ಮೇಕಪ್ ಇಲ್ಲದ ಮಲೈಕಾ, ಜಿಮ್‌ನಲ್ಲಿ ಸಾರಾ, ಕಾರಿನಲ್ಲಿ ಕಂಗನಾ ಮುಂಬೈನಲ್ಲಿ ಕಾಣಿಸಿಕೊಂಡ ಸೆಲೆಬ್ರೆಟಿಗಳು!
First Published | Feb 11, 2022, 10:26 PM ISTಬಾಲಿವುಡ್ (Bollywood) ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಗಳು ಈ ದಿನಗಳಲ್ಲಿ ತಮ್ಮ ಮುಂಬರುವ ಪ್ರಾಜೆಕ್ಟ್‌ಗಳು ಮತ್ತು ಚಲನಚಿತ್ರಗಳ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಕೆಲವು ಸೆಲೆಬ್ರಿಟಿಗಳು ಮುಂಬೈನಲ್ಲಿ ಚಿತ್ರಗಳ ಚಿತ್ರೀಕರಣ ನಡೆಸುತ್ತಿದ್ದಾರೆ ಮತ್ತು ಕೆಲವರು ನಗರದಿಂದ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲ, ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನೂ ಪ್ರಕಟಿಸುತ್ತಿದ್ದಾರೆ. ಇತ್ತೀಚೆಗೆ ಯಶ್ ರಾಜ್ ಫಿಲ್ಮ್ಸ್ ತನ್ನ ಎರಡು ಚಿತ್ರಗಳಾದ ಪೃಥ್ವಿರಾಜ್ ಮತ್ತು ಶಂಶೇರಾ ಬಿಡುಗಡೆ ದಿನಾಂಕಗಳನ್ನು ಬಹಿರಂಗಪಡಿಸಿದೆ. ಅದೇ ಸಮಯದಲ್ಲಿ, ಕೆಲವು ಸೆಲೆಬ್‌ಗಳು ಈವೆಂಟ್‌ಗಳು, ಪಾರ್ಟಿಗಳು ಮತ್ತು ಜಿಮ್‌ಗಳ ಹೊರಗೆ ಕಂಡುಬರುತ್ತಾರೆ.