ಒಂದೇ ಒಂದು ಸಿನಿಮಾ ಮಾಡಿದ ಬಾಲಿವುಡ್‌ನ ನಟಿ, IMDb ಲಿಸ್ಟ್‌ನಲ್ಲಿ ನಂ.1

First Published | Jan 17, 2024, 11:37 AM IST

ಪ್ರತಿ ವಾರ, IMDb ಇಂಡಿಯಾ, ಸಾಮಾಜಿಕ ಮಾಧ್ಯಮದಲ್ಲಿ ಅಗ್ರ ಸ್ಥಾನದಲ್ಲಿರುವ ಸ್ಟಾರ್ ನಟ-ನಟಿಯರ ಪಟ್ಟಿಯನ್ನು ಹಂಚಿಕೊಳ್ಳುತ್ತದೆ. ಆದ್ರೆ ಈ ಬಾರಿ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರೋದು ಕೇವಲ ಮೂರು ಚಿತ್ರಗಳನ್ನು ಮಾಡಿರುವ ಬಾಲಿವುಡ್‌ನ ನಟಿ.

ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) ಮನರಂಜನಾ ಕ್ಷೇತ್ರದಲ್ಲಿನ ಅತ್ಯಂತ ಜನಪ್ರಿಯ ಪ್ರಸಿದ್ಧ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತದೆ. ಪ್ರತಿ ವಾರ, IMDb ಇಂಡಿಯಾ, ಸಾಮಾಜಿಕ ಮಾಧ್ಯಮದಲ್ಲಿ ಅಗ್ರ ಸ್ಥಾನದಲ್ಲಿರುವವರ ಪಟ್ಟಿಯನ್ನು ಹಂಚಿಕೊಳ್ಳುತ್ತದೆ. ಕೇವಲ ಮೂರು ಚಿತ್ರಗಳನ್ನು ಮಾಡಿರುವ ನಟಿಯೊಬ್ಬರು ಈ ಪಟ್ಟಿಯಲ್ಲಿ ಈ ವಾರ ಮುಂದಿದ್ದಾರೆ. 

ಈ ನಟಿ IMDb ಲಿಸ್ಟ್‌ನಲ್ಲಿ ಶಾರೂಕ್ ಖಾನ್‌, ಪ್ರಭಾಸ್‌, ದೀಪಿಕಾ ಪಡುಕೋಣೆಯನ್ನು ಹಿಂದಿಕ್ಕಿದ್ದಾರೆ. ಈ ನಟಿ ಅಭಿನಯಿಸಿದ ಕೇವಲ ಒಂದು ಸಿನಿಮಾ ಮಾತ್ರ ಹೀಟ್ ಆಗಿದೆ. ಆ ನಟಿ ಮತ್ಯಾರು ಅಲ್ಲ ಮೇಧಾ ಶಂಕರ್. IMDb ಇಂಡಿಯಾದ ಜನವರಿ 16ಕ್ಕೆ ಕೊನೆಗೊಳ್ಳುವ ವಾರದ ಅತ್ಯಂತ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯ ಪ್ರಕಾರ, ಮೇಧಾ ಶಂಕರ್ ಅವರು ನಂಬರ್ ಒನ್ ಸ್ಥಾನದಲ್ಲಿದ್ದಾರೆ.

Tap to resize

ಮೇಧಾ ಶಂಕರ್‌, ಹೊಸ ಸಿನಿಮಾ 12th ಫೇಲ್ ಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಬಾಕ್ಸಾಫೀಸಿನಲ್ಲಿ ಉತ್ತಮ ಗಳಿಕೆಯನ್ನು ಗಳಿಸುತ್ತಿದೆ. ಮಾತ್ರವಲ್ಲ, ಡಿಜಿಟಲ್‌ನಲ್ಲಿ ಬಿಡುಗಡೆಯಾದಾಗಿನಿಂದ ಪ್ರಶಂಸೆಯನ್ನು ಗಳಿಸಿದೆ.  

ಚಿತ್ರದ ನಾಯಕ ಮತ್ತು ಮೇಧಾ ಅವರ ಸಹನಟ ವಿಕ್ರಾಂತ್ ಮಾಸ್ಸೆ IMDb ಲಿಸ್ಟ್‌ 2ನೇ ಸ್ಥಾನದಲ್ಲಿದ್ದಾರೆ. ಶಾರೂಕ್‌ ಖಾನ್, ಸಲ್ಮಾನ್ ಖಾನ್, ಪ್ರಭಾಸ್, ಹೃತಿಕ್ ರೋಷನ್, ಮತ್ತು ದೀಪಿಕಾ ಪಡುಕೋಣೆಯಂತಹ ಸೂಪರ್‌ಸ್ಟಾರ್‌ಗಳು ಹಿಂದುಳಿದಿದ್ದಾರೆ.

ಅಪರಿಚಿತ ನಟಿಯಾಗಿದ್ದರೂ, ಮೇಧಾ ಅವರ ಪ್ರೊಫೈಲ್ ಈಗಾಗಲೇ ಸೂಪರ್‌ಸ್ಟಾರ್ ಆಗಿರುವ ನಟರಿಗಿಂತ ಹೆಚ್ಚಿನ ಸರ್ಚ್‌ಗಳನ್ನು ಹೊಂದಿದೆ. ಚಿತ್ರವು ಥಿಯೇಟರ್‌ಗಳಲ್ಲಿ ಮತ್ತು OTTಯಲ್ಲಿ ಹೆಚ್ಚು ಫೇಮಸ್ ಆದ ಕಾರಣ ಮೇಧಾ ಟಾಪ್ ಸ್ಥಾನದಲ್ಲಿದ್ದಾರೆ. ಅನಿಮಲ್ ಖ್ಯಾತಿಯ ತೃಪ್ತಿ ಡಿಮ್ರಿ ಟಾಪ್ 10 ಸ್ಥಾನದಲ್ಲಿಯೂ ಇಲ್ಲ

ಮೇಧಾ ಶಂಕರ್ ಯಾರು?
ನೋಯ್ಡಾದಲ್ಲಿ ಹುಟ್ಟಿ ಬೆಳೆದ ಮೇಧಾ ನಟಿ ಮತ್ತು ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯೂ ಹೌದು. ದೆಹಲಿಯ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಫ್ಯಾಶನ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಆದರೆ ನಟನೆಯನ್ನು ವೃತ್ತಿಯಾಗಿ ಆರಿಸಿಕೊಂಡರು. 2021ರಲ್ಲಿ ಬಿಡುಗಡೆಯಾದ ಶಾದಿಸ್ಥಾನದಲ್ಲಿ ಅಭಿನಯಿಸಿದರು.

ಅದಕ್ಕೂ ಮೊದಲು 2019 ರಲ್ಲಿ ಬ್ರಿಟಿಷ್ ಟಿವಿ ಸರಣಿ ಬೀಚಮ್ ಹೌಸ್‌ನೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಂತರ, ಮ್ಯಾಕ್ಸ್, ಮಿನ್ ಮತ್ತು ಮಿಯೋಜಾಕಿಯಲ್ಲಿ ಕಾಣಿಸಿಕೊಂಡರು. ಇದರೊಂದಿಗೆ, ಮೇಘಾ ಡಿಸ್ನಿ+ ಹಾಟ್‌ಸ್ಟಾರ್ ಚಿತ್ರ ದಿಲ್ ಬೇಕಾರಾರ್‌ನಲ್ಲಿ ಪೋಷಕ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. 

ಆದರೆ ಐಪಿಎಸ್ ಮನೋಜ್ ಕುಮಾರ್ ಶರ್ಮಾ ಅವರ ನೈಜ ಯಶಸ್ಸಿನ ಕಥೆಯನ್ನು ಆಧರಿಸಿದ ವಿಧು ವಿನೋದ್ ಚೋಪ್ರಾ ಚಲನಚಿತ್ರವು 12th ಫೇಲ್‌ ಸಿನಿಮಾದ ಅಭಿನಯದಿಂದ ಮೇಧಾ ಹೆಚ್ಚು ಫೇಮಸ್ ಆಗಿದ್ದಾರೆ..

ಮನೋಜ್ ಅವರ ಸಹ ಐಎಎಸ್ ಆಕಾಂಕ್ಷಿ, ಜೀವನ ಸಂಗಾತಿ, ಮತ್ತು ಸ್ವತಃ ಐಎಎಸ್ ಅಧಿಕಾರಿ ಶ್ರದ್ಧಾ ಜೋಶಿ ಪಾತ್ರದಲ್ಲಿ ಮೇಧಾ ನಟಿಸಿದ್ದಾರೆ.

Latest Videos

click me!