ಅಲ್ಲು ಅರ್ಜುನ್‌ - ಸ್ನೇಹಾ: ದಕ್ಷಿಣ ಚಿತ್ರರಂಗದ ರೊಮ್ಯಾಂಟಿಕ್‌ ಜೋಡಿಗಳಿವು!

First Published | Nov 6, 2023, 5:05 PM IST

ಬಾಲಿವುಡ್‌ನಲ್ಲಿ ಮಾತ್ರವಲ್ಲ ದಕ್ಷಿಣದ ಚಿತ್ರರಂಗದಲ್ಲೂ ಹಲವು ದಂಪತಿಗಳು ಸಖತ್‌ ಫೇಮಸ್‌. ಅದೇ ರೀತಿ ತೆಲಗು ಸಿನಿಮಾ ಇಂಡಸ್ಟ್ರಿಯ ಕೆಲವು ರೋಮ್ಯಾಂಟಿಕ್‌ ಕಪಲ್‌ಗಳು ಇಲ್ಲಿದ್ದಾರೆ

6 ಮಾರ್ಚ್ 2011 ರಂದು, ಅಲ್ಲು ಅರ್ಜುನ್ ಹೈದರಾಬಾದ್‌ನಲ್ಲಿ ಸ್ನೇಹಾ ರೆಡ್ಡಿಯನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ-ಒಬ್ಬ ಮಗ ಅಯಾನ್ ಮತ್ತು ಮಗಳು ಅರ್ಹಾ.

ಜ್ಯೂನಿಯರ್‌ ಎನ್‌ಟಿಆರ್‌  ಅವರು ರಿಯಲ್ಟರ್ ಮತ್ತು ಉದ್ಯಮಿ ನಾರ್ಣೆ ಶ್ರೀನಿವಾಸ ರಾವ್ ಅವರ ಪುತ್ರಿ ಲಕ್ಷ್ಮಿ ಪ್ರಣತಿ ಅವರನ್ನು ವಿವಾಹವಾದರು..ಅವರ ವಿವಾಹವು 5 ಮೇ 2011 ರಂದು ಹೈದರಾಬಾದ್‌ನಲ್ಲಿ ಮಾದಾಪುರದ ಹೈಟೆಕ್ಸ್ ಪ್ರದರ್ಶನ ಕೇಂದ್ರದಲ್ಲಿ ನಡೆಯಿತು. ದಂಪತಿಗೆ ಇಬ್ಬರು ಗಂಡು ಮಕ್ಕಳಿವೆ.

Tap to resize

ರಾಮ್ ಚರಣ್ ಉದ್ಯಮಿ ಉಪಾಸನಾ ಅವರನ್ನು ಜೂನ್ 14, 2012 ರಂದು  ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ಜೂನ್ 20 ರಂದು ತಮ್ಮ ಮೊದಲ ಮಗು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.

ಮಹೇಶ್ ಬಾಬು ನಿಜವಾಗಿಯೂ ಫ್ಯಾಮಿಲಿ ಮ್ಯಾನ್‌. ಅವರ ಪತ್ನಿ ನಮ್ರತಾ ಶಿರೋಡ್ಕರ್, ಮಗಳು ಸಿತಾರಾ ಮತ್ತು ಮಗ ಗೌತಮ್ ಸೇರಿದಂತೆ ಅವರ ಕುಟುಂಬದೊಂದಿಗಿನ ಅವರ  ಹಲವು  ಸೋಶಿಯಲ್‌ ಮೀಡಿಯಾದಲ್ಲಿನ ಫೋಟೋಗಳು ಇದಕ್ಕೆ ಸಾಕ್ಷಿಯಾಗಿದೆ.

ತೆಲುಗು ನಟ ನಾಗಾರ್ಜುನ 11 ಜೂನ್ 1992 ರಂದು ತೆಲುಗು ನಟಿ ಅಮಲಾರನ್ನು ವಿವಾಹವಾದರು ಮತ್ತು ದಂಪತಿಗಳ ಮಗ ನಟ ಅಖಿಲ್ ಅಕ್ಕಿನೇನಿ.

20 ಫೆಬ್ರವರಿ 1980 ರಂದು, ಚಿರಂಜೀವಿ ತೆಲುಗು ಕಾಮಿಕ್ ನಟ ಅಲ್ಲು ರಾಮಲಿಂಗಯ್ಯ ಅವರ ಪುತ್ರಿ ಸುರೇಖಾ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ, ಸುಶ್ಮಿತಾ ಮತ್ತು ಶ್ರೀಜಾ, ಮತ್ತು ಮಗ ರಾಮ್ ಚರಣ್

ವಿಷ್ಣು ಮಂಚು,  ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸೋದರ ಸೊಸೆ ವಿರಾನಿಕಾ ರೆಡ್ಡಿ ಅವರನ್ನು ವಿವಾಹವಾದರು. ಈ ಜೋಡಿಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ

Latest Videos

click me!