ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ತಮ್ಮನ ಜೊತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್

First Published | Jul 8, 2024, 11:14 AM IST

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈಗ ಸಾರಾ ಅಲಿ ಖಾನ್ ಅವರ ಮಾಜಿ ಗೆಳೆಯ ವೀರ್ ಪಹಾರಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. 

ವಿಶ್ವ ಸುಂದರಿ, ನಟಿ ಮಾನುಷಿ ಚಿಲ್ಲರ್ ಈಗ ವೀರ್ ಪಹಾರಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ವೀರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆಯ ಮೊಮ್ಮಗ. 

ಜುಲೈ 5, ಶುಕ್ರವಾರದಂದು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತದಲ್ಲಿ ಮಾನುಷಿ ಮತ್ತು ವೀರ್ ಒಟ್ಟಿಗೆ ನೃತ್ಯ ಮಾಡಿದ್ದನ್ನು ನೋಡಿದ ಮೇಲೆ ಇವರಿಬ್ಬರ ಸಂಬಂಧದ ವದಂತಿಗೆ ಮತ್ತಷ್ಟು ಪುಷ್ಠಿ ಬಂದಿದೆ. 

Tap to resize

ಅಂಬಾನಿ ಕುಟುಂಬ ಇಟಲಿಯಲ್ಲಿ ನಡೆಸಿದ ಕ್ರೂಸ್ ಪಾರ್ಟಿಯಲ್ಲೂ ವೀರ್ ಮತ್ತು ಮಾನುಷಿ ಒಟ್ಟಿಗೇ ಕಂಡುಬಂದಿದ್ದರು. ಈ ವೀರ್ ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ತಮ್ಮ. 

ಈ ಹಿಂದೆ ವೀರ್ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ನಡೆಸುತ್ತಿದ್ದ. ಇತ್ತ ಮಾನುಷಿ ಚಿಲ್ಲರ್ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಡೇಟಿಂಗ್ ನಡೆಸುತ್ತಿದ್ದರು, ಇಬ್ಬರದೂ ಹಾರ್ಟ್ ಬ್ರೇಕ್ ಆದ ಬಳಿಕ ಇವರಿಬ್ಬರೇ ಒಂದಾಗಿದ್ದಾರೆ ಎನ್ನಲಾಗುತ್ತಿದೆ. 

ಬಾಂಬೆ ಟೈಮ್ಸ್ ವರದಿಯ ಪ್ರಕಾರ ಮಾನುಷಿ ಮತ್ತು ವೀರ್ ಸಂಬಂಧವು ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿದ್ದು, ವೀರ್ ಸ್ನೇಹಿತರ ಬಳಗವನ್ನು ಚಿಲ್ಲರ್ ಪರಿಚಯ ಮಾಡಿಕೊಳ್ಳುತ್ತಿದ್ದಾಳೆ. 

ಇತ್ತೀಚೆಗೆ ವೀರ್ - ಮಾನುಷಿ ಮತ್ತು ಜಾನ್ವಿ ಹಾಗೂ ಶಿಖರ್ ಪಹಾರಿಯಾ ನಾಲ್ವರೂ ಸೇರಿ ಡಬಲ್ ಡೇಟ್‌ಗೆ ಹೋಗಿದ್ದು ಸುದ್ದಿಯಾಗಿತ್ತು. 

ಅಂಬಾನಿ ಮನೆಯ ಸಂಗೀತ ಕಾರ್ಯಕ್ರಮದ ವೈರಲ್ ಕ್ಲಿಪ್‌ನಲ್ಲಿ ಮಾನುಷಿ ಮತ್ತು ವೀರ್ ಅವರೊಂದಿಗೆ ಶಿಖರ್ ಮತ್ತು ಜಾನ್ವಿ ಕೂಡ ನೃತ್ಯ ಮಾಡುತ್ತಿದ್ದಾರೆ.

ಏತನ್ಮಧ್ಯೆ, ಕೆಲಸದ ಮುಂಭಾಗದಲ್ಲಿ, ವೀರ್ ಆಕ್ಷನ್ ಥ್ರಿಲ್ಲರ್ ಸ್ಕೈ ಫೋರ್ಸ್‌ನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಮತ್ತೊಂದೆಡೆ, ಮಾನುಷಿ ಜಾನ್ ಅಬ್ರಹಾಂ ಅವರೊಂದಿಗೆ ಮುಂದಿನ ಜಿಯೋಪಾಲಿಟಿಕಲ್ ಆಕ್ಷನ್ ಥ್ರಿಲ್ಲರ್ ಟೆಹ್ರಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Latest Videos

click me!