Malaika -Arjun Holiday: ಬ್ರೇಕಪ್‌ ರೂಮರ್‌ ನಡುವೆ ಸಿಕ್ರೇಟ್‌ ರೋಮ್ಯಾಂಟಿಕ್ ಹಾಲಿಡೇ!

Suvarna News   | Asianet News
Published : Dec 04, 2021, 09:17 PM IST

ಮಲೈಕಾ ಅರೋರಾ (Malaika Arora)  ಮತ್ತು ಅರ್ಜುನ್ ಕಪೂರ್ (Arjun Kapoor) ಸಂಬಂಧ ಎಲ್ಲರಿಗೂ ತಿಳಿದೇ ಇದೆ. ಇಬ್ಬರೂ 3 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚಿಗೆ ಅವರ ಬ್ರೇಕಪ್ ಸುದ್ದಿ ಬಂದಿತ್ತು. ಅದರ ನಡುವೆ ಇಬ್ಬರೂ ರೊಮ್ಯಾಂಟಿಕ್ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ. ಇಬ್ಬರೂ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  

PREV
17
Malaika -Arjun Holiday: ಬ್ರೇಕಪ್‌ ರೂಮರ್‌ ನಡುವೆ ಸಿಕ್ರೇಟ್‌ ರೋಮ್ಯಾಂಟಿಕ್ ಹಾಲಿಡೇ!

ಅರ್ಜುನ್ ಕಪೂರ್ ಮಲೈಕಾರ ಜೊತೆಗಿನ ತಮ್ಮ ಸಂಬಂಧವನ್ನು ಎಂದಿಗೂ  ಮುಚ್ಚಿಟ್ಟಿಲ್ಲ. ಮಲೈಕಾ ಅರೋರಾ ಅವರ ಹುಟ್ಟುಹಬ್ಬಕ್ಕೆ ಅರ್ಜುನ್‌ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಅಕ್ಟೋಬರ್ 23 ರಂದು, ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್‌ಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

27

ಅದರಲ್ಲಿ ಮಲೈಕಾ  ಅರ್ಜುನ್ ಅವರ ಹಣೆಯ ಮೇಲೆ ಮುತ್ತಿಡುತ್ತಿದ್ದಾರೆ. ಈ ದಿನ ಅಥವಾ ಇನ್ನಾವುದೇ ದಿನ ನೀನು ನಗುತ್ತಲೇ ಇರಬೇಕೆಂದು ನಾನು ಬಯಸುತ್ತೇನೆ' ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅರ್ಜುನ್ ಮತ್ತು ಮಲೈಕಾ ಶೀಘ್ರದಲ್ಲೇ ಮಾಡಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ದೃಢೀಕರಣವಿಲ್ಲ,

37

ಇತ್ತೀಚೆಗಷ್ಟೇ ಇವರಿಬ್ಬರ ಬ್ರೇಕಪ್ ಸುದ್ದಿ ಮುನ್ನೆಲೆಗೆ ಬಂದಿತ್ತು. ಆದರೆ ಈ ಕಪಲ್‌  ಅದು ಕೇವಲ ರೂಮರ್‌ ಮಾತ್ರ ಎಂದು ಸಾಬೀತು ಮಾಡಿದ್ದಾರೆ ಮತ್ತು ಇಬ್ಬರೂ ಸಿಕ್ರೇಟ್‌ ಆಗಿ ರೋಮ್ಯಾಂಟಿಕ್ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ.  ತಮ್ಮ ಇನ್‌ಸ್ಟಾ ಸ್ಟೋರಿಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
 

47

ಫೋಟೋಗಳಲ್ಲಿ ಅರ್ಜುನ್‌ ಮತ್ತು ಮಲೈಕಾ  ಒಟ್ಟಾಗಿಲ್ಲ. ಆದರೆ  ಇಬ್ಬರೂಪ್ರತ್ಯೇಕ ಫೋಟೋಗಳನ್ನು ಹಾಕಿದ್ದಾರೆ. ಅರ್ಜುನ್ ಕಪೂರ್ ಒಬ್ಬಂಟಿಯಾಗಿ ಸಮುದ್ರದ ಅಲೆಗಳನ್ನುನೋಡುತ್ತಾ ಕುಳಿತಿದ್ದಾರೆ. ಅದೇ ಸಮಯದಲ್ಲಿ, ಮಲೈಕಾ ಬಿಕಿನಿಯಲ್ಲಿ ಮರಳಿನ ಮೇಲೆ ಮಲಗಿದ್ದಾರೆ. ಈ ಫೋಟೋಗಳು ಸಖತ್‌ ವೈರಲ್‌ ಆಗಿವೆ.

57

ಫೋಟೋ ಜೊತೆ  ಅರ್ಜುನ್ ನಾನು ಎಲ್ಲಿದ್ದೇನೆ ಎಂದು  ಪ್ರಶ್ನೆ ಕೇಳಿದ್ದಾರೆ. ಮಲೈಕಾ ತನ್ನ ಬಾಯ್ ಫ್ರೆಂಡ್ ಜೊತೆ ಮಾಲ್ಡೀವ್ಸ್ ನಲ್ಲಿ ರೊಮ್ಯಾಂಟಿಕ್ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

67

ನಟಿ ಮಲೈಕಾ ಅರೋರಾ ಮಾಲ್ಡೀವ್ಸ್‌ನ ಮರಳಿನ ಮೇಲೆ ಮಲಗಿರುವುದು ಬಿಸಿಲಿನಲ್ಲಿ ಸೋಕ್‌ ಆಗುತ್ತಿರುವಂತೆ ಕಂಡುಬಂದರು. ಇಬ್ಬರೂ ಸಿಕ್ರೇಟ್‌ ಆಗಿ ರೋಮ್ಯಾಂಟಿಕ್ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ. ಆದರೆ ಇಬ್ಬರೂ ಪ್ರತ್ಯೇಕ ಫೋಟೋಗಳನ್ನು ಹಾಕಿದ್ದಾರೆ.

77

ಕೆಲಸದ  ಬಗ್ಗೆ ಹೇಳುವುದಾದರೆ, ಅರ್ಜುನ್ ಕಪೂರ್ ಕೊನೆಯದಾಗಿ 'ಭೂತ್ ಪೊಲೀಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಸೈಫ್ ಅಲಿ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ. ಇದಲ್ಲದೆ, ನಿರ್ದೇಶಕ ಮೋಹಿತ್ ಸೂರಿ ಅವರ 'ಏಕ್ ವಿಲನ್ ರಿಟರ್ನ್ಸ್' ಚಿತ್ರದಲ್ಲಿ ಅರ್ಜುನ್ ಕಪೂರ್ ಜಾನ್ ಅಬ್ರಹಾಂ, ದಿಶಾ ಪಟಾನಿ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಕೆಲಸ ಮಾಡಲಿದ್ದಾರೆ.
 

Read more Photos on
click me!

Recommended Stories