ನಂತರ ಅವರು DJ ಹುಸೇನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳಿವೆ. ನಂತರ ನೈಜೀರಿಯಾದ ಉದ್ಯಮಿ ಸೆಸಿಲ್ ಆಂಥೋನಿ ಅವರೊಂದಿಗೆ ಸಂಬಂಧ ಹೊಂದಿದ್ದರು. ಈ ಸಂಬಂಧವೂ ಕೆಲಕಾಲದ ನಂತರ ಮುರಿದುಬಿತ್ತು. ನಂತರ ನಟ ಆರ್ಯನ್ ವೈದ್, ಆಸ್ಟ್ರೇಲಿಯಾದ ರಾಯಭಾರಿ ಕ್ರಿಸ್ಪಿನ್ ಕಾನ್ರಾಯ್ ಮುಂತಾದವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳು ಹರಿದಾಡಿದವು. ಈ ಪಟ್ಟಿ ಇಲ್ಲಿಗೆ ಮುಗಿಯಲಿಲ್ಲ. ಈ ಪಟ್ಟಿಯಲ್ಲಿ ಉದ್ಯಮಿ ಅಜೀಮ್ ಪ್ರೇಮ್‌ಜಿ ಅವರ ಪುತ್ರ ತಾರಿಕ್ ಪ್ರೇಮ್‌ಜಿ, ಮಾಡೆಲ್ ರಾಜೀವ್ ಮೂಲ್ಚಂದಾನಿ, ಸಂಗೀತ ನಿರ್ದೇಶಕ ಸಂದೀಪ್ ಚೌತಾ, ಕ್ರಿಸ್ಟೋಫರ್ ಡೋರಿಸ್ ಕೂಡ ಇದ್ದಾರೆ. ಆದರೆ ಇವುಗಳಲ್ಲಿ ಕೆಲವು ಸಂಬಂಧಗಳನ್ನು ಮನೀಷಾ ಸ್ವತಃ ಒಪ್ಪಿಕೊಂಡಿದ್ದರೆ, ಇನ್ನು ಕೆಲವು ಮಾಧ್ಯಮಗಳಲ್ಲಿ ಹರಿದಾಡಿದ ವದಂತಿಗಳಾಗಿವೆ.