ಡೇಟಿಂಗ್ ಮಾಡಿ ಬೋರ್ ಆದಾಗ ಮದ್ವೆಯಾಗ್ತಾರಂತೆ ನಯನ್‌ತಾರಾ-ವಿಘ್ನೇಶ್

First Published | Aug 28, 2020, 3:30 PM IST

ನಟಿ ನಯನ್‌ತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್‌ಶಿಪ್‌ನಲ್ಲಿರೋದು ಎಲ್ಲರಿಗೂ ಗೊತ್ತು. ಆದ್ರೆ ಮದ್ವೆಯಾವಾಗ..? ಇದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ವಿಘ್ನೇಶ್...!

ನಿರ್ದೇಶಕ ವಿಘ್ನೇಶ್ ಮತ್ತು ನಟಿ ನಯನ್‌ತಾರಾ ಮದುವೆಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಕೆರಿಯರ್‌ನಲ್ಲಿ ಬ್ಯುಸಿ ಇರೋ ಸೆಲೆಬ್ರಿಟಿಗಳು ಸದ್ಯ ಮದುವೆಯಾಗೋದು ಡೌಟ್.
ನಯನ್‌ತಾರಾ ವಿಘ್ನೇಶ್ ಅವರನ್ನು ಫಿಯಾನ್ಸಿ ಎಂದು ಹೇಳಿದಾಗ 2020ರಲ್ಲಿ ಇವರ ವಿವಾಹ ನಡೆಯಲಿದೆ ಎಂದು ಎಲ್ಲರೂ ನಿರೀಕ್ಷಿದ್ರು.
Tap to resize

ಆದರೆ ಇತ್ತೀಚೆಗೆ ಸಂದರ್ಶನದಲ್ಲಿ ವಿಘ್ನೇಶ್ ಸದ್ಯ ಮದುವೆ ಇಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.
ಸದ್ಯ ನಮ್ಮ ಗಮನ ನಮ್ಮ ಪ್ರೊಫೆಷನ್ ಮೇಲಿದೆ ಎಂದು ವಿಘ್ನೇಶ್ ಹೇಳಿದ್ದಾರೆ.
ಯಾವಾಗ ಡೇಟಿಂಗ್ ಮಾಡಿ ಬೋರಾಗುತ್ತೋ ಆವಾಗ ಮದ್ವೆಯಾಗ್ತೀವಿ ಎಂದಿದ್ದಾರೆ.
ನಾವು ಮದ್ವೆಯಾಗೋಕೆ ಡಿಸೈಡ್ ಮಾಡಿದಾಗ ನಿಮಗೆಲ್ಲರಿಗೂ ಹೇಳ್ತೀವಿ ಎಂದಿದ್ದಾರೆ ಯುವ ನಿರ್ದೇಶಕ ವಿಘ್ನೇಶ್.
ನಯನ್‌ತಾರಾ ಮತ್ತು ವಿಘ್ನೇಶ್ 2015ರಲ್ಲಿ ನಾನುಂ ರೌಡಿದಾಂ ಸಿನಿಮಾ ಸೆಟ್‌ನಲ್ಲಿ ಭೇಟಿಯಾಗಿದ್ದರು.
ಈ ಸಿನಿಮಾ ನಿರ್ದೇಶಕ ವಿಘ್ನೇಶ್ ಮತ್ತು ಲೀಡ್ ಹಿರೋಯಿನ್ ನಯನ್‌ತಾರಾ. ಅಲ್ಲಿಂದಲೇ ಅವರ ಪ್ರೀತಿ ಆರಂಭವಾಯ್ತು
ನಯನ್‌ತಾರಾ ಕೊನೆಯದಾಗಿ ದರ್ಬಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು.
ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿಯೂ ನಯನ್‌ತಾರಾ ನಟಿಸಿದ್ದರು.

Latest Videos

click me!