ಯಂಗ್‌ ಆಗಿ ಕಾಣಲು ನಟಿಯರು ಮಾತ್ರವಲ್ಲ ಈ ನಟರೂ ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗಿದ್ದಾರೆ!

First Published | May 1, 2024, 5:44 PM IST

ಸಿನಿಮಾರಂಗದಲ್ಲಿ ಹೆಚ್ಚಾಗಿ  ಮಹಿಳೆಯರು ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ಪುರುಷ ತಾರೆಗಳು ಸಹ ಸುಂದರವಾಗಿ ಕಾಣಿಸಿಕೊಳ್ಳಲು ಪ್ಲಾಸ್ಟಿಕ್‌ ಸರ್ಜರಿ ಮೊರೆ ಹೋಗಿದ್ದಾರೆ ಎಂದು ಹಲವರಿಗೆ ತಿಳಿದಿಲ್ಲ. ಕಾಸ್ಮೆಟಿಕ್ ಸರ್ಜರಿಗಳು ಕೇವಲ ನಟಿಯರಿಗೆ ಮಾತ್ರ ಎಂಬ ಅನಿಸಿಕೆ ಇದ್ದರೆ, ಕಾಸ್ಮೆಟಿಕ್ ಸರ್ಜರಿಯನ್ನು ಆಯ್ಕೆ ಮಾಡಿಕೊಂಡಿರುವ ಬಾಲಿವುಡ್ ನಟರುರೂ ಇಲ್ಲಿದ್ದಾರೆ ನೋಡಿ

ರಾಜ್‌ಕುಮಾರ್ ರಾವ್‌:
ಬಾಲಿವುಡ್‌ ನಟ ರಾಜ್‌ಕುಮಾರ್ ರಾವ್  ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಅಭಿಮಾನಿಗಳು ಅವರ ಮುಖದ ಸ್ವಲ್ಪ ಬದಲಾವಣೆಗಳನ್ನು ಗಮನಿಸಿ  ಕೆಲವರು ಅವರು ಚಿನ್ ಇಂಪ್ಲಾಂಟ್ ಮಾಡಿಸಿಕೊಂಡಿದ್ದಾರೆಂದು ಹೇಳುತ್ತಿದ್ದಾರೆ. ಇತ್ತೀಚಿನ ಮಾಧ್ಯಮ ಸಂವಾದದ ಸಂದರ್ಭದಲ್ಲಿ,  ನಟನು ತನ್ನ ಗಲ್ಲದ ಮೇಲೆ ಫಿಲ್ಲರ್ಸ್ ಆಯ್ಕೆ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. 

ಶಾಹಿದ್‌ ಕಪೂರ್:
 ವರದಿಗಳ ಪ್ರಕಾರ ನಟ  ಶಾಹಿದ್ ಕಪೂರ್ ಸ್ವಲ್ಪ ಸಮಯದ ಹಿಂದೆ ರೈನೋಪ್ಲ್ಯಾಸ್ಟಿ ಕಾರ್ಯವಿಧಾನವನ್ನು ಮಾಡಿಸಿ ಕೊಂಡಿದ್ದಾರೆ. ಈ ಮೂಲಕ ಅವರು ಮೂಗಿನ  ಆಕಾರ ಬದಲಾಯಿಸಿಕೊಂಡಿದ್ದಾರೆ. 

Tap to resize

ಆಮೀರ್‌ ಖಾನ್‌:
ಬಾಲಿವುಡ್‌ನ ಸೂಪರ್‌ಸ್ಟಾರ್‌ ಆಮೀರ್ ಖಾನ್ ಕೂಡ ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗಿದ್ದಾರೆ. 3 ಈಡಿಯಟ್ಸ್‌ ಚಿತ್ರಕ್ಕೂ ಮೊದಲು ಅವರ ಚರ್ಮದಲ್ಲಿ ಸುಕ್ಕುಗಳು ಗೋಚರಸುತ್ತಿತ್ತು. ಆದರೆ ನಂತರ ಎಲ್ಲಾ ಸುಕ್ಕುಗಳನ್ನು ಅಳಿಸಿಲಾಗಿದೆ.

ಸಲ್ಮಾನ್‌ ಖಾನ್:
ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರು  ಸಾಮಾನ್ಯ ಕೂದಲು ಕಸಿ ಮಾಡುವುದರ ಹೊರತಾಗಿ,  ಕೆಲವು ಬೊಟೊಕ್ಸ್ ಶಾಟ್‌ಗಳನ್ನು ಪಡೆದಿದ್ದಾರೆ. ಸ್ಪಷ್ಟವಾಗಿ, ಅವರು ಕೆಲವು ಚಿಕ್‌ ಫಿಲ್ಲರ್‌ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತದೆ. 

ಸೈಫ್ ಅಲಿ ಖಾನ್:
ನಟ ಸೈಫ್‌ ಆಳಿಖಾನ್‌ ಕೆಲವು ಬೊಟೊಕ್ಸ್ ಚಿಕಿತ್ಸೆ ಪಡೆದಿದ್ದಾರೆ. ಅವರು ಫೇಸ್‌ಲಿಫ್ಟ್‌ ಸಹ ಮಾಡಿಸಿಕೊಂಡಿದ್ದಾರೆ. ಅವರ ಕಣ್ಣುಗಳ ಕೆಳಗೆ ಬ್ಯಾಗಿಯನ್ನು ತೆಗೆದು ಹಾಕಲಾಗಿದೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಆದರೆ ಈ ಅಪಾದನೆಗಳ ನಂತರ ಅವರ ಚರ್ಮವು ಗಣನೀಯವಾಗಿ ಯಂಗ್‌ ಮತ್ತು ಬಿಗಿಯಾಗಿ ಕಾಣಿಸುತ್ತಿರುವುದು ಸತ್ಯ.

ರಣಬೀರ್ ಕಪೂರ್:
ಬಾಲಿವುಡ್‌ನ ಹ್ಯಾಂಡ್ಸಮ್‌ ನಟ ರಣಬೀರ್ ಕಪೂರ್ ಕೂದಲು ಸರಿಪಡಿಸುವ ವಿಧಾನವನ್ನು ಮಾಡಿಸಿಕೊಂಡ ವರದಿಗಳಿವೆ. ಅವರ ಹಿಂದಿನ ಚಲನಚಿತ್ರಗಳಲ್ಲಿ, ಅವರ ಕೂದಲು ಅಸಮವಾಗಿತ್ತು. ಆದರೆ ಇದ್ದಕ್ಕಿದ್ದಂತೆ , ಕೂದಲು ಸಂಪೂರ್ಣವಾಗಿ ಜೋಡಿಸಲ್ಪಟ್ಟಂತೆ ಕಾಣಿಸಿಕೊಳ್ಳಲು ಶುರುವಾಯಿತು. 

ಕರಣ್ ಜೋಹರ್:
ಕರಣ್ ಜೋಹರ್ ಮಾತ್ರ ಬೊಟೊಕ್ಸ್ ಮತ್ತು ಕೆಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿರುವುದಾಗಿ ಎಂದು ಒಪ್ಪಿಕೊಂಡಿರುವ ಏಕೈಕ ಬಾಲಿವುಡ್ ಸೆಲೆಬ್ರಿಟಿ ಇದು ಶ್ಲಾಘನೀಯ. ಅವರು ಕೆಲವು ಬೊಟೊಕ್ಸ್ ಜಾಬ್‌ ಹೊಂದಿದ್ದಾರೆ ಮತ್ತು ಅವರ ಮೂಗು ಮತ್ತು ಕೆನ್ನೆ ಮೂಳೆಗಳ ಸುತ್ತಲೂ ಕೆಲವು ಡರ್ಮಲ್ ಫಿಲ್ಲರ್‌ ಹೊಂದಿದ್ದಾರೆ.
 

Latest Videos

click me!