ವಿವಾದಿತ ಮುಂಬೈ ಬಂಗಲೆ ಮಾರಾಟ ಮಾಡಿದ ನಟಿ ಕಂಗನಾ,ಲಾಭಕ್ಕಿಂತ ನಷ್ಟವೇ ಹೆಚ್ಚು!

First Published | Sep 10, 2024, 1:05 PM IST

ನಟಿ ಕಂಗನಾ ರಣಾವತ್ ತಮ್ಮ ವಿವಾದಿತ ಮುಂಬೈ ಬಂಗಲೆ ಮಾರಾಟ ಮಾಡಿದ್ದಾರೆ. ಅಕ್ರಮ ನಿರ್ಮಾಣ ಆರೋಪ ವಿವಾದದಿಂದ ಈ ಬಂಗಲೆ ಭಾರಿ ಸುದ್ದಿಯಾಗಿತ್ತು 27 ಕೋಟಿಗೆ ಈ ಬಂಗಲೆ ಖರೀದಿಸಿದ್ದ ಕಂಗನಾ ಇದೀಗ ಮಾರಾಟ ಮಾಡಿದ ಬೆಲೆ ಎಷ್ಟು? 

ಮಂಡಿ ಬಿಜೆಪಿ ಸಂಸದೆ ಕಂಗನಾ ರಣವಾತ್ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ವಿವಾದಿತ ಹೇಳಿಕೆ, ಪೋಸ್ಟ್ ಮೂಲಕ ಹಲವು ಬಾರಿ ಸುದ್ದಿಯಾಗಿದ್ದಾರೆ. ಇತ್ತ ಕಂಗನಾ ರಣಾವತ್ ಬಂಗಲೇ ಕೂಡ ವಿವಾದಗಳಿಂದ ಮುಕ್ತವಾಗಿಲ್ಲ. ಆದರ ಈ ವಿವಾದಿತ ಬಂಗಲೆಯನ್ನು ಕಂಗನಾ ರಣಾವತ್ ಮಾರಾಟ ಮಾಡಿದ್ದಾರೆ. ಆದರೆ ಈ ಮಾರಾಟದಲ್ಲಿ ಕಂಗನಾ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ.

ವಿವಾದಿತ ಮುಂಬೈನ ಬಂಗಲೆಯನ್ನು ಕಂಗನಾ ರಣಾವತ್ 32 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಬಂಗಲೆಯನ್ನ ಕಂಗನಾ ರಣವಾತ್ ಕನಿಷ್ಠ 40 ಕೋಟಿಗೆ ಮಾರಾಟ ಮಾಡಲು ಇಟ್ಟಿದ್ದರು. ಆದರೆ ವಿವಾದಗಳು, ಅಕ್ರಮ ನಿರ್ಮಾಣ ಆರೋಪದಿಂದ ಈ ಕಟ್ಟದ ನಿರೀಕ್ಷಿತ ಮೊತ್ತಕ್ಕೆ ಮಾರಟವಾಗಿಲ್ಲ.  ಉದ್ದೇಶಿತ ಮೊತ್ತಕ್ಕಿಂತ 8 ಕೋಟಿ ಕಡಿಮೆ ಬೆಲೆಗೆ ಮಾರಾಟವಾಗಿದೆ

Latest Videos



ಪಾಲಿ ಹಿಲ್‌ನಲ್ಲಿರುವ ಈ ಬಂಗಲೆಯನ್ನು ಕಂಗನಾ ರಣಾವತ್ 20.7 ಕೋಟಿ ರೂಪಾಯಿಗೆ ಖರೀದಿಸಿದ್ದರು. 2017ರಲ್ಲಿ ಕಂಗನಾ ರಣವಾತ್ ಈ ಬಂಗಲೆಯನ್ನು ಖರೀದಿಸಿದ್ದಾರೆ. 2022ರ ಡಿಸೆಂಬರ್ ತಿಂಗಳಲ್ಲಿ ಇದೇ ಬಂಗಲೆಯನ್ನು ಅಧಾರವಾಗಿಟ್ಟುಕೊಂಡು ಬ್ಯಾಂಕ್ ಮೂಲಕ 27 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಇದೀಗ 32 ಕೋಟಿಗೆ ಮಾರಾಟ ಮಾಡಿದ್ದಾರೆ. 

ಕಂಗನಾ ಬಂಗಲೆ ಖರೀದಿಸಿ  ಮಾರಾಟ ಮಾಡಿ ಸರಿಸುಮಾರು 12 ಕೋಟಿ ರೂಪಾಯಿ ಲಾಭ ಪಡೆದಿದ್ದಾರೆ. ಆದರೆ ಅಂಕಿ ಅಂಶದಲ್ಲಿ ಲಾಭ ಕಂಡರೂ ನಟಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಕಾರಣ 27 ಕೋಟಿ ರೂಪಾಯಿ ಇದೇ ಬಂಗಲೆ ಮೂಲಕ ಸಾಲ ಪಡೆದಿರುವ ಕಂಗನಾ 2 ರಿಂದ 4 ಕೋಟಿ ಬಡ್ಡಿ ಕಟ್ಟಿದ್ದಾರೆ. ಇನ್ನು ಜೆಸಿಬಿ ಹಾನಿಯಿಂದ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ನವೀಕರಣಕ್ಕಾಗಿ ಖರ್ಚು ಮಾಡಿದ್ದಾರೆ. ಇದೆಲ್ಲಾ ಲೆಕ್ಕ ಹಾಕಿದರೆ ಕಂಗನಾಗೆ ಪಾಲಿ ಹಿಲ್ ಬಂಗಲೆಯಿಂದ ದಕ್ಕಿದ್ದು ಶೂನ್ಯ.

ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಚಿತ್ರಕ್ಕೆ ಹಲವು ಅಡೆ ತಡೆ ಎದುರಾಗಿದೆ. ಚಿತ್ರ ಬಿಡುಗಡೆ ಪ್ರಯತ್ನದ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಕಂಗನಾ ಬಂಗಲೆ ಮಾರಾಟ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. 

ಮುಂಬೈನ ಪಾಲಿ ಹಿಲ್‌ನಲ್ಲಿರುವ ಕಂಗನಾ ರಣಾವತ್ ಬಂಗಲೆ ಅಕ್ರಮವಾಗಿ ನಿರ್ಮಾಣ ಕಾರಣದಿಂದ ಮುಂಬೈ ಪಾಲಿಕೆ ಕೆಡವಲು ಮುಂದಾಗಿತ್ತು. ಇದರಂತೆ ಬುಲ್ಡೋಜರ್ ಬಂಗಲೆ ಕೆಡವಲು ಕೆಲಸ ಆರಂಭಿಸಿತ್ತು. ಅಷ್ಟರಲ್ಲೇ ಬಾಂಬೈ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಕೋರ್ಟ್ ರಿಲೀಫ್ ನೀಡಿತ್ತು. ಹೀಗಾಗಿ ಕಂಗನಾ ಬಂಗಲೆ ಧ್ವಂಸವಾಗುವುದರಿಂದ ಬಚಾವ್ ಆಗಿತ್ತು.

ಆದರೆ ಬಂಗಲೆಯ ಕೆಲ ಭಾಗ ಜೆಸಿಬಿಯಿಂದ ಹಾನಿಯಾಗಿತ್ತು. ಇದಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕಂಗನಾ ರಣಾವತ್ ಪಾಲಿಗೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ಮು ಮುಂಬೈ ಪಾಲಿಕೆ ತಿರಸ್ಕರಿಸಿತ್ತು. ಈ ವಿವಾದಗಳಿಂದ ಬಂಗಲೆ ನಿರೀಕ್ಷಿತ ಬೆಲೆಗೆ ಮಾರಾಟವಾಗಿಲ್ಲ. 

click me!