ಪುಸ್ತಕದ ಪ್ರಕಾರ, ಯಾವಾಗ ನರ್ಗಿಸ್, ಸುನಿಲ್ ದತ್ ಅವರನ್ನು ಮದುವೆಯಾಗಿದ್ದಾರೆ ಎಂದು ರಾಜ್ ಕಪೂರ್ ಗೆ ತಿಳಿಯಿತೋ, ಆವಾಗ ಅವರು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಮುಂದೆ ಜೋರಾಗಿ ಅಳಲು ಪ್ರಾರಂಭಿಸಿದ್ದರಂತೆ. ತನ್ನ ನೋವನ್ನು ಸಹಿಸಿಕೊಳ್ಳೋದಕ್ಕಾಗಿ ರಾಜ್ ಕಪೂರ್ ರಾಜ್ ಕಪೂರ್ ತಮಗೆ ತಾವೇ ಸಿಗರೇಟ್ ನಿಂದ ಸುಟ್ಟಿಡುತ್ತಿದ್ದರಂತೆ. ನರ್ಗೀಸ್ ತನಗೆ ಮೋಸ ಮಾಡೋದಕ್ಕೆ ಸಾಧ್ಯಾನೆ ಇಲ್ಲ ಎನ್ನುವ ಹುಚ್ಚು ನಂಬಿಕೆ ರಾಜ್ ಕಪೂರ್ ಅವರದ್ದು, ಹಾಗಾಗಿ ಹಾಗಾಗಿ ತಮಗೆ ತಾವೇ ಸುಡೋ ಮೂಲಕ, ನರ್ಗಿಸ್ ತಮ್ಮಿಂದ ದೂರ ಆಗಿರೋದನ್ನ ಖಚಿತ ಪಡಿಸುತ್ತಿದ್ದರಂತೆ.