ಆಸ್ಪತ್ರೆ ಕಟ್ಟಿಸುತ್ತಿರುವ ಸಾಯಿ ಪಲ್ಲವಿ; ನಟನೆಗೆ ಗುಡ್ ಬೈ ಹೇಳುತ್ತಿರುವುದು ನಿಜವೇ?

First Published | Nov 26, 2022, 3:48 PM IST

ನಟನೆಗೆ ಗುಡ್ ಬೈ ಹೇಳುತ್ತಾರಾ ಸಾಯಿ ಪಲ್ಲವಿ? ವೈರಲ್ ಆಗುತ್ತಿರುವ ಗಾಸಿಪ್‌ಗೆ ಇಲ್ಲಿದೆ ಕ್ಲಾರಿಟಿ....

ಬಹುಭಾಷಾ ನಟಿ ಸಾಯಿ ಪಲ್ಲವಿ ನಟನೆಗೆ ಗುಡ್ ಬೈ ಹೇಳುತ್ತಾರೆ ಅನ್ನೋ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ. ಏನಿದು ಸ್ಟೋರಿ?
 

ಸಾಯಿ ಪಲ್ಲವಿ ಇತ್ತೀಚಿಗೆ ನಟಿಸಿದ ಗಾರ್ಗಿ ಮತ್ತು ವಿರಾಟ ಪರ್ವಂ ಸಿನಿಮಾ ಒಳ್ಳೆ ಕಥೆ ಹೊಂದಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಸೋಲು ಕಂಡಿದೆ. ಎರಡು ಸಿನಿಮಾ ಫ್ಲಾಪ್ ಆಗಿರುವುದಕ್ಕೆ ಕೊಂಚ ಬೇಸರದಲ್ಲಿದ್ದಾರೆ. 

Tap to resize

 ವೈದ್ಯಕೀಯ ಶಿಕ್ಷಣ ಪಡೆದಿರುವ ಪಲ್ಲವಿ ನಟನೆ ಬಿಟ್ಟು ಡಾಕ್ಟರ್ ಆಗಿ ಸೇವೆ ಮುಂದುವರೆಸಬೇಕು ಎಂದು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸೈಲೆಂಟ್ ಅಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 
 

ಹೌದು! ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಪಲ್ಲವಿ ಒಂದು ಆಸ್ಪತ್ರೆ ಕಟ್ಟಿಸುತ್ತಿದ್ದಾರಂತೆ ಅಲ್ಲಿ ವೈದ್ಯೆಯಾಗಿ ಮುಂದಿನ ಜೀವನ ಕಳೆಯಲು ಮುಂದಾಗಿದ್ದಾರೆ.
 

ಈ ಕಾರಣಕ್ಕೆ ಯಾವುದೇ ಗ್ರೀನ್ ಸಗ್ನಲ್ ಕೊಟ್ಟಿಲ್ಲ ರೌಡಿ ಬೇಬಿ ಎನ್ನುವ ಮಾತುಗಳಿದೆ. ಸಾಯಿ ಪಲ್ಲವಿ ಎಲ್ಲಿಯೂ ಸ್ಪಷ್ಟನೆ ಕೊಟ್ಟಿಲ್ಲ.
 

ಫಿದಾ, ಕಲಿ, ಮಾರಿ 2, ಮಲರ್ ಮತ್ತು ಶ್ಯಾಮ್‌ಸಿಂಗ ರಾಯ್‌ ಪಲ್ಲವಿ ಸಿನಿ ಜರ್ನಿಯಲ್ಲಿ ಬ್ರೇಕ್‌ ಕೊಟ್ಟಂತ ಸಿನಿಮಾಗಳು. ಕಡಿಮೆ ಸಿನಿಮಾ ಮಾಡಿದ್ದರೂ ಪರ್ವಾಗಿಲ್ಲ ಕಥೆ ಮುಖ್ಯ ಎನ್ನುತ್ತಾರೆ ಪಲ್ಲವಿ.

ಪಲ್ಲವಿ ಮೂಲತಃ ತಮಿಳುನಾಡಿನವರು ಡ್ಯಾನ್ಸರ್ ಆಗಬೇಕು ಎಂದು ಬಂದು ನಟಿಯಾದವರು. ಮೊದಲ ದಿನ ಕಸ್ತೂರಿ ಮಾನ್‌ನಲ್ಲಿ ಕಾಲೇಜ್‌ ಹುಡುಗಿ ಪಾತ್ರದಲ್ಲಿ ಮಿಂಚಿದ್ದರು.

Latest Videos

click me!