ಇತ್ತೀಚೆಗೆ ಬಾಲಿವುಡ್‌ನಲ್ಲಿ ಬಾಯ್ಕಾಟ್ ಟ್ರೆಂಡ್ ಹೆಚ್ಚಾಗುತ್ತಿದೆ. ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ, ರಣಬೀರ್ ಆಲಿಯಾರ ಬ್ರಹ್ಮಾಸ್ತ್ರ ಅದರ ನಂತರ ಈಗ ಶಾರುಖ್ ಖಾನ್ ಅವರ ಪಠಾಣ್ ಹೀಗೆ ಒಂದರಂತೆ ಒಂದು ಸಿನಿಮಾಗಳು ಈ ವರ್ಷ ಬಾಹಿಷ್ಕಾರಕ್ಕೆ ಗುರಿಯಾಗುತ್ತಿರುವ ಸಿನಿಮಾಗಳಾಗಿವೆ. ಆದರೆ. ಸಿನಿಮಾಗಳನ್ನು ಬಹಿಷ್ಕರಿಸುವ ಟ್ರೆಂಡ್ ಹೊಸದೇನು ಅಲ್ಲ. ಈ ಹಿಂದೆಯೂ ಸಾಕಷ್ಷು ಚಿತ್ರಗಳು ಬೇರೆ ಬೇರೆ ಕಾರಣಕ್ಕೆ ಜನರ ಕೆಂಗಣ್ಣಿಗೆ ಗುರಿಯಾಗಿ ಈ ಪಟ್ಟಿಗೆ ಸೇರಿವೆ.
1998ರಲ್ಲಿ ಬಿಡುಗಡೆಯಾದ ದೀಪಾ ಮೆಹ್ತಾ ಅವರ ಫೈಯರ್ ಸಿನಿಮಾ ಸಾಕಷ್ಷು ವಿವಾದಗಳಿಗೆ ಗುರಿಯಾಗಿತ್ತು. ಇದರ ವಿರುದ್ಧ ಶಿವಸೇನೆ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಸಾಂಪ್ರದಾಯಿಕ ಕುಟುಂಬವೊಂದರಲ್ಲಿ ಇಬ್ಬರು ಮಹಿಳೆಯರ ನಡುವಿನ ಸಂಬಂಧದ ಸುತ್ತ ಸುತ್ತುವ ಈ ಕಥೆಯು ಬಲಪಂಥೀಯ ಸಂಘಟನೆಯ ಕೋಪಕ್ಕೆ ಗುರಿಯಾಗಿತ್ತು ಹಾಗೂ ಸಂಘಟನೆಗಳು ಚಿತ್ರ ಮಂದಿರದೊಳಗೆ ನುಗ್ಗಿ, ಪ್ರದರ್ಶನವನ್ನು ಬ್ಯಾನ್ ಮಾಡಲು ಸಹ ಪ್ರತಿಭಟನೆ ನಡೆಸಿದ್ದರು.
212
ವಾಟರ್
ದೀಪಾ ಮೆಹ್ತಾ ಅವರು ನಿರ್ದೇಶಿಸಿದ್ದ ಇನ್ನೊಂದು ಸಿನಿಮಾ ವಾಟರ್ ಸಹ ದೇಶದಲ್ಲಿ ಸಾಕಷ್ಟು ಕೋಲಹಲ ಹುಟ್ಟು ಹಾಕಿತ್ತು. ಈ ಸಿನಿವು ಇದೊಂದು ಹಿಂದೂ ವಿರೋಧಿ ಎಂದು ಶಿವಸೇನಾ ಕಾರ್ಯಕರ್ತರು ತೀವ್ರ ವಿರೋಧ ಮಾಡಿದ್ದರು ಜೊತೆಗೆ ಶೂಟಿಂಗ್ ಸ್ಥಳದಲ್ಲಿ ಭಾರೀ ಪ್ರತಿಭಟನೆ ನಡೆಸಿ ನಿರ್ದೇಶಕಿಗೆ ಬೆದರಿಕೆ ಕೂಡ ಹಾಕಲಾಗಿತ್ತು. ವಿವಾದಗಳ ಕಾರಣದಿಂದಾಗಿ ಅನೇಕ ಚಿತ್ರ ಮಂದಿರಗಳಿಗೆ ಈ ಸಿನಿಮಾ ತಲುಪಲಿಲ್ಲ.
312
ಹೈದರ್
2014ರಲ್ಲಿ ತೆರೆ ಕಂಡ ವಿಶಾಲ್ ಭಾರದ್ವಾಜ್ ಅವರ ಶಾಹಿದ್ ಕಪೂರ್ ಅಭಿನಯಿಸಿದ ಹೈದರ್ ಈ ಪಟ್ಟಿಯಲ್ಲಿರುವ ಇನ್ನೊಂದು ಸಿನಿಮಾ. ಭಾರತೀಯ ಸೇನೆಯನ್ನು ಅವಮಾನ ಮಾಡಲಾಗಿದೆ ಎಂಬ ವಿವಾದಕ್ಕೆ ಈ ಸಿನಿಮಾಕ್ಕೆ ಗುರಿಯಾಗಿದೆ .
412
ಪಿಕೆ
ಆಮಿರ್ ಖಾನ್, ಅನುಷ್ಕಾ ಶರ್ಮಾ ಅಭಿನಯಿಸಿರುವ ರಾಜ್ ಕುಮಾರ್ ಹಿರಾನಿ ಅವರ ಪಿಕೆ ಸಿನಿಮಾದ ವಿರುದ್ದ ಯೋಗ ಗುರು ಬಾಬಾ ರಾಮ್ ದೇವ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ದೇವರು ಅವಮಾನಿಸಿದ್ದಾರೆ ಎಂಬ ಕಾರಣಕ್ಕಾಗಿ ಕೆಲ ಕಡೆ ಸಿನಿಮಾದ ವಿರುದ್ದ FIR ಕೂಡ ದಾಖಲಾಗಿತ್ತು.
512
ದಂಗಲ್
ಆಮೀರ್ ಖಾನ್ ಅವರ ಇನ್ನೊಂದು ಸೂಪರ್ ಹಿಟ್ ಸಿನಿಮಾ ದಂಗಲ್ ಸಹ ಬಾಯ್ಕಾಟ್‌ಗೆ ಗುರಿಯಾಗಿತ್ತು. ದೇಶದ ಅಹಿಷ್ಣುತೆಯಿಂದ ನನಗೆ ಇಲ್ಲಿ ವಾಸಿಸಲು ಕಷ್ಟವಾಗುತ್ತಿದೆ ಎಂಬ 2015ರ ಅಮೀರರ ಖಾನ್ ಅವರ ಹೇಳಿಕೆ ದೇಶದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಈ ಕಾರಣಕ್ಕಾಗಿ 2016ರಲ್ಲಿ ಈ ಸಿನಿಮಾದ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು ಮತ್ತು ʼದಂಗಲ್ ಪೋಸ್ಟರ್‌ಗಳನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು.
612
ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ
ಈ ಸಿನಿಮಾದ ಹೆಸರೇ ವಿವಾದ್ಕಕೆ ಮುಖ್ಯ ಕಾರಣವಾಗಿತ್ತು. 2017ರಲ್ಲಿ ಭೋಪಾಲ್‌ನ ಮುಸ್ಲಿಂ ಮುಖಂಡರ ಗುಂಪು ಅಲಂಕೃತ ಶ್ರೀವಾಸ್ತವ್ ಅವರ ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ ಸಿನಿಮಾವನ್ನು ಬಹಿಷ್ಕರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಕಿಡಿಕಾರಿದ್ದರು
712
ಪದ್ಮಾವತ್
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಅಭಿನಯದ ʼಪದ್ಮಾವತಿ' ಸಿನಿಮಾವನ್ನು ಸಹ ಈ ಬಹಿಷ್ಕಾರಕ್ಕೆ ಗುರಿಯಾಗಿತ್ತು. ಸಿನಿಮಾವು ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಶ್ರೀ ರಜಪೂತ್ ಕರ್ಣಿ ಸೇನೆಯ ಸದಸ್ಯರು ಜೈಪುರದಲ್ಲಿ ಸಿನಿಮಾ ಸೆಟ್‌ಗಳ ಜೊತೆಗೆ ಬನ್ಸಾಲಿ ಅವರ ಮೇಲೆ ಹಲ್ಲೆ ಸಹ ನಡೆಸಿತ್ತು.
812
ಡಾರ್ಲಿಂಗ್ಸ್
ಇದೇ ವರ್ಷ ತೆರೆಗೆ ಬಂದಿದ್ದ ಆಲಿಯಾ ಭಟ್ ಅಭಿನಯದ ʼಡಾರ್ಲಿಂಗ್ಸ್ʼ ಪುರುಷರ ವಿರುದ್ಧ ಕೌಟುಂಬಿಕ ಹಿಂಸೆಯನ್ನು ಪ್ರಚಾರ ಮಾಡುತ್ತದೆ ಎಂದು ವಿವಾದ್ಕಕೆ ಗುರಿಯಾಯಿತು.
912
ಲಾಲ್ ಸಿಂಗ್ ಚಡ್ಡಾ
ಆಮೀರ್ ಖಾನ್ ಅವರ ಅಹಿಷ್ಣುತೆʼ ಹೇಳಿಕೆ ಮತ್ತುಕ ಕರೀನಾ ಅವರ ಉದ್ದಟತನದ ಮಾತುಗಳು ಸಿನಿಮಾದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಲಾಲ್ ಸಿಂಗ್ ಚಡ್ಡಾʼ ಸಿನಿಮಾವನ್ನು ಬಹಿಷ್ಕಾರದ ಟ್ರೆಂಡ್ ಟ್ವಿಟರ್‌ನಲ್ಲಿ ಸಖತ್ ಸದ್ದು ಮಾಡಿತ್ತು
1012
ರಕ್ಷಾ ಬಂಧನ್
ಅಕ್ಷಯ್ ಕುಮಾರ್ ಅಭಿನಯದ ʼರಕ್ಷಾ ಬಂಧನ್ʼ ಸಿನಿಮಾದ ಬರಹಗಾರ್ತಿ ಕನಿಕಾ ಧಿಲ್ಲೋನ್ ಅವರ ಹಿಜಾಬ್‌ಗೆ ಬೆಂಬಲ ಹಾಗೂ ಪೌರತ್ವ ತಿದ್ದುಪಡಿ ಕಾಯಿದೆಗೆ ಬೆಂಬಲ ನೀಡಿದ ಟ್ವೀಟ್ ವಿವಾದಕ್ಕೆ ಗುರಿಯಾಗಿತ್ತು.
1112
ಬ್ರಹ್ಮಾಸ್ತ್ರ
ರಣಬೀರ್ ಕಪೂರ್ ಅಭಿನಯದ ʼಬ್ರಹ್ಮಾಸ್ತ್ರʼ ಸಿನಿಮಾ ಈ ಪಟ್ಟಿಯಲ್ಲಿರುವ ಇನ್ನೊಂದು ಸಿನಿಮಾ. ರಣಬೀರ್ ಕಪೂರ್ ದನದ ಮಾಂಸ ತಿನ್ನುತ್ತಾರೆ ಎಂಬ ಕಾರಣವನ್ನು ಇಟ್ಟುಕೊಂಡು ಈ ಸಿನಿಮಾವನ್ನು ಬಾಯ್ಕಾಟ್ ಮಾಡುವಂತೆ ಟ್ರೆಂಡ್ ಸೃಷ್ಟಿಯಾಗಿತ್ತು. ಆದರೆ ಇದರ ನಡುವೆಯೇ ಸಿನಿಮಾ ವರ್ಷದ ದೊಡ್ಡ ಹಿಟ್ ಆಗಿ ಹೊರಹೊಮ್ಮಿತ್ತು.
1212
ಪಠಾಣ್
ಶಾರುಖ್ ಖಾನ್ ಅಭಿನಯದ ಇನ್ನು ಬಿಡುಗಡೆಯಾಗದ ʼಪಠಾಣ್ʼ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಗಲಾಟೆ ಶುರುವಾಗಿದೆ. ಈ ಸಿನಿಮಾದ ʼಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಬಿಕಿನಿ ಈ ವಿವಾದದ ಕೇಂದ್ರ ಬಿಂದುವಾಗಿದೆ ಪ್ರತಿಭಟನೆ ನಡೆಸಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.