ಈ ಹಾಡಿಗೆ ಮಲೈಕಾ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಹೇಳಿದ ಅವರು ಈ ಹಿಂದೆ ಈ ಹಾಡಿಗೆ ಶಿಲ್ಪಾ ಶೆಟ್ಟಿ ಮತ್ತು ಶಿಲ್ಪಾ ಶಿರೋಡ್ಕರ್ ಜೊತೆಗೆ ಕೆಲವು ನಾಯಕಿಯರನ್ನು ಸಂಪರ್ಕಿಸಲಾಗಿತ್ತು ಆದರೆ ಎಲ್ಲರೂ ತಿರಸ್ಕರಿಸಿದ್ದರು. ಇದಾದ ನಂತರ ಮಲೈಕಾ ಈ ಹಾಡಿಗೆ ರೆಡಿಯಾದರು ಎಂದು ಫರಾ ಖಾನ್ ಬಹಿರಂಗ ಪಡಿಸಿದ್ದಾರೆ
ಕೆಲವು ವರ್ಷಗಳ ಹಿಂದೆ, ಚಲನಚಿತ್ರ ನಿರ್ಮಾಪಕ ಮತ್ತು ನೃತ್ಯ ಸಂಯೋಜಕ ಫರಾಹ್ ಖಾನ್ ಅವರು ಮಲೈಕಾ ಅರೋರಾರನ್ನು ದಿಲ್ ಸೆ ಚಿತ್ರದ ಚೈಯ್ಯ ಚೈಯ್ಯ ಹಾಡಿಗೆ ಸೆಲೆಕ್ಟ್ ಮಾಡುವ ಮೊದಲ ಅಫರ್ ಅನ್ನು ಅನೇಕರಿಗೆ ನೀಡಲಾಗಿತು ಎಂದು ಬಹಿರಂಗಪಡಿಸಿದರು.
ಈ ಹಾಡನ್ನು ನಿಜವಾಗಿ ಚಲಿಸುವ ರೈಲಿನಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಯಾವುದೇ ನಟಿಯರು ಅಂತಹ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಫರಾ ಖಾನ್ ಹೇಳಿದ್ದಾರೆ.
'ಶಿಲ್ಪಾ ಶೆಟ್ಟಿ ಕುಂದ್ರಾ, ಶಿಲ್ಪಾ ಶಿರೋಡ್ಕರ್ ಮತ್ತು ಇತರ 2-3 ನಟಿಯರನ್ನು ಚೈಯಾ ಚೈಯಾ ಹಾಡಿಗಾಗಿ ಸಂಪರ್ಕಿಸಲಾಯಿತು, ಆದರೆ ಅವರೆಲ್ಲರೂ ಅದನ್ನು ಮಾಡಲು ನಿರಾಕರಿಸಿದರು' ಎಂದು ಮಲೈಕಾ ಅರೋರಾ ಅವರ ಶೋನಲ್ಲಿ ಮೂವಿಂಗ್ ಇನ್ ವಿತ್ ಮಲೈಕಾನಲ್ಲಿ ಫರಾ ಖಾನ್ ಹೇಳಿದರು
'ನೀನು ಚೈಯಾ ಚೈಯಾ ಹುಡುಗಿ. ಐದು ನಾಯಕಿಯರು ರೈಲು ಹತ್ತಲು ನಿರಾಕರಿಸಿದ್ದು ನಿಮ್ಮ ಅದೃಷ್ಟ. ಮಲೈಕಾ ರಾಡಾರ್‌ನಲ್ಲಿ ಎಲ್ಲಿಯೂ ಇರಲಿಲ್ಲ. ಒಬ್ಬರಿಗೆ ರೈಲು ಹತ್ತಲು ಫೋಬಿಯಾ ಇತ್ತು, ಇನ್ನೊಬ್ಬರು ಸಿಗಲಿಲ್ಲ' ಎಂದು ಇದರ ಬಗ್ಗೆ ಇನ್ನಷ್ಷೂ ಹೇಳಿದ ಫರಾ.
'ನಂತರ ಮೇಕಪ್ ಕಲಾವಿದ ಮಲೈಕಾ ತುಂಬಾ ಒಳ್ಳೆಯ ನೃತ್ಯಗಾರ್ತಿ ಎಂದರು. ಅವಳು ರೈಲು ಹತ್ತಿದಾಗ, ಅವಳು ಅದನ್ನು ಮಾಡುತ್ತಾಳೋ ಇಲ್ಲವೋ ಎಂದು ನಾವು ಆಶ್ಚರ್ಯ ಪಡುತ್ತಿದ್ದೆವು, ಆದರೆ ಅವಳು ಮಾಡಿದಳು ಮತ್ತು ಹಾಡು ಇತಿಹಾಸವನ್ನು ಸೃಷ್ಟಿಸಿತು' ಎಂದಿದ್ದಾರೆ ಬಾಲಿವುಡ್‌ನ ಫೇಮಸ್ ಕೊರಿಯೋಗ್ರಾಫರ್.
ಹಾಡಿನ ಚಿತ್ರೀಕರಣದ ಸಮಯದಲ್ಲಿ ಶಾರುಖ್ ಖಾನ್ ತನ್ನ ಬಗ್ಗೆ ತುಂಬಾ ಚಿಂತಿತರಾಗಿದ್ದರು ಎಂದು ಮಲೈಕಾ ಅರೋರಾ ಬಹಿರಂಗಪಡಿಸಿದ್ದಾರೆ. ತಾನು ರೈಲಿನಿಂದ ಹಾರಿ ಹೋಗಬಹುದೆಂಬ ಭಯ ಅವರಿಗಿತ್ತು. ರೈಲಿನಲ್ಲಿ ಡ್ಯಾನ್ಸ್ ಮಾಡುವಾಗ ತಾವು ಮತ್ತು ಶಾರುಖ್ ಮಾತ್ರ ಯಾವುದೇ ತೊಂದರೆಯಾಗಲಿಲ್ಲ ಎಂದು ಅವರು ಹೇಳಿದರು.
ಮಣಿರತ್ನಂ ಈ ಚಿತ್ರವನ್ನು 11 ಕೋಟಿ ರೂಪಾಯಿಗೆ ನಿರ್ಮಿಸಿದ್ದಾರೆ ಮತ್ತು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 28.26 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಈ ಚಿತ್ರದ ಮೂಲಕ ಪ್ರೀತಿ ಜಿಂಟಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.