ಹನಿಮೂನ್‌ನಲ್ಲೇ ಗೆಳೆಯರೊಂದಿಗೆ ಮಲಗಲು ಒತ್ತಾಯಿಸಿದ್ದ ಪತಿ; ದಾಂಪತ್ಯದಲ್ಲಿ ನರಕವನ್ನೇ ನೋಡಿದ್ರು ಈ ಖ್ಯಾತ ಬಾಲಿವುಡ್ ನಟಿ

Published : Mar 10, 2024, 04:13 PM IST

ಎಷ್ಟೇ ಪ್ರಖ್ಯಾತಿ, ಶ್ರೀಮಂತಿಕೆ ಇದ್ದರೂ, ಹೆಸರಾಂತ ಕುಟುಂಬವಿದ್ದರೂ ದಾಂಪತ್ಯ ಜೀವನದ ಸಂತೋಷವನ್ನು ಅದರಿಂದ ಪಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಕರೀಷ್ಮಾ ಕಪೂರ್ ಉತ್ತಮ ಉದಾಹರಣೆ.   

PREV
111
ಹನಿಮೂನ್‌ನಲ್ಲೇ ಗೆಳೆಯರೊಂದಿಗೆ ಮಲಗಲು ಒತ್ತಾಯಿಸಿದ್ದ ಪತಿ; ದಾಂಪತ್ಯದಲ್ಲಿ ನರಕವನ್ನೇ ನೋಡಿದ್ರು ಈ ಖ್ಯಾತ ಬಾಲಿವುಡ್ ನಟಿ

ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಬಹಳ ವರ್ಷಗಳ ಬಳಿಕ ಮರ್ಡರ್ ಮುಬಾರಕ್ ಚಿತ್ರದೊಂದಿಗೆ ಸಿನಿಮಾಗೆ ಮರಳಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿದ್ದ ಕರೀಷ್ಮಾ ಕಪೂರ್ ಸಿನಿಮಾದಿಂದ ದೂರಾಗಿದ್ದಷ್ಟೇ ಅಲ್ಲ, ಪತಿಯಿಂದಲೂ ದೂರಾಗಿದ್ದಾರೆ. 

211

ಪ್ರೀತಿಸಿ ಮದುವೆಯಾದ ಪತಿ ಸಂಜಯ್ ಕಪೂರ್ ಜೊತೆಗಿನ ಹಿಂಸೆಯ ಬದುಕಿನ ನೋವನ್ನು ಮರೆಯಲು ಹಲವು ವರ್ಷಗಳನ್ನು ಕಳೆದಿದ್ದಾರೆ. ಸಧ್ಯ ಪತಿಯಿಂದ ವಿಚ್ಚೇದನ ಪಡೆದು ಮಕ್ಕಳೊಂದಿಗೆ ಸಂತೋಷವಾಗಿರುವ ಕರೀಷ್ಮಾ ಕಪೂರ್ ವೈವಾಹಿಕ ಜೀವನ ನರಕವಾಗಿತ್ತು.
 

311

ಎಷ್ಟೇ ಪ್ರಖ್ಯಾತಿ, ಶ್ರೀಮಂತಿಕೆ ಇದ್ದರೂ ದಾಂಪತ್ಯ ಜೀವನದ ಸಂತೋಷವನ್ನು ಅದರಿಂದ ಪಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಕರೀಷ್ಮಾ ಕಪೂರ್ ಉತ್ತಮ ಉದಾಹರಣೆ. 

411

2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ‌ರನ್ನು ವಿವಾಹವಾಗಿದ್ದ ಕರೀಷ್ಮಾ 2014ರಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದರು. ಸಂಜಯ್ ಕೂಡ ನಟಿಯನ್ನು ಕೇವಲ ಹಣಕ್ಕಾಗಿ ಮದುವೆಯಾಗಿದ್ದಾಳೆ ಎಂದು ಆರೋಪಿಸಿದರು.

511

ಕಡೆಗೆ 2016ರಲ್ಲಿ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದಾರೆ ಮತ್ತು ಕರಿಷ್ಮಾ ತಮ್ಮ ಮಕ್ಕಳ ಪಾಲನೆಯನ್ನು ಪಡೆದಿದ್ದಾರೆ. 
 

611

ಸಂಜಯ್‌ಗೆ ಕರೀಷ್ಮಾ ಜೊತೆಗಿನದು ಎರಡನೇ ವಿವಾಹ. ಕರೀಷ್ಮಾ ಕೂಡಾ ಅಭಿಷೇಕ್ ಬಚ್ಚನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಅದು ಮುರಿದು ಬಿತ್ತು. ನಂತರ ಸಂಜಯ್ ಜೊತೆಗಿನ ದಾಂಪತ್ಯ ಕರೀಷ್ಮಾಗೆ ಅಕ್ಷರಶಃ ದುಃಸ್ವಪ್ನವಾಗಿತ್ತು. 

711

ಪತ್ನಿಯನ್ನು ಹರಾಜು ಹಾಕಿದ್ದ!
ಸಂಜಯ್ ತನ್ನ ಹನಿಮೂನ್ ಸಮಯದಲ್ಲಿಯೇ ಕರೀಷ್ಮಾಗೆ ತನ್ನ ಗೆಳೆಯರ ನಡುವೆ ಪತ್ನಿಯನ್ನು ಹರಾಜು ಹಾಕಿದ್ದನಂತೆ. ಕಡೆಗೊಂದು ಬೆಲೆಯನ್ನು ಅಂತಿಮಗೊಳಿಸಿ, ಗೆಳೆಯನೊಬ್ಬನ ಜೊತೆ ಮಲಗುವಂತೆ ಹೇಳಿದ್ದನೆಂದು ಕರೀಷ್ಮಾ ತಮ್ಮ ವಿಚ್ಚೇದನ ಅರ್ಜಿಯಲ್ಲಿ ತಿಳಿಸಿದ್ದರು. 
 

811

ಪತಿಯ ಕೋರಿಕೆಗೆ ಆಕೆ ಒಪ್ಪದಿದ್ದಾಗ ಅವನು ಅವಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದನು. ಕೌಟುಂಬಿಕ ಹಿಂಸಾಚಾರವನ್ನು ಎದುರಿಸಿದ್ದ ಬಗ್ಗೆ ನಟಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಗ ನ್ಯಾಯಾಲಯದಲ್ಲಿ ವಿವರಿಸಿದ್ದರು.

911

ಇನ್ನು ಕರೀಷ್ಮಾ ಗರ್ಭಿಣಿಯಾಗಿದ್ದಾಗ ಅತ್ತೆ ನೀಡಿದ್ದ ಬಟ್ಟೆಯೊಂದು ಆಕೆಗೆ ಹಿಡಿಯಲಿಲ್ಲವಂತೆ. ಆಗ ಸಂಜಯ್ ಪತ್ನಿಗೆ  ಕಪಾಳಮೋಕ್ಷ ಮಾಡುವಂತೆ ತನ್ನ ತಾಯಿಯನ್ನು ಒತ್ತಾಯಿಸಿದ್ದ. 

1011

ಕೌಟುಂಬಿಕ ಹಿಂಸಾಚಾರದ ಬಗ್ಗೆ ಕರಿಷ್ಮಾ ಸಂಜಯ್ ಮತ್ತು ಅವರ ತಾಯಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ತಾನು ಫೇಮಸ್ ಆಗಿದ್ದ ಒಂದೇ ಕಾರಣಕ್ಕೆ ಅದರ ಲಾಭ ಬಳಸಿಕೊಳ್ಳಲು ಸಂಜಯ್ ತನ್ನನ್ನು ಮದುವೆಯಾಗಿದ್ದಾಗಿ ಕರೀಷ್ಮಾ ಹೇಳಿದ್ದರು.

1111

ಈ ಎಲ್ಲ ಸಮಯದಲ್ಲೂ ಕರೀಷ್ಮಾಗೆ ಅವರ ಕುಟುಂಬ ಬೆನ್ನುಲುಬಾಗಿ ನಿಂತು ಆಕೆಯನ್ನು ಟ್ರೋಮಾದಿಂದ ಹೊರತರಲು ಸಹಾಯ ಮಾಡಿತು. ಸಧ್ಯ ನಟಿ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದು, ನಟನಾ ವೃತ್ತಿಗೆ ಮತ್ತೆ ಮರಳಿದ್ದಾರೆ. 
 

Read more Photos on
click me!

Recommended Stories