ಗೌರಿ ಖಾನ್‌- ಟ್ವಿಂಕಲ್ ಖನ್ನಾವರೆಗೆ ಬಾಲಿವುಡ್ ಸ್ಟಾರ್ ಪತ್ನಿಯರ ಕರಾಳ ವಿವಾದಗಳು

First Published | Apr 26, 2024, 5:19 PM IST

ಬಾಲಿವುಡ್‌ ಸಿನಿಮಾರಂಗದಲ್ಲಿ  ನಾಯಕರಷ್ಟೇ ಅವರ ಪತ್ನಿಯರು ಜನಪ್ರಿಯರಾಗಿದ್ದಾರೆ. ಸಿನಿಮಾ ನಟಿಯಾರಾಗಿದರೂ ಕೂಡ ಅವರದೇ ಆದ ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ. ಕೆಲವು ನಟಿಯರ ಪತ್ನಿಯರು ವಿವಾದಗಳಿಂದಲೂ ಸುದ್ದಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಶಾರುಖ್‌ ಪತ್ನಿ ಗೌರಿ ಖಾನ್‌, ಅಕ್ಷಯ್‌ ಕುಮಾರ್‌ ಪತ್ನಿ ಟ್ವಿಂಕಲ್‌ ಖನ್ನಾ ಮುಂತಾದವರಿದ್ದಾರೆ. 

ಗೌರಿ ಖಾನ್:
ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ನಡುವೆ ಸಂಬಂಧವಿದೆ ಎಂಬೊಂದು ಸುದ್ದಿ ಸಿಕ್ಕಾಪಟ್ಟೆ ಹರಿದಾಡಿತ್ತು. ಆ ಕಾರಣದಿಂದ ಗೌರಿ ಖಾನ್ ಅವರು ಪ್ರಿಯಾಂಕಾ ಚೋಪ್ರಾ ಅವರನ್ನು ಚಲನಚಿತ್ರಗಳಿಂದ ದೂರವಾಗುವಂತೆ ಮಾಡಿದರು. ಮತ್ತು ಶಾರುಖ್ ಖಾನ್ ಅವರೊಂದಿಗೆ ಚಲನಚಿತ್ರಗಳನ್ನು ಮಾಡದಂತೆ ನಿರ್ಬಂಧ ಹೇರಿದ್ದರೆಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿತ್ತು. 

ಕಿರಣ್ ರಾವ್:
ಕಿರಣ್ ರಾವ್ ಮತ್ತು ಆಕೆಯ ಮಾಜಿ ಪತಿ ಅಮೀರ್ ಖಾನ್ ವಿರುದ್ಧ 2015 ರಲ್ಲಿ ಎಫ್‌ಐಆರ್ ದಾಖಲಾಗಿತ್ತು, ಅಸಹಿಷ್ಣುತೆ ಕಾರಣದಿಂದ ತಾನು ದೇಶವನ್ನು ತೊರೆಯುತ್ತೇನೆಂದು ಅಮೀರ್ ಸಂದರ್ಶನವೊಂದರಲ್ಲಿ ಹೇಳಿದ್ದರು.
 

Tap to resize

ಟ್ವಿಂಕಲ್ ಖನ್ನಾ:
ಅಕ್ಷಯ್ ಕುಮಾರ್ ರ‍್ಯಾಂಪ್ ವಾಕ್ ಮಾಡುವಾಗ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ತಮ್ಮ ಜೀನ್ಸ್ ಬಟನ್ ಬಿಚ್ಚುವಂತೆ ಒತ್ತಾಯಿಸಿದ ಕಾರಣ ಕಾನೂನು ಸಮಸ್ಯೆಗೆ ಸಿಲುಕಿದರು. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ದಂಡ ಪಾವತಿಸಿದ ನಂತರ ಆಕೆಯನ್ನು ಬಿಡುಗಡೆ ಮಾಡಲಾಯಿತು.

ಮೆಹರ್ ಜೆಸ್ಸಿಕಾ:
ಅರ್ಜುನ್ ರಾಂಪಾಲ್ ಮಾಜಿ ಪತ್ನಿ ಮೆಹರ್ ಜೆಸ್ಸಿಕಾ ಅವರು ಮೆಹರ್ ಅವರ ಆತ್ಮೀಯ ಸ್ನೇಹಿತರಾದ ಸುಝೇನ್ ಖಾನ್ ಅವರೊಂದಿಗಿನ ಪ್ರೇಮ ಸಂಬಂಧದ ನಂತರ ಅರ್ಜುನ್ ಮನೆಯಿಂದ ಹೊರ ಬಂದಿದ್ದಾರೆ ಎಂಬ ವರದಿಗಳ ನಂತರ ಗಮನ ಸೆಳೆದರು.

ಮಲೈಕಾ ಅರೋರಾ:
ಅರ್ಬಾಜ್ ಖಾನ್ ಅವರನ್ನು ಮದುವೆಯಾದ ಮಲೈಕಾ ಅರೋರಾ ಹಣಕಾಸಿಗೆ ಸಂಬಂಧಿಸಿದ ವೈಮನಸ್ಯದ ಕಾರಣ ಅರ್ಬಾಜ್ ಅನ್ನು ತೊರೆದರು ಮತ್ತು ಮಲೈಕಾ ಅರ್ಬಾಜ್‌ ಅವರ ಎಲ್ಲಾ ಹಣವನ್ನು ದೋಚಿಕೊಂಡು ಬೇರೆಯಾದರೆಂಬ ಸುದ್ದಿ ಇನ್ನೂ ಬಾಲಿವುಡ್‌ನಲ್ಲಿದೆ.
 
 

ಮೀರಾ ರಜಪೂತ್:
ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಹೆಸರಾಂತ ಮ್ಯಾಗಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಂಡಾಗ ನೆಟಿಜನ್‌ಗಳು ಅವರ ಸಾಧನೆಯನ್ನು ಪ್ರಶ್ನಿಸುವಂತೆ ಮಾಡಿತು ಈ ಅವರು ಕಾರಣದಿಂದ ಮುಜುಗರ ಅನುಭವಿಸುವಂತಾಯಿತು.

Latest Videos

click me!