15 ವಯಸ್ಸಿಗೆ ಮದುವೆಯಾಗಿ 17ಕ್ಕೆ ತಾಯಿಯಾದ ಸ್ಟಾರ್‌ ನಟಿ, ಮೊಂಡುತನದಿಂದ ಅನೇಕ ಹಿಟ್‌ ಸಿನೆಮಾ ಮಿಸ್‌ ಮಾಡಿಕೊಂಡ್ರು

First Published | Jan 9, 2024, 6:41 PM IST

ಹಿಂದಿ ಚಿತ್ರರಂಗದ ಅನೇಕ ನಟಿಯರು ತಮ್ಮ ವೃತ್ತಿಜೀವನವನ್ನು ಹದಿಹರೆಯದವರಾಗಿದ್ದಾಗಲೇ ಪ್ರಾರಂಭಿಸಿ ಹೆಸರು ಮಾಡಿ ಮೆರೆದಿದ್ದಾರೆ. ಅಂತೆಯೇ ಇಲ್ಲೊಬ್ಬ ನಾಯಕಿ  15 ನೇ ವಯಸ್ಸಿನಲ್ಲಿ ಚಿತ್ರರಂಗದಿಂದ  ವಿರಾಮವನ್ನು ಪಡೆದಳು. ಅದಾಗಲೇ ಆಕೆ ಮದುವೆಯಾಗಿದ್ದಳು ಮಾತ್ರವಲ್ಲ  ಅವಳು ಸ್ಟಾರ್ ಆಗುವ ಹೊತ್ತಿಗೆ ಅಂದರೆ 17 ವರ್ಷಕ್ಕೆ ತಾಯಿಯಾಗಿದ್ದಳು.  

ಆಕೆಯೇ ಮೌಶುಮಿ ಚಟರ್ಜಿ,  1952 ರಲ್ಲಿ ಬಂಗಾಳಿ ಕುಟುಂಬದಲ್ಲಿ ಇಂದಿರಾ ಚಟ್ಟೋಪಾಧ್ಯಾಯ ಆಗಿ  ಜನಿಸಿದರು. 1967 ರಲ್ಲಿ, ಅವರು ಕೇವಲ 15 ವರ್ಷದವರಾಗಿದ್ದಾಗ ಆಕೆ ಕುಟುಂಬದಲ್ಲಿ ಸಂಬಂಧಿಕರಿಗೆ ಮದುವೆ ಮಾಡಿ ಕೊಡಲಾಗಿತ್ತು. 

ಕಳೆದ ವರ್ಷ ಲೆಹ್ರೆನ್ ರೆಟ್ರೋಗೆ ನೀಡಿದ ಸಂದರ್ಶನದಲ್ಲಿ, ನಟಿ ಈ ಬಗ್ಗೆ ನೆನಪಿಸಿಕೊಂಡು “ನನ್ನ ತಂದೆ ತನ್ನ ಅಕ್ಕನಿಗೆ ತುಂಬಾ ಹತ್ತಿರವಾಗಿದ್ದರು ಮತ್ತು ಅವರು ಕ್ಯಾನ್ಸರ್‌ನ ಕೊನೆಯ ಹಂತದಲ್ಲಿದ್ದರು. ನನ್ನ ಮದುವೆಯನ್ನು ನೋಡಬೇಕೆಂಬುದು ಅವಳ ಕೊನೆಯ ಆಸೆಯಾಗಿತ್ತು. ಹಾಗಾಗಿ ಮದುವೆ ಆಗಬೇಕು ಎಂದು ಮಾವ ಸೂಚಿಸಿದರು. ನಾನು ನನ್ನ ಪರೀಕ್ಷೆಗಳನ್ನು ಸಹ ಬಿಟ್ಟು ಬಿಟ್ಟೆ. ಅದೇ ಸಮಯದಲ್ಲಿ ನನಗೂ ಒಂದು ಚಿತ್ರ ಸಿಕ್ಕಿತು. ಎಲ್ಲವೂ ನೆನೆದುಕೊಳ್ಳದೇ ಆಯ್ತು" ಎಂದಿದ್ದರು

Tap to resize

ಮೌಶುಮಿ ಅವರು ಪ್ರಸಿದ್ಧ ಸಂಗೀತಗಾರ ಹೇಮಂತ್ ರಾವ್ ಅವರ ಪುತ್ರ ಜಯಂತೋ ಮುಖರ್ಜಿ ಅವರನ್ನು ವಿವಾಹವಾದರು. ಅದೇ ವರ್ಷ, ಅವರ ಚೊಚ್ಚಲ ಚಿತ್ರ ಬಾಲಿಕಾ ವಧು ಬಿಡುಗಡೆಯಾಯಿತು. ಅಲ್ಲಿಂದ ಅವರು ರಾತ್ರೋರಾತ್ರಿ ಸ್ಟಾರ್ ಆದರು. 

70 ಮತ್ತು 80 ರ ದಶಕದಲ್ಲಿ, ಮೌಶುಮಿ ಹಿಂದಿ ಮತ್ತು ಬಾಂಗ್ಲಾ ಚಿತ್ರರಂಗದಲ್ಲಿ ತನ್ನ ಚಲನಚಿತ್ರ ಪ್ರದರ್ಶನಗಳ ಮೂಲಕ  ಅತ್ಯಂತ ಹೆಸರು ಮಾಡಿದ ನಟಿಯಾಗಿ ಬೆಳೆದರು. ನಟಿ ಗರ್ಭಿಣಿ ಇರುವಾಗ ರೇಪ್‌ ಸೀನ್‌ ಶೂಟ್‌ ಮಾಡಿದ್ದರಂತೆ. 80 ರ ದಶಕದ ಅಂತ್ಯದ ವೇಳೆಗೆ, ಅವರು ಪೋಷಕ ಪಾತ್ರಗಳನ್ನು ಮಾಡುತ್ತಾ ಬಣ್ಣದ ಬದುಕು ಮುಂದುವರೆಸಿದರು. 

ರಾಜ್‌ಕುಮಾರ್ ಸಂತೋಷಿ ಅವರ ಘಾಯಲ್ (1992) ಚಿತ್ರದಲ್ಲಿನ ಅವರ ಪೋಷಕ ನಟನೆಯ ಪಾತ್ರ ಅತ್ಯಂತ ಪ್ರಸಿದ್ಧಿ ಪಡೆಯಿತು. ಇದರಲ್ಲಿ ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವರದಿಗಳ ಪ್ರಕಾರ, ಸನ್ನಿಯ ಆಲಸ್ಯವು ಮೌಶುಮಿಯನ್ನು ತುಂಬಾ ಕೆರಳಿಸಿತು, ಒಂದು ದಿನ ಸನ್ನಿ  ಸೆಟ್‌ಗೆ ತಡವಾಗಿ ತಲುಪಿದಾಗ ನಟಿ ಮೌಶುಮಿ ಸಾರ್ವಜನಿಕವಾಗಿ ಅವನನ್ನು ಗದರಿಸಿದಳು, ಜೊತೆಗೆ ತಂದೆ ಧರ್ಮೇಂದ್ರ ಅವರ ಹೆಸರನ್ನು ಕೆಡಿಸದಂತೆ ಕೇಳಿಕೊಂಡಳು. ಮುಜುಗರಕ್ಕೊಳಗಾದ ಸನ್ನಿ ಆ ಬಳಿಕ ಸೆಟ್‌ ಗೆ ತಡ ಮಾಡಲಿಲ್ಲ ಎನ್ನಲಾಗಿದೆ. 

 ಅಂತಿಮವಾಗಿ ರಾಜಕೀಯಕ್ಕೆ ಸೇರಿದ ಮೌಶುಮಿ, ತನ್ನ ಬಹಿರಂಗ ಸ್ವಭಾವ ಮತ್ತು ಮೊಂಡು ವರ್ತನೆಗೆ ಹೆಸರುವಾಸಿಯಾಗಿದ್ದಳು, ಇದು ಆಕೆ  ಸ್ವತಃ ಒಪ್ಪಿಕೊಳ್ಳುವ ಸಂಗತಿಯಾಗಿದ್ದು, ತನ್ನ ವೃತ್ತಿಜೀವನಕ್ಕೆ ಇದರಿಂದ ಹೊಡೆತ ಬಿದ್ದಿದೆ ಎಂದಿದ್ದಾರೆ. ತನ್ನ ಮೊಂಡುತನದ ಕಾರಣದಿಂದಾಗಿ ಹಲವಾರು ಚಲನಚಿತ್ರಗಳಿಂದ ತನ್ನನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ ಕೂಡ.

ತಾನು ಎಂದಿಗೂ ಯಾರೊಬ್ಬರ 'ಹೌದು ಎಂದು ತಲೆ ಆಡಿಸುವ ಮಹಿಳೆ' ಆಗಲು ಸಾಧ್ಯವಿಲ್ಲ ಎಂದು ಹೇಳುತ್ತಿರುತ್ತಾರೆ, ಇದು ಅನೇಕ ಚಲನಚಿತ್ರ ನಿರ್ಮಾಪಕರಿಗೆ ಸರಿಹೊಂದುವುದಿಲ್ಲ. ಮೌಶುಮಿ ಬಾಂಗ್ಲಾ ಸಿನಿಮಾದಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ.  2015 ರಲ್ಲಿ ಶೂಜಿತ್ ಸಿರ್ಕಾರ್ ಅವರ ಪಿಕು ಚಿತ್ರದಲ್ಲಿ ಅವರು ಬಾಲಿವುಡ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. 

Latest Videos

click me!