ಬೇಗ ಹಣ ಗಳಿಸೋಕೆ ಚಿಕ್ಕ ವಯಸ್ಸಿಗೆ ಕೆಲಸ ಮಾಡಲು ಶುರುಮಾಡಿದ್ರು ಈ ನಟಿ!

First Published | Oct 24, 2021, 4:38 PM IST

ಬಾಲಿವುಡ್‌ನ (Bollywood) ಹಾಟ್‌ ಅಂಡ್‌ ಫೀಟ್‌ ನಟಿ  ಮಲೈಕಾ ಅರೋರಾ (Malaika Arora) ಅವರಿಗೆ 48 ವರ್ಷ ಎಂದರೆ ನಂಬಲು ಸಾಧ್ಯವಿಲ್ಲ. 23 ಅಕ್ಟೋಬರ್ 1973 ರಂದು ಮುಂಬೈನಲ್ಲಿ ಜನಿಸಿದ ಮಲೈಕಾ ಒಂದು ಕಾಲದಲ್ಲಿ ಟಾಪ್ ಮಾಡೆಲ್  (Model) ಆಗಿದ್ದರು ಹಾಗೂ  ಮಲೈಕಾ 90 ರ ದಶಕದಲ್ಲಿ ಅನೇಕ ಮ್ಯೂಸಿಕ್ ವಿಡಿಯೋಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೇ, ಅವರು ವಿಜೆ ಮತ್ತು ರಾಂಪ್ ವಾಕ್ ಕೂಡ ಮಾಡಿದ್ದಾರೆ. ಅಂದಹಾಗೆ, ಆಕೆಯು ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಹಣವನ್ನು ಗಳಿಸಲು ಬಯಸಿದ ಅರೋರಾ ಅದಕ್ಕಾಗಿಯೇ  ಮಾಡೆಲಿಂಗ್ ಮಾಡಲು ಪ್ರಾರಂಭಿಸಿದರು. ಚಿಕ್ಕ   ವಯಸ್ಸಿನಲ್ಲಿ ಮಲೈಕಾರ ಈ  ನಿರ್ಧಾರದಿಂದ  ಅವರ ಮನೆಯವರು ಮೊದಲು ಗಾಬರಿಯಾಗಿದ್ದರು. ಆದರೆ  ಅವರ ಕುಟುಂಬ ಸದಸ್ಯರು ಸದಾ ಅವರನ್ನು ಬೆಂಬಲಿಸಿದರು ಮತ್ತು ಅವರ ನಿರ್ಧಾರವನ್ನು ಗೌರವಿಸಿದರು. ಮಲೈಕಾ ಅರೋರಾ ಅವರ ಜೀವನಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳಿಗಾಗಿ ಕೆಳಗೆ ಓದಿ.
 

ಇತ್ತೀಚೆಗಷ್ಟೇ ಮಲೈಕಾ ಅರೋರಾ ಸಂದರ್ಶನವೊಂದರಲ್ಲಿ ಹೇಳಿದ್ದು, ತನಗೆ ಚಿಕ್ಕ ವಯಸ್ಸು ಚಾಲೆಂಜ್‌ಗಳಿಂದ ಕೂಡಿತ್ತು ಎಂದಿದ್ದಾರೆ. ' ನಾನು  ಯಾವುದೇ ನಿರೀಕ್ಷೆಯಿಲ್ಲದೆ ಬಂದಿದ್ದೇನೆ. ಪಾಕೆಟ್ ಮನಿ ಗಳಿಸಲು ಮಾಡೆಲಿಂಗ್‌  ಉತ್ತಮ ಅವಕಾಶ ಎಂದು ನಾನು ಭಾವಿಸಿದೆ. ಇದು ಅಂತಿಮವಾಗಿ ನನ್ನ ವೃತ್ತಿಜೀವನವಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ' ಎಂದು ಮಲೈಕಾ ಹೇಳಿದರು.

1998 ರ ಸಿನಿಮಾ ದಿಲ್ ಸೆಯಲ್ಲಿ 'ಚೈಯಾ ಚೈಯಾ..' ಐಟಂ  ನೃತ್ಯದೊಂದಿಗೆ ಬಾಲಿವುಡ್‌ನಲ್ಲಿ ತಮ್ಮ  ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಹಾಡಿನಲ್ಲಿ ಶಾರುಖ್ ಖಾನ್ ಜೊತೆ ಮಲೈಕಾ ಮಾಡಿದ ಡ್ಯಾನ್ಸ್‌ ಸಖತ್‌ ಹಿಟ್‌ ಆಗಿತ್ತು. ಅವರು ಹಿರೋಯಿನ್‌ ಆಗಿ ಯಾವುದೇ ಸಿನಿಮಾದಲ್ಲಿ ಕೆಲಸ ಮಾಡದಿದ್ದರೂ, ಅವರ ಜನಪ್ರಿಯತೆ ಯಾವುದೇ ಟಾಪ್‌ ನಟಿಗಿಂತ ಕಡಿಮೆಯಿಲ್ಲ.

Tap to resize

ಮಲೈಕಾ ಅರೋರಾ ಕೆಲವು ವರ್ಷಗಳ ಹಿಂದೆ ನೇಹಾ ಧೂಪಿಯಾ ಅವರ ಚಾಟ್ ಶೋಗೆ ಆಗಮಿಸಿದ್ದರು, ಅಲ್ಲಿ ಅವರು ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರು.  ಮಲೈಕಾ ತನ್ನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ತನ್ನ ಕಪ್ಪು ಮೈಬಣ್ಣದ ಕಾರಣದಿಂದ ಅಪಹಾಸ್ಯಕ್ಕೊಳಗಾಗಿದ್ದರು ಎಂದು ಹೇಳಿದ್ದರು. 

ಅವರಿಗೆ  ಇಂಡಸ್ಟ್ರಿಯಲ್ಲಿ ಭೇದ ಭಾವ ಮಾಡಲಾಗಿದೆ. ಜನರು ಡಾರ್ಕ್ ಸ್ಕಿನ್ ಮತ್ತು ಫೇರ್ ಸ್ಕಿನ್ ಎಂಬ ತಾರತಮ್ಯ ಮಾಡುತ್ತಿದ್ದರು ಎಂದು ಮಲೈಕಾ ಅರೋರಾ ಹೇಳಿದ್ದರು. ಅವಳು ಪ್ರೆಂಗ್ನೆಸಿಯ ಮೊದಲು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ ಮತ್ತು ಮಗ ಹುಟ್ಟಿದ  40 ದಿನಗಳ ನಂತರ ಕೆಲಸಕ್ಕೆ ಮರಳಿದ್ದರು ಎಂದು ನಟಿ ಹೇಳಿದ್ದರು.
 

ಮಲೈಕಾ ಅರೋರಾ ಉತ್ತಮ ಡ್ಯಾನ್ಸರ್, ಆದ್ದರಿಂದಲೇ ಅವರ ಚಿತ್ರಗಳಲ್ಲಿನ ಐಟಂ ಸಂಖ್ಯೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅವರು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್‌ಗಳಲ್ಲಿ ಒಬ್ಬರು. ಒಂದು ಐಟಂ ನಂಬರ್‌ಗೆ ಹೆಜ್ಜೆ ಹಾಕಲು  ಮಲೈಕಾ ಸುಮಾರು 1 ಕೋಟಿ ರೂ ಸಂಭಾವನೆ ಪಡೆಯುತ್ತಾರೆ.

ತಮ್ಮ 48ನೇ ವಯಸ್ಸಿನಲ್ಲೂ ಮಲೈಕಾ ಯಂಗ್‌ ನಟಿಯರಿಗೆ  ಸ್ಪರ್ಧೆ ನೀಡಿದ್ದಾರೆ. ಫಿಟ್ನೆಸ್ ಹೊರತಾಗಿ, ಗಳಿಕೆಯಲ್ಲಿಯೂ ಸಹ ಅವರು ತುಂಬಾ ಮುಂದಿದ್ದಾರೆ. ಟಿವಿ ಶೋ ಮತ್ತುಸಿನಿಮಾಗಳಿಂದ ಸಾಕಷ್ಟು ದೊಡ್ಡ ಮೊತ್ತವನ್ನು ಸಂಪಾದಿಸುವ ಅರೋರಾ  ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. 

ಮಲೈಕಾ ಮತ್ತು ಅರ್ಬಾಜ್ ಸುಮಾರು 5 ವರ್ಷಗಳ ಡೇಟಿಂಗ್ ನಂತರ 1998 ರಲ್ಲಿ ವಿವಾಹವಾದರು. ಆದರೆ 2016 ರಲ್ಲಿ ಅವರು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ಮೇ 2017 ರಲ್ಲಿ ವಿಚ್ಛೇದನ ಪಡೆದರು. ಇಬ್ಬರಿಗೂ ಅರ್ಹಾನ್ ಖಾನ್ ಎಂಬ ಒಬ್ಬ ಮಗ ಇದ್ದಾನೆ ಮತ್ತು ಈಗ ಅವನು ಮಲೈಕಾರ ಜೊತೆ ವಾಸಿಸುತ್ತಾನೆ. 

ವಿಚ್ಛೇದನಕ್ಕೆ ಬದಲಾಗಿ ಮಲೈಕಾ ಅರ್ಬಾಜ್ ಖಾನ್  (Aarbaz Khan) ಭಾರಿ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾರೆ. ವರದಿಯ ಪ್ರಕಾರ, ಮಲೈಕಾ 10 ಕೋಟಿ ರೂ.ಗಿಂತ ಕಡಿಮೆ ಹಣ ಪಡೆಯಲು ಸಿದ್ಧರಿರಲಿಲ್ಲ. ಅದರೆ ಅರ್ಬಾಜ್ ಜೀವನಾಂಶವಾಗಿ ಮಲೈಕಾಗೆ 15 ಕೋಟಿ ರೂ. ನೀಡಿದ್ದಾರೆ.

ಅರ್ಬಾಜ್‌ನಿಂದ ವಿಚ್ಛೇದನ ಪಡೆದ ನಂತರ, ಮಲೈಕಾ ತನ್ನ ಜೀವನದಲ್ಲಿ ಮೂವ್‌ ಅನ್‌ ಆಗಿದ್ದಾರೆ ಮತ್ತು ಪ್ರಸ್ತುತ ವಯಸ್ಸಿನಲ್ಲಿ ತನ್ನಗಿಂತ ಕಿರಿಯ ನಟ  ಅರ್ಜುನ್ ಕಪೂರ್‌ (Arjun Kapoor) ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಸುದ್ದಿಯ ಪ್ರಕಾರ, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Latest Videos

click me!