ಮಲೈಕಾ ಅರೋರಾ ಜೊತೆ ಬ್ರೇಕಪ್‌: ಅರ್ಜುನ್‌ ಕಪೂರ್‌ ಹೊಗಳಿದ ಡಿವೋರ್ಸಿ ಕುಶಾ ಕಪಿಲ್‌ ಯಾರು?

First Published | Jun 1, 2024, 4:27 PM IST

ಈ ದಿನಗಳಲ್ಲಿ ನಟಿ ಕುಶಾ ಕಪಿಲಾ ಸಖತ್‌ ಸುದ್ದಿಯಲ್ಲಿದ್ದಾರೆ. ಕಶಾ ಮತ್ತು ಅರ್ಜುನ್‌ ಕಪೂರ್‌ ಅವರ ಸಂಬಂಧದಲ್ಲಿರುವ ಬಗ್ಗೆ ಹಲವು ರೂಮರ್‌ಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಇದರ ನಡುವಿನಲ್ಲೇ ಕುಶಾ ಅವರು ಅರ್ಜುನ್‌ ಅವರನ್ನು ಹೊಗಳಿ ಮಾತನಾಡಿರುವ ವಿಡಿಯೋ ಕ್ಲಿಪ್‌ ಸಖತ್‌ ವೈರಲ್‌ ಆಗಿದೆ. 
 

ಮೂಲತಃ ದೆಹಲಿಯವರಾದ ಕುಶಾ ಕಪಿಲಾ ಅವರು ಫ್ಯಾಷನ್ ಸಂಪಾದಕಿ, ಸಾಮಾಜಿಕ ಮಾಧ್ಯಮ ವ್ಯಕ್ತಿತ್ವ (Personality), ಕಾಮಿಡಿಯನ್‌ (Comedian), ನಟಿ ಮತ್ತು ಯೂಟ್ಯೂಬರ್ (Youtuber) ಆಗಿದ್ದಾರೆ.

33 ವರ್ಷದ ಕುಶಾ ಕಪಿಲಾ ಅವರು ಎನ್‌ಐಎಫ್‌ಟಿ ಪದವೀಧರೆ. ಟೈಮ್ಸ್ ಇಂಟರ್ನೆಟ್‌ನಲ್ಲಿ ಫ್ಯಾಷನ್ ಸಂಪಾದಕಿ/ನ್ಯೂಸ್ ಎಡಿಟರ್ ಆಗಿ ಕೆಲಸ ಮಾಡುತ್ತಾರೆ. 

Tap to resize

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬ್ರೇಕಪ್ ವದಂತಿ ಎಲ್ಲೆಡೆ ಹರಡುತ್ತಿದೆ. ಹಲವು ವರದಿಗಳ ಪ್ರಕಾರ ಹಲವು ವರ್ಷಗಳ ನಂತರ ಈ ಜೋಡಿ ಬೇರೆಯಾಗಿವೆ. ಆದರೂ, ಅಂಥದ್ದೇನೂ ಇಲ್ಲ. ಎಲ್ಲವೂ ಕೇವಲ ರೂಮರ್ಸ್ ಎಂದೇ ಮಲೈಕಾ ಮ್ಯಾನೇಜರ್ ಬ್ರೇಕಪ್ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.

ಮಲೈಕಾ ಮತ್ತು ಅರ್ಜುನ್ ಅವರ ಬ್ರೇಕಪ್ ವದಂತಿ ಪ್ರಾರಂಭವಾದಾಗ, ನಟ ಸಾಮಾಜಿಕ ಮಾಧ್ಯಮದ ಪ್ರಭಾವಿ ನಟಿ ಕುಶಾ ಕಪಿಲಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಕಾಡ್ಜಿಚ್ಚಿನಂತೆ ಹರಡುತ್ತಿದೆ. ಆದರೆ ಕುಶಾ ಸಹ ಎಲ್ಲ ವದಂತಿಗಳನ್ನು ನಿರಾಕರಿಸಿದ್ದಾರೆ. 

ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಕುಶಾ ಮತ್ತು ಅರ್ಜುನ್ ಫರಾ ಖಾನ್ ಅವರ ಕಾರ್ಯಕ್ರಮವಾದ ಬ್ಯಾಕ್ ಬೆಂಚರ್ಸ್‌ನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಸಂಚಿಕೆಯಲ್ಲಿ, ತಮ್ಮ ವೃತ್ತಿ ಜೀವನದಲ್ಲಿ ಅರ್ಜುನ್ ತುಂಬಾ ಬೆಂಬಲ ನೀಡಿದ್ದಾರೆ ಎಂದು ಕುಶಾ ಹೇಳಿ ಕೊಂಡಿದ್ದಾರೆ.

ಕುಶಾ ಕಪಿಲಾ ಮತ್ತು ಅರ್ಜುನ್ ಕಪೂರ್ ಕರಣ್ ಜೋಹರ್ ಪಾರ್ಟಿಯಲ್ಲಿ ಕಾಣಿಸಿಕೊಂಡ ನಂತರದಿಂದ ಇವರಿಬ್ಬರ  ಡೇಟಿಂಗ್ (Dating) ವದಂತಿಗಳು ಹರಿದಾಡುತ್ತಿವೆ.  

ಕುಶಾ ತನ್ನ ಪತಿ ಜೋರಾವರ್ ಅಹ್ಲುವಾಲಿಯಾದಿಂದ ಬೇರ್ಪಡುವುದಾಗಿ ಘೋಷಿಸಿದ ಕೆಲವು ದಿನಗಳ ನಂತರ ಅರ್ಜುನ್‌ ಜೊತೆ ಡೇಟಿಂಗ್‌ ಸುದ್ದಿ ಹರಡುತ್ತಿದೆ.
 

Latest Videos

click me!