Drugs Case: ಜೈಲಿಂದ ಬಂದ ಮಗನಿಗೆ ಶಾರೂಖ್-ಗೌರಿಯಿಂದ ಕೌನ್ಸೆಲಿಂಗ್, ಡಯೆಟ್

First Published | Oct 31, 2021, 10:59 AM IST
  • ಜೈಲಿಂದ ಬಂದ ಮಗನಿಗಾಗಿ ಪೋಷಕರ ಸೂಪರ್ ಪ್ಲಾನ್
  • ಮೆಡಿಕಲ್ ಚೆಕಪ್, ಕೌನ್ಸೆಲಿಂಗ್. ಡಯೆಟ್
  • ಮಗ ಅರ್ಯನ್ ಖಾನ್‌ಗಾಗಿ ಪೋಷಕರ ವಿಶೇಷ ಕಾಳಜಿ

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್‌ ಖಾನ್‌ಗಾಗಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಮಗನಿಗಾಗಿ ಶಾರೂಖ್ ಗೌರಿ ದಂಪತಿ ಬಹಳಷ್ಟು ಕಸರತ್ತು ಮಾಡುತ್ತಿದ್ದು ಮಗನಿಗಾಗಿ ಮೆಡಿಕಲ್ ಚೆಕಪ್ ಸೇರಿ ಹಲವು ರೀತಿ ಆರೋಗ್ಯ ಕಾಳಜಿ ವಹಿಸುತ್ತಿದ್ದಾರೆ.

ಶಾರುಖ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಕ್ಟೋಬರ್ 3 ರಂದು ಬಂಧಿಸಿತು. ಮುಂಬೈನಿಂದ ಗೋವಾಗೆ ಹೋಗುತ್ತಿದ್ದ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ನಂತರ ಬಂಧಿಸಲಾಯಿತು. ಆರ್ಥರ್ ರೋಡ್ ಜೈಲಿನಲ್ಲಿ 23 ದಿನ ಕಳೆದ ನಂತರ ಅರ್ಯನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತು.

Tap to resize

ಆರ್ಯನ್‌ಗೆ ಹೊರಗಿನ ಆಹಾರವನ್ನು ತಿನ್ನಲು ಬಿಡುತ್ತಿರಲಿಲ್ಲ. ಇತರ ಕೈದಿಗಳಂತೆ ಜೈಲಿನ ಆಹಾರವನ್ನು ನೀಡಲಾಯಿತು. ಅವರ ಹೆತ್ತವರಾದ ಶಾರುಖ್ ಖಾನ್ ಮತ್ತು ಗೌರಿ ಇದರಿಂದ ದುಃಖಿತರಾಗಿದ್ದರು. ಮಗ ಜೈಲಿನಿಂದ ಹಿಂತಿರುಗುವವರೆಗೆ ಮನ್ನತ್‌ನಲ್ಲಿ ಸಿಹಿತಿಂಡಿ ತಯಾರಿಸಬಾರದು ಎಂದು ಗೌರಿ ಆದೇಶಿಸಿದ್ದರು.

ಆರ್ಯನ್ ಖಾನ್ ಅವರನ್ನು ಹೈಕೋರ್ಟ್ ಕೆಲವು ಷರತ್ತುಗಳ ಮೇಲೆ ಬಿಡುಗಡೆ ಮಾಡಿದೆ. ಅದನ್ನು ಆರ್ಯನ್ ಕಟ್ಟುನಿಟ್ಟಾಗಿ ಅನುಸರಿಸಬೇಕು. ಅವರ ಉಪಸ್ಥಿತಿಯನ್ನು ಗುರುತಿಸಲು ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ಎನ್‌ಸಿಬಿ ಕಚೇರಿಗೆ ಭೇಟಿ ನೀಡಬೇಕೆಂದು ನಿರ್ದೇಶಿಸಲಾಗಿದೆ.

ಮನ್ನತ್‌ನ ಹೊರಗೆ ಹೆಚ್ಚಿನ ಸಂಖ್ಯೆಯ ಮಾಧ್ಯಮ ಸಿಬ್ಬಂದಿ ಮತ್ತು ಅಭಿಮಾನಿಗಳ ಉಪಸ್ಥಿತಿಯಿಂದಾಗಿ ಆರ್ಯನ್ ಈಗ ಕೆಲವು ದಿನಗಳವರೆಗೆ ತಮ್ಮ ನಿವಾಸವನ್ನು ಬಿಟ್ಟು ಹೊರಬರುವುದಿಲ್ಲ ಎನ್ನಲಾಗಿದೆ.

ಆರ್ಯನ್ ಜೈಲಿನಲ್ಲಿದ್ದ ಕಾರಣ ಅವರು ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ಆರ್ಯನ್‌ನ ಪೋಷಣೆ ಮತ್ತು ಜೈಲಿನೊಳಗೆ ಅವನು ಸರಿಯಾಗಿ ತಿನ್ನುತ್ತಿರಲಿಲ್ಲ ಎಂಬ ವಿಚಾರದಿಂದ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ಆರ್ಯನ್ ಅವರ ಸಂಪೂರ್ಣ ಆರೋಗ್ಯ ಪರೀಕ್ಷೆಯ ನಂತರ ನ್ಯೂಟ್ರಿಷನಿಸ್ಟ್‌ಗಳ ಸಲಹೆಯಂತೆ ಆಹಾರ ನೀಡಲಾಗುತ್ತದೆ ಎನ್ನಲಾಗಿದೆ

ಅವರ ದೈಹಿಕ ತಪಾಸಣೆಯ ಹೊರತಾಗಿ, ಅವರ ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಕೌನ್ಸೆಲಿಂಗ್‌ಗೆ ಕೂಡಾ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಶಾರುಖ್ ಮತ್ತು ಗೌರಿ ಆರ್ಯನ್‌ಗೆ ಕೌನ್ಸೆಲಿಂಗ್ ಸೆಷನ್‌ಗಳನ್ನು ಯೋಜಿಸಿದ್ದಾರೆ ಎನ್ನಲಾಗಿದೆ.

Latest Videos

click me!