Lakme Fashion Week: ಶೋಸ್ಟಾಪರ್ ಆಗಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ಮಂದಣ್ಣ
First Published | Mar 12, 2023, 3:11 PM ISTಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ (Lakme Fashion Week 2023) ಫ್ಯಾಷನ್ ಮಾಡೆಲ್‌ಗಳ ಜೊತೆಗೆ ಬಾಲಿವುಡ್ ನಟಿಯರೂ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಫ್ಯಾಶನ್ ವೀಕ್‌ನ ಮೂರನೇ ಹಾಗೂ ಕೊನೆ ದಿನ ನಿನ್ನೆ ರಶ್ಮಿಕಾ ಮಂದಣ್ಣ (Rashmika Mandanna), ಅಥಿಯಾ ಶೆಟ್ಟಿ (Athiya Shetty), ತಾಪ್ಸಿ ಪನ್ನು (Taapsee Pannu), ಶನಯಾ ಕಪೂರ್ (Shanaya Kapoor), ಅಂಶುಲಾ ಕಪೂರ್ (Anshula Kapoor) ವಿಭಿನ್ನ ಉಡುಗೆಗಳಲ್ಲಿ ಫ್ಯಾಷನ್ ವೀಕ್‌ನ ರ‍್ಯಾಂಪ್ ಅನ್ನುಅಲಂಕರಿಸಿದ್ದಾರೆ.