ಮನೀಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿಯಲ್ಲಿ ಮಿಂಚಿದ ಬಾಲಿವುಡ್ ರಿಯಲ್‌ ಜೋಡಿಗಳು

Published : Nov 06, 2023, 05:29 PM IST

ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಇತ್ತೀಚೆಗೆ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು, ಇದರಲ್ಲಿ ಬಾಲಿವುಡ್‌ನ ಹಲವು ಕಪಲ್‌ಗಳು ಹಾಜರಾಗಿದ್ದರು. ಮನೀಶ್ ಮಲ್ಹೋತ್ರಾ ಅವರ ಮನೆ ದಿವಾಳಿ ಬ್ಯಾಶ್‌ನಲ್ಲಿ ಕಾಣಿಸಿಕೊಂಡ ಜೋಡಿಗಳು.   

PREV
18
ಮನೀಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿಯಲ್ಲಿ ಮಿಂಚಿದ  ಬಾಲಿವುಡ್  ರಿಯಲ್‌  ಜೋಡಿಗಳು

ಕಿಯಾರಾ ಅಡ್ವಾಣಿ -ಸಿದ್ಧಾರ್ಥ್ ಮಲ್ಹೋತ್ರಾ:
ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ಒಂದಾದ ಸಿದ್ಧಾರ್ಥ್ ಮಲ್ಹೋತ್ತಾ ಮತ್ತು ಕಿಯಾರಾ ಆಡ್ವಾಣಿ ಅವರು ಮನೀಶ್ ಮಲ್ಹೋತ್ರಾ ಅವರ ದೀಪಾವಳಿ  ಬ್ಯಾಷ್‌ಗೆ ಆಗಮಿಸುತ್ತಿದ್ದಂತೆ  ತಮ್ಮ ಲುಕ್‌ನಿಂದ ಎಲ್ಲರ ಗಮನ  ಸೆಳೆದರು.

28

ಶಿವಾನಿ ದಾಂಡೇಕರ್- ಫರ್ಹಾನ್ ಅಖ್ತರ್:
ಶಿವಾನಿ ದಾಂಡೇಕರ್ ಕೆಂಪು ಸೀರೆಯನ್ನು ಧರಿಸಿದ್ದರೆ, ಫರ್ಹಾನ್ ಅಖ್ತರ್ ಸಾಂಪ್ರದಾಯಿಕ ಜಾಕೆಟ್‌ನೊಂದಿಗೆ ಕುರ್ತಾ ಸೆಟ್‌ನಲ್ಲಿ ಪೋಸ್‌ ನೀಡಿದ್ದರು.

38

ಮಾಧುರಿ ದೀಕ್ಷಿತ್- ಶ್ರೀರಾಮ್ ಮಾಧವ್ ನೆನೆ:
ಸೂಪರ್ ಜೋಡಿ ಮಾಧುರಿ ಮತ್ತು ಶ್ರೀರಾಮ್ ನೆನೆ ಕಪ್ಪು ಉಡುಪಿನಲ್ಲಿ ಅವಳಿ ಪೇರ್ ಮಾಡಿಕೊಂಡಿದ್ದರು. ಮಾಧುರಿ ಕಪ್ಪು ಸೀರೆ  ಉಟ್ಟುಕೊಂಡಿದ್ದಾರೆ ಮತ್ತು ಆಕೆಯ ಪತಿ ನೆಹರೂ ಜಾಕೆಟ್‌ನೊಂದಿಗೆ ಕುರ್ತಾ ಸೆಟ್ ಧರಿಸಿದ್ದರು.
 

48

ಶಾಹಿದ್ ಕಪೂರ್ - ಮೀರಾ ರಜಪೂತ್:
ಮೀರಾ ರಜಪೂತ್ ಹೊಳೆಯುವ ಕಪ್ಪು ಸೀರೆಯನ್ನು ಉಟ್ಟಿದ್ದರೆ, ಶಾಹಿದ್ ನೀಲಿ ಬಿಳಿ ಮುದ್ರಿತ ಕುರ್ತಾ ಆರಿಸಿಕೊಂಡು ಅದನ್ನು ಬಿಳಿ ಪ್ಯಾಂಟ್‌ನೊಂದಿಗೆ ಪೇರ್‌ ಮಾಡಿಕೊಂಡಿದ್ದರು

58

ಚಂಕಿ ಪಾಂಡೆ- ಭಾವನಾ ಪಾಂಡೆ:
ಚಿಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಹಳದಿ ಬಣ್ಣದಲ್ಲಿ ಟ್ವಿನ್ ಆಗಿ  ಈ ಜೋಡಿ ಎಲ್ಲರನ್ನು ಬೆರಗುಗೊಳಿಸಿತ್ತು

68

ವರುಣ್ ಧವನ್ ನತಾಶಾ ದಲಾಲ್:
ಪಾರ್ಟಿಯಲ್ಲಿ ವರುಣ್  ಬಿಳಿ ಮತ್ತು ಕಪ್ಪು ಕುರ್ತಾವನ್ನು ಧರಿಸಿದ್ದರು ಮತ್ತು ಅವರ ಪತ್ನಿ ಸಂಪೂರ್ಣ ಸಿಲ್ವರ್‌ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು.

78

ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರ್ಬಂದ:
ಪಾರ್ಟಿಯಲ್ಲಿ ಸುಂದರವಾಗಿ ಕಾಣಿಸಿಕೊಂಡ  ಇನ್ನೊಂದು ಜೋಡಿ ಅಂದರೆ ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರ್ಬಂದ ದಂಪತಿ. ಈ ಜೋಡಿ ಸಹ ಎಲ್ಲರನ್ನು  ಗಮನ ಸೆಳೆಯುವಲ್ಲಿ ಹಿಂದೆ ಉಳಿಯಲಿಲ್ಲ.

88

ಆಯುಷ್ಮಾನ್ ಖುರಾನಾ-ತಾಹಿರಾ ಕಶ್ಯಪ್:
ಮನೀಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿಯಲ್ಲಿ ಪತ್ನಿ ತಾಹಿರಾ ಕಶ್ಯಪ್ ಅವರೊಂದಿಗೆ ಆಯುಷ್ಮಾನ್ ಖುರಾನಾ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories