ಮಲೈಕಾ ಅರೋರಾರ ಡ್ರೆಸ್‌ ಬಗ್ಗೆ ಸ್ವಂತ ಮಗನಿಂದಲೇ ಟ್ರೋಲ್‌ 

Published : Dec 21, 2022, 05:22 PM IST

ಮಲೈಕಾ ಅರೋರಾ (Malaika Arora) ತಮ್ಮ ಡ್ರೆಸ್ಸಿಂಗ್‌ ಕಾರಣದಿಂದ ಆಗಾಗ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರಿಂದ ಟ್ರೋಲ್‌ಗೆ ಗುರಿಯಾಗುತ್ತಾರೆ. ಆದರೆ ಈ ಬಾರಿ ಅವರನ್ನು ಅವರ ಮಗ ಅರ್ಹಾನ್ ಖಾನ್ (Arhaan Khan) ಟ್ರೋಲ್ ಮಾಡಿದ್ದಾರೆ. ವೆಬ್ ಶೋ 'ಮೂವಿಂಗ್ ಇನ್ ವಿತ್ ಮಲೈಕಾ'ದ ಇತ್ತೀಚಿನ ಸಂಚಿಕೆಯಲ್ಲಿ ಮಲೈಕಾ ಧರಿಸಿದ್ದ ಉಡುಪಿನಿಂದಾಗಿ ಈ ಟ್ರೋಲಿಂಗ್ ಆಗಿದೆ. ಈ ಸಂಚಿಕೆಯಲ್ಲಿ ಮಲೈಕಾ ತನ್ನ ಸಹೋದರಿ ಅಮೃತಾ ಅರೋರಾ, ತಾಯಿ ಜಾಯ್ಸ್ ಪಾಲಿಕಾರ್ಪ್ ಮತ್ತು ಮಗ ಅರ್ಹಾನ್ ಅವರನ್ನು ಆಹ್ವಾನಿಸಿದ್ದರು

PREV
17
  ಮಲೈಕಾ ಅರೋರಾರ ಡ್ರೆಸ್‌ ಬಗ್ಗೆ ಸ್ವಂತ ಮಗನಿಂದಲೇ ಟ್ರೋಲ್‌ 

ಮಲೈಕಾ ಅರೋರಾ ಅವರ 20 ವರ್ಷದ ಮಗ ಅರ್ಹಾನ್ ಖಾನ್ ಇತ್ತೀಚೆಗೆ ತನ್ನ ತಾಯಿಯ ವೆಬ್ ಶೋ 'ಮೂವಿಂಗ್ ಇನ್ ವಿತ್ ಮಲೈಕಾ'ದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಮಲೈಕಾ ಅರೋರಾ ಮಗ ಅರ್ಹಾನ್ ತಾಯಿಯ ಡ್ರೆಸ್ ಅನ್ನು ಗೇಲಿ ಮಾಡಿದ್ದಾರೆ,

27

ಸಂಚಿಕೆಯಲ್ಲಿ, ಮಲೈಕಾ ಕಪ್ಪು ಮತ್ತು ಬಿಳಿ ಪಟ್ಟೆಯುಳ್ಳ ತೋಳುಗಳಿಲ್ಲದ ಮತ್ತು ಬೀಜ್ ಪ್ಯಾಂಟ್‌ನೊಂದಿಗೆ ಕ್ರಾಪ್ ಟಾಪ್ ಅನ್ನು ತೊಟ್ಟಿದ್ದರು. ಮಲೈಕಾ ಅವರ ಮಗ ಅರ್ಹಾನ್ ಅವರ ಟಾಪ್ ಅನ್ನು ಸಾರ್ವಜನಿಕವಾಗಿ ಗೇಲಿ ಮಾಡಿದರು. ಅರ್ಹಾನ್ ತಾಯಿಯ ಈ ಟಾಪ್ ಅನ್ನು ಟೇಬಲ್ ನ್ಯಾಪ್ಕಿನ್‌ಗೆ ಹೋಲಿಸಿದ್ದಾರೆ. 

37

ಮಲೈಕಾಗೆ ‘ಟೇಬಲ್ ನ್ಯಾಪ್ಕಿನ್ ತರಹ ಯಾಕೆ ಡ್ರೆಸ್ ಮಾಡಿಕೊಂಡಿದ್ದೀಯಾ ಎಂದು ಅರ್ಹಾನ್ ಕೇಳಿದ್ದಾರೆ. ಮಲೈಕಾ ಅವರು ಈ ಉಡುಪಿನಲ್ಲಿ ಖೈದಿಯಂತೆ ಕಾಣುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಮಗನ ಮಾತಿಗೆ ಮಲೈಕಾರ ಬಳಿ ಉತ್ತರವಿಲಲ್ದೇ ಸುಮ್ಮನೆ ನಕ್ಕಿದ್ದಾರೆ. 

47

ತನ್ನ ಚಿಕ್ಕಮ್ಮ ಅಂದರೆ ಅಮೃತಾಗೆ ತಾನು ಹತ್ತಿರವಾಗಿದ್ದೇನೆ ಎಂದು ಅರ್ಹಾನ್ ಕಾರ್ಯಕ್ರಮದ ಸಮಯದಲ್ಲಿ ಹೇಳಿದರು. ಅರ್ಹಾನ್ ಅಮೃತಾಳನ್ನು ಅಮ್ಮು ಎಂದು ಕರೆಯುತ್ತಾನೆ. ಅಮ್ಮು ತನ್ನ ಎರಡನೇ ತಾಯಿಯಂತೆ ಮತ್ತು ತನ್ನ  ಮೊದಲ ತಾಯಿಯಾಗಲು ಅವರು ತನ್ನಿಂದಾದ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರ್ಹಾನ್‌ ಅವರು ಹೇಳಿದರು.

57

ಅರ್ಹಾನ್ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಮಗ. ಮಲೈಕಾ ಮತ್ತು ಅರ್ಬಾಜ್ ಮೊದಲ ಬಾರಿಗೆ 1998ರಲ್ಲಿ ಕಾಫಿ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಇಲ್ಲಿಂದ ಅವರಿಬ್ಬರ ಆತ್ಮೀಯತೆ ಹೆಚ್ಚಾಯಿತು ಮತ್ತು 12 ಡಿಸೆಂಬರ್ 1998 ರಂದು ಅವರು ವಿವಾಹವಾದರು. 9 ನವೆಂಬರ್ 2002 ರಂದು, ಮಲೈಕಾ ತನ್ನ ಮಗ ಅರ್ಹಾನ್‌ಗೆ ಜನ್ಮ ನೀಡಿದರು.

67

ಮಲೈಕಾ ಮತ್ತು ಅರ್ಬಾಜ್ ಅವರ ಸಂಬಂಧ ಸುಮಾರು 18 ವರ್ಷಗಳ ಕಾಲವಿತ್ತು. ಮಾರ್ಚ್ 2016 ರಲ್ಲಿ ಅವರು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ ಇವರಿಗೆ  ಮೇ 2017 ರಲ್ಲಿ ವಿಚ್ಛೇದನ ಸಿಕ್ಕಿತು.

77

ಮಲೈಕಾ ಅರೋರಾ ಈಗ ತನಗಿಂತ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಅರ್ಬಾಜ್ ಖಾನ್ ಮಾಡೆಲ್ ಮತ್ತು ನಟಿ ಜಾರ್ಜಿಯಾ ಆಂಡ್ರಿಯಾನಿ ಅವರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ.

Read more Photos on
click me!

Recommended Stories