ಲೆಜೆಂಡ್‌ಗಳ ಜೊತೆ ಬಪ್ಪಿ ಲಹರಿ: ಡಿಸ್ಕೋ ಕಿಂಗ್‌ ಜೀವನದ ಅಪರೂಪದ ಫೋಟೋಗಳು!

First Published Nov 28, 2022, 11:25 AM IST

ಇಂದು ಅಂದರೆ ನವೆಂಬರ್ 27,  ಡಿಸ್ಕೋ ಕಿಂಗ್ ಬಪ್ಪಿ ಲಹರಿ ( Bappi Lahiri) ಅವರ ಜನ್ಮದಿನವಾಗಿದೆ. ಬಪ್ಪಿ ದಾ ಅವರು  ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅವರ ಸುಮಧುರ ಕಂಠ ಮತ್ತು ಸಾಟಿಯಿಲ್ಲದ ರಾಗಗಳು ಕೇಳುಗರನ್ನು ಮತ್ತು ಪ್ರೇಕ್ಷಕರನ್ನು ಇಂದಿಗೂ ರಂಜಿಸುತ್ತಿವೆ. ಬಪ್ಪಿ ಲಹರಿ ಅವರು 1970-80ರ ದಶಕದ ಅನೇಕ ಚಲನಚಿತ್ರಗಳಲ್ಲಿ ಸಾಕಷ್ಷು  ಜನಪ್ರಿಯ ಹಾಡುಗಳನ್ನು  ಮಾಡಿದರು. ಬಪ್ಪಿ ಲಾಹಿರಿ ಅವರು ತಮ್ಮ ವೃತ್ತಿಜೀವನದಲ್ಲಿ ಅಮಿತಾಬ್ ಬಚ್ಚನ್, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಅವರ ಅನೇಕ ಅನುಭವಿಗಳೊಂದಿಗೆ ಕೆಲಸ ಮಾಡಿದ್ದಾರೆ. ಒಂದಷ್ಟು ಕಾಲ ರಾಜಕೀಯದಲ್ಲೂ ಕೈ ಹಾಕಿದ್ದಾರೆ, ಆದರೆ ಇದರಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಬಪ್ಪಿ ಲಹರಿ ಅವರ ಅಪರೂಪದ ಫೋಟೋಗಳು ಇಲ್ಲಿವೆ.

Image: Getty Images

ಬಪ್ಪಿ ಲಹರಿ ಅವರ ಉತ್ಸಾಹಭರಿತ ಡ್ಯಾನ್ಸ್‌ ನಂಬರ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಹಿರಿಯ ಸಂಗೀತ ಸಂಯೋಜಕ ಬಪ್ಪಿ ಲಾಹಿರಿ ಅವರನ್ನು ಡಿಸ್ಕೋ ಕಿಂಗ್ ಆಫ್ ಇಂಡಿಯಾ ಎಂದೇ ಫೇಮಸ್‌ ಆಗಿದ್ದಾರೆ. 

ನವೆಂಬರ್ 27, 1952 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ ಬಪ್ಪಿ ಅವರ ನಿಜವಾದ ಹೆಸರು ಅಲೋಕೇಶ್ ಲಾಹಿರಿ. ಬಪ್ಪಿ ಡಿಸ್ಕೋ ಮತ್ತು ರಾಕ್ ಸಂಗೀತದೊಂದಿಗೆ ಬಾಲಿವುಡ್ ಉದ್ಯಮದಲ್ಲಿ ಹವಾ ಸೃಷ್ಟಿಸಿದರು

ಗಾಯಕ ಬಪ್ಪಿ ಲಹರಿ  ಅವರು ಸಂಗೀತದ ದಂತಕಥೆಗಳಾದ ಮೊಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರ ಜೊತೆ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರು. ಬಪ್ಪಿ ದಾ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದು ಹೆಚ್ಚು ಲೈಕ್‌ ಪಡೆದಿರುವ ಫೋಟೋಗಳಲ್ಲಿ ಒಂದಾಗಿದೆ.

ಬಪ್ಪಿ ಲಹರಿ ಅವರು ಲತಾ ಮಂಗೇಶ್ಕರ್ ಅವರನ್ನು ಪ್ರೀತಿಯಿಂದ ಮಾ ಎಂದು ಕರೆಯುತ್ತಿದ್ದರು. ಬಪ್ಪಿ ಅವರು ಲತಾ ಜೀ ಅವರ ಜೊತೆಗೆ ಹತ್ತಾರು ಸೂಪರ್‌ಹಿಟ್ ಹಾಡುಗಳನ್ನು ನೀಡಿದ್ದಾರೆ.

ಬಪ್ಪಿ  ಮತ್ತು ಅಮಿತಾಭ್ ಬಚ್ಚನ್ ಉತ್ತಮ ಸ್ನೇಹಿತರಾಗಿದ್ದರು. ನಮಕ್ ಹಲಾಲ್‌ನ ಹಿಟ್ ಹಾಡುಗಳಲ್ಲಿ ಬಪ್ಪಿ ಲಹರಿ  ತಮ್ಮ ಧ್ವನಿಯನ್ನು ನೀಡಿದರು. ಬಪ್ಪಿ ದಾ ಅವರು ತಮ್ಮ ಸಂಗೀತದಿಂದ ಬಿಗ್ ಬಿಯ ಶರಾಬಿಯ ಹಾಡುಗಳನ್ನು ಅಮರಗೊಳಿಸಿದ್ದಾರೆ.

ದಿವಂಗತ ಕಿಶೋರ್ ಕುಮಾರ್ ಅವರೊಂದಿಗೆ ಬಪ್ಪಿ ಲಹರಿ ಕುಳಿತಿರುವುದು ಕಂಡುಬರುತ್ತದೆ. ಕಿಶೋರ್ ಕುಮಾರ್ ತನ್ನ ಮಾವ ಎಂದು ಬಪ್ಪಿ ಯಾವಾಗಲೂ ಹೇಳುತ್ತಿದ್ದರು. ಅದೇ ಸಮಯದಲ್ಲಿ, ಕಿಶೋರ್ ಕುಮಾರ್ ಬಪ್ಪಿ ಲಹರಿಗೆ ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ಸಹಾಯ ಮಾಡಿದರು.

ದಿವಂಗತ ಬಾಲಿವುಡ್ ನಟ ರಾಜ್ ಕುಮಾರ್ ಅವರೊಂದಿಗೆ ಬಪ್ಪಿ ಲಹರಿ , ರಾಜ್‌ಕುಮಾರ್ ಎಲ್ಲರೊಂದಿಗೆ ಹೆಚ್ಚು ಸ್ನೇಹದಿಂದ ಇರದಿದ್ದರೂ, ಬಪ್ಪಿ ದಾ ಅವರೊಂದಿಗಿನ ಅವರ ಸಂಬಂಧವು ತುಂಬಾ ವಿಶೇಷವಾಗಿತ್ತು.

ಅಂಜಾನ್, ಇಂದೀವರ್, ಆಶಾ ಭೋಂಸ್ಲೆ ಮತ್ತು ಕಿಶೋರ್ ಕುಮಾರ್ ಅವರಂತಹ ಸ್ಟಾರ್  ಗಾಯಕರೊಂದಿಗೆ ಬಪ್ಪಿ ಲಾಹಿರಿಯ ಈ ಫೋಟೋವು ಅಪರೂಪದ ಫೋಟೋಗಳಲ್ಲಿ ಒಂದಾಗಿದೆ.

ಸಂಗೀತ ಸಂಯೋಜಕ ಬಪ್ಪಿ ಲಹಿರಿ ಮತ್ತು ಅವರ ಉತ್ತಮ ಸ್ನೇಹಿತ ದಿವಂಗತ ಬಾಲಿವುಡ್ ನಟ ಅಮರೀಶ್ ಪುರಿ ಮುಂಬೈನಲ್ಲಿ ನಡೆದ ಪಾರ್ಟಿಯಲ್ಲಿ ಎಂಜಾಯ್‌ ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ.

PM Modi, Amit Shah offer condolences on demise of singer-composer Bappi Lahiri

ಬಪ್ಪಿ ಲಹರಿ ರಾಜಕೀಯಕ್ಕೆ ಬಂದಾಗ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ ಪ್ರಧಾನಿ ಅವರನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ್ದರು.

ಬಪ್ಪಿ ಲಹರಿ ಅವರು ಪಕ್ಷಕ್ಕೆ ಸೇರಿದಾಗ ರಾಜನಾಥ್ ಸಿಂಗ್ ಅವರನ್ನು ಸ್ವಾಗತಿಸಿದರು. ಈ ಚಿತ್ರವನ್ನು ಜನವರಿ 31, 2014 ರಂದು ಭಾರತದ ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕ್ಲಿಕ್ ಮಾಡಲಾಗಿದೆ.

click me!