ಚಿತ್ರಕ್ಕಾಗಿ ಹಿಂದು ಹೆಸರು ಇಟ್ಟುಕೊಂಡ ಮುಸ್ಲಿಂ ನಟಿಯರು!

First Published | Aug 28, 2020, 5:59 PM IST

ಸಿನಿಮಾಗಾಗಿ ಹಲವರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಚಲನಚಿತ್ರ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಲು ತಮ್ಮ ಹೆಸರನ್ನು ಬದಲಾಯಿಸಿಕೊಂಡ ನಟಿಯರಿದ್ದಾರೆ. ಬಾಲಿವುಡ್‌ನಲ್ಲಿ ಕೆಲವರು ಮುಸ್ಲಿಂ ನಟಿಯರು ಸಿನಿಮಾಕ್ಕಾಗಿ ಹಿಂದು ಹೆಸರನ್ನು ಸಹ ಆಯ್ಕೆ ಮಾಡಿಕೊಂಡಿದ್ದಾರೆ.ಈ ನಟಿಯರ ಫ್ಯಾನ್ಸ್‌  ಸಹ ಅವರನ್ನು ಅದೇ ಹೆಸರಿನಿಂದ ಗುರುತಿಸುತ್ತಾರೆ. ಮಧುಬಾಲರಿಂದ ಹಿಡಿದು ಟಬುವರೆಗೆ ಹಲವು ನಟಿಯರು ತಮ್ಮ ಮೂಲ ಹೆಸರನ್ನು ಬದಲಾಯಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.  
 

ಮಧುಬಾಲಾ -ಬಾಲಿವುಡ್‌ನ ಹಿರಿಯ ನಟಿಯರಲ್ಲಿ ಒಬ್ಬರು ಮಧುಬಾಲಾ. ನಟಿ ನಿಜವಾದ ಹೆಸರು ಮುಮ್ತಾಜ್ ಬೇಗಂ. 50 ಮತ್ತು 60 ರ ದಶಕದ ಫೇಮಸ್‌ ನಟಿ ಮಧುಬಾಲ ತಮ್ಮ ನಟನೆ ಹಾಗೂ ಚೆಲುವಿನ ಮೂಲಕ ಪ್ರೇಕ್ಷಕರ ಮನ ಗೆದ್ದವರು.
undefined
ಬಾಲಿವುಡ್‌ಗಾಗಿ ಹೆಸರನ್ನು ಮಧುಬಾಲಾ ಬದಲಾಯಿಸಿಕೊಂಡಿದ್ದರು. 1947ರ 'ನೀಲ್‌ಕಮಲ್' ಚಿತ್ರದಿಂದ ಹಿಟ್‌ ಆದರು. ಮಧುಬಾಲ ಅಲಿಯಾಸ್ ಮುಮ್ತಾಜ್ ಬೇಗಂ ದೆಹಲಿಯ ಮುಸ್ಲಿಂ ಕುಟುಂಬಕ್ಕೆ ಸೇರಿದವರು
undefined
Tap to resize

ರೀನಾ ರಾಯ್-ರೀನಾ ರಾಯ್ ನಿಜವಾದ ಹೆಸರು ಸೈರಾ ಅಲಿ. 1972 ರಲ್ಲಿ 'ಜರೂರತ್‌' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ.
undefined
ಟಬು -ಬಾಲಿವುಡ್‌ನ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು ಟಬು. ತಬುವಿನ ನೈಜ ಹೆಸರು ತಬ್ಸುಮ್ ಫಾತಿಮಾ ಹಶ್ಮಿ.
undefined
1985ರಲ್ಲಿ ಹಮ್ ನೌಜವಾನ್ ಚಿತ್ರದ ಮೂಲಕ ಪ್ರಮುಖ ನಟಿಯಾಗಿ ತಮ್ಮ ಸಿನಿಮಾ ಜರ್ನಿ ಪ್ರಾರಂಭಿಸಿದರು. ನಂತರ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿ ಟಾಪ್‌ ನಟಿಯರಲ್ಲಿ ತಮ್ಮ ಸ್ಥಾನ ಪಡೆದುಕೊಂಡಿದ್ದರು.
undefined
ಮಾನ್ಯತಾ ದತ್ -ಬಾಲಿವುಡ್ ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ನಿಜವಾದ ಹೆಸರು ದಿಲ್ನಾವಾಜ್ ಶೇಖ್. ಸಿನಿಮಾಕ್ಕಾಗಿ ಮಾನ್ಯತಾ ಹೆಸರು ಬದಲಾಯಿಸಿಕೊಂಡರುವುದು.
undefined
'ಗಂಗಾಜಲ್' ಚಿತ್ರದಲ್ಲಿ ಐಟಂ ನಂಬರ್ ಮೂಲಕ ಬೆಳಕಿಗೆ ಬಂದ ಮಾನ್ಯತಾ ಸಂಜಯ್ ದತ್‌ಮೂರನೇ ಪತ್ನಿ.
undefined

Latest Videos

click me!