾವನೆ ಪಡೆದು, ಚಿತ್ರದ ಸಂಪೂರ್ಣ ಗೆಲುವಿನ ಕ್ರೆಡಿಟ್ ಕೂಡಾ ಪಡೆದ್ರು.
 

ಆದರೆ, ಕಡೆಗೆ, ಪ್ರೀತಿಸಿದವನಿಗಾಗಿ ಚಿತ್ರರಂಗದಿಂದ ದೂರಾದ್ರು. ಅಷ್ಟೇ ಏಕೆ, ತಮ್ಮ ರಾಜಮನೆತನದಿಂದನೂ ದೂರಾದ್ರು. ಕಡೆಗೆ ಮದುವೆಯಾಗಿ ಮತ್ತೆ ನಟನೆಗೆ ಮರಳುವ ಮನಸ್ಸು ಮಾಡಿದರಾದ್ರೂ ಜನ ಆಕೆಯನ್ನು ಮೊದಲಿನಂತೆ ಸ್ವೀಕರಿಸಲಿಲ್ಲ. ಯಾರೀ ನಟಿ?

Tap to resize

ನಾವು ಹೇಳುತ್ತಿರುವುದು 'ಮೈನೆ ಪ್ಯಾರ್ ಕಿಯಾ'ದಿಂದ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಚೆಂದದ ನಟಿ ಭಾಗ್ಯಶೀ ಬಗ್ಗೆ. 

 ಮಹಾರಾಷ್ಟ್ರದ ಸಾಂಗ್ಲಿಯ ರಾಜಮನೆತನದಿಂದ ಬಂದ ಭಾಗ್ಯಶ್ರೀ, ಸಾಂಗ್ಲಿಯ ನಾಲ್ಕನೇ ಮತ್ತು ಕೊನೆಯ ರಾಜ ಮಹಾರಾಜ ವಿಜಯಸಿಂಗ್ರಾಜೆ ಪಟವರ್ಧನ್ ಅವರ ಪತ್ನಿ ಶ್ರೀಮಂತ್ ಅಖಂಡ ಸೌಭಾಗ್ಯವತಿ ರಾಣಿ ರಾಜ್ಯಲಕ್ಷ್ಮಿ ಪಟವರ್ಧನ್ ಅವರ ಪುತ್ರಿ. 

ಅವರು ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್ ಖಾನ್ ಜೊತೆಗೆ  ಬಾಲಿವುಡ್ ಪ್ರವೇಶ ಮಾಡಿದರು. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ 31000 ರೂ ಸಂಭಾವನೆ ಪಡೆದಿದ್ದಾರೆ.
 

ಆದರೆ, ಚೊಚ್ಚಲ ನಟಿ ಭಾಗ್ಯಶ್ರೀ ಅವರು ಚಿತ್ರಕ್ಕೆ 1.5 ಲಕ್ಷ ರೂಪಾಯಿಗಳನ್ನು ವಿಧಿಸಿದ್ದಾರೆ, ಇದು ನಟನ ಶುಲ್ಕಕ್ಕಿಂತ 5 ಪಟ್ಟು ಹೆಚ್ಚು. ಅಷ್ಟೇ ಅಲ್ಲ, ಈ ನಟಿಯ ಕಾರಣದಿಂದ ಸಿನಿಮಾದ ನಂತರ ಆರು ತಿಂಗಳ ಕಾಲ ‘ನಿರುದ್ಯೋಗಿ’ಯಾಗಿದ್ದೆ ಎಂದು ಸಂದರ್ಶನವೊಂದರಲ್ಲಿ ಸಲ್ಮಾನ್ ಬಹಿರಂಗಪಡಿಸಿದ್ದಾರೆ.

ಹೌದು, ಇದಕ್ಕೆ ಕಾರಣ ಮೈನೆ ಪ್ಯಾರ್ ಕಿಯಾದ ಸಂಪೂರ್ಣಗೆಲುವಿನ ಕ್ರೆಡಿಟ್ ಭಾಗ್ಯಶ್ರೀ ಪಾಲಿಗೆ ಹೋಗಿದ್ದು. ಈ ಬಗ್ಗೆ ಸಲ್ಮಾನ್, ಐಐಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ಬಹಿರಂಗಪಡಿಸಿದ್ದಾರೆ. 

ಅವರು ತಾವು ಪ್ರೀತಿಸಿದವನನ್ನು ಮದುವೆಯಾಗಲು ಬಯಸಿದ್ದರಿಂದ ಚಲನಚಿತ್ರಗಳನ್ನು ತ್ಯಜಿಸಿದರು. ಈಕೆ ಹಿಮಾಲಯ ಎಂಬಾತನನ್ನು ವಿವಾಹವಾಗಲು ತಮ್ಮೆಲ್ಲ ಐಷಾರಾಮಿತನಗಳನ್ನು ತೊರೆದಿದ್ದರು. 
 

ಏಕೆಂದರೆ ಭಾಗ್ಯಶ್ರೀ ಮದುವೆಗೆ ಮನೆಯವರ ವಿರೋಧ ಜೋರಿತ್ತು. ಆಗ ಕಠಿಣ ನಿರ್ಧಾರ ತೆಗೆದುಕೊಂಡ ಭಾಗ್ಯ, 'ನೀನು ನನ್ನನ್ನು ಪ್ರೀತಿಸುವುದೇ ಹೌದಾದರೆ ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. ನಾನು ಮನೆಯಿಂದ ಹೊರಡಲಿದ್ದೇನೆ' ಎಂದು ಪ್ರಿಯಕರನಿಗೆ ಹೇಳಿ ಕಳುಹಿಸಿದರು.
 

ಅದಾಗಿ 15 ನಿಮಿಷಗಳಲ್ಲಿ ಅವರ ಮನೆಗೆ ಬಂದ ಹಿಮಾಲಯ, ಭಾಗ್ಯಶ್ರೀಯನ್ನು ಕರೆದುಕೊಂಡು ಹೋದರು. ಮತ್ತು ಹಿಮಾಲಯ ಅವರ ಪೋಷಕರು, ಸಲ್ಮಾನ್ ಖಾನ್, ಸೂರಜ್ ಬರ್ಜಾತ್ಯಾ ಮತ್ತು ಕೆಲವು ಸ್ನೇಹಿತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಭಾಗ್ಯಶ್ರೀ ಜೊತೆ ಮದುವೆಯಾದರು. 

ಮೈನೆ ಪ್ಯಾರ್ ಕಿಯಾ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದರೂ, ಭಾಗ್ಯಶ್ರೀ ತನ್ನ ಪತಿ ಮತ್ತು ಕುಟುಂಬದ ಪ್ರೀತಿಗಾಗಿ ಚಲನಚಿತ್ರಗಳನ್ನು ತ್ಯಜಿಸಲು ನಿರ್ಧರಿಸಿದರು. ಅವರು 1992ರಲ್ಲಿ ಖೈದ್ ಮೇ ಹೈ ಬುಲ್ಬುಲ್, ತ್ಯಾಗಿ ಮತ್ತು ಪಾಯಲ್ ಮುಂತಾದ ಚಲನಚಿತ್ರಗಳೊಂದಿಗೆ ನಟನೆಗೆ ಮರಳಿದರು.

ಆದಾಗ್ಯೂ, ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದವು. ಹಿಮಾಲಯ ಮತ್ತು ಭಾಗ್ಯಶ್ರೀ ಮದುವೆಯಾಗಿ 30 ವರ್ಷಗಳು ಕಳೆದಿವೆ ಮತ್ತು ಅವರಿಗೆ ಅಭಿಮನ್ಯು ದಸ್ಸಾನಿ ಮತ್ತು ಮಗಳು ಆವಂತಿಕಾ ದಸ್ಸಾನಿ ಇದ್ದಾರೆ.

Latest Videos

click me!