ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್‌ನ ಉದಯೋನ್ಮುಖ ತಾರೆ ಮತ್ತು ದಿವಾ ಒಂದರ ನಂತರ ಒಂದರಂತೆ ಹಿಟ್‌ಗಳನ್ನು ನೀಡುತ್ತಿದ್ದಾಳೆ.
ಆಕೆ ತನ್ನ ಮಾತುಗಳು, ನಿಲುವುಗಳು, ಚಲನಚಿತ್ರಗಳಿಗೆ ಮಾಡುವ ಹೊಸತರದ ಪ್ರಮೋಶನ್‌ಗಳು, ಬುದ್ಧಿವಂತಿಕೆ ಮುಂತಾದ ಕಾರಣಕ್ಕೆ ದಿನದಿಂದ ದಿನಕ್ಕೆ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾಳೆ.
ತನ್ನ ಫ್ಯಾಶನ್ ಸೆನ್ಸ್ ಹಾಗೂ ಉತ್ತಮಗೊಂಡ ನಟನಾ ಕೌಶಲ್ಯ, ಸಂವಹನ ಕಲೆಯಿಂದಲೂ ಜಾನ್ವಿ ಕಪೂರ್ ಗುರುತಿಸಿಕೊಳ್ಳುತ್ತಿದ್ದಾಳೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಜಾನ್ವಿ ಕಪೂರ್ ಅವರು ತಮ್ಮ ಜಿಮ್‌ಗೆ ಭೇಟಿ ನೀಡದಂತೆ ಶಟರ್‌ಬಗ್‌ಗಳಿಗೆ ವಿನಂತಿಸಿರುವುದಾಗಿ ಹೇಳಿದ್ದಾರೆ.
ಜಾನ್ವಿ ಕಪೂರ್ ಪಾಪರಾಜಿ ತನ್ನ ಜಿಮ್ ಹೊರಗೆ ಬರದಂತೆ ವಿನಂತಿಸಿದ್ದಾಳೆ
ಬಾಲಿವುಡ್‌ನಲ್ಲಿ ಪಾಪರಾಜಿ ಸಂಸ್ಕೃತಿ ಬೃಹತ್ತಾಗಿ ಬೆಳೆದಿದೆ. ಸೆಲೆಬ್ರಿಟಿಗಳು ಪ್ರತಿದಿನ ನಗರ ಮತ್ತು ಸುತ್ತಮುತ್ತ ಎಲ್ಲೇ ಹೋಗಲಿ- ಅವರ ಹಿಂದೆ ಹೋಗಿ ಫೋಟೋ ಕ್ಲಿಕ್ ಮಾಡುತ್ತಾರೆ ಪಾಪಾರಾಜಿಗಳು.
ಅದರಲ್ಲೂ ಜಾನ್ವಿ ಕಪೂರ್‌ಳಂಥ ಖ್ಯಾತ ನಟಿಯರಿಗೆ ಪ್ರೈವೆಸಿ ಎಂಬುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಹೋದಲೆಲ್ಲ ಹಿಂಬಾಲಿಸುತ್ತಾರೆ ಇವರು.
ಇದೀಗ ಜಾನ್ವಿ ಕಪೂರ್ ತಮ್ಮ ಜಿಮ್‌ನ ಹೊರಗೆ ಬರಬೇಡಿ ಮತ್ತು ಬಿಗಿಯಾದ ಬಟ್ಟೆಯಲ್ಲಿ ತನ್ನನ್ನು ಕ್ಲಿಕ್ ಮಾಡಬೇಡಿ ಎಂದು ಪಾಪ್‌ಗಳಿಗೆ ವಿನಂತಿಸಿದ್ದಾರೆ.
'ನನ್ನನ್ನು ಬಿಗಿಯಾದ ಉಡುಪಿನಲ್ಲಿ ಜನ ನೋಡೋದು ನನಗಿಷ್ಟವಿಲ್ಲ. ಆದರೆ, ಜಿಮ್ ಬಳಿ ಇಂಥ ಬಟ್ಟೆಯ ಫೋಟೋ ತೆಗೆದು ಹಾಕಿದಾಗ, ಜನ ನಾನೇ ಇಂಥ ಬಟ್ಟೆಯ ಫೋಟೋದಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ ಎಂದುಕೊಳ್ಳುತ್ತಾರೆ' ಎಂದಿದ್ದಾರೆ ನಟಿ.
ಫೋಟೋ ತೆಗೆಯಲೂ ಕರೆಯುವೆ..
ಹೇಗೆ ಕೆಲವೊಮ್ಮೆ ಫೋಟೋ ಕ್ಲಿಕ್ ಮಾಡಬೇಡಿರೆಂದು ಮನವಿ ಮಾಡುತ್ತೇನೋ ಹಾಗೆಯೇ ಕೆಲವೊಮ್ಮೆ ತನ್ನನ್ನು ಕ್ಲಿಕ್ ಮಾಡಲು ಕರೆಯುವುದಾಗಿಯೂ ನಟಿ ಹೇಳಿದ್ದಾರೆ.
ಚಿತ್ರದ ಪ್ರಚಾರದ ಸಮಯದಲ್ಲಿ ತನ್ನನ್ನು ಕ್ಲಿಕ್ ಮಾಡಲು ಪಾಪರಾಜಿಯನ್ನು ಕರೆಯುತ್ತೇನೆ. ಉಳಿದಂತೆ, ನನಗೆ ಪಾಪಾರಾಜಿಗಳು ಹಿಂದೆ ಬೀಳುವುದು ಇಷ್ಟವಿಲ್ಲ. ಆದರೆ, ಅವರು ತಮ್ಮ ಕಾರ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುತ್ತಾರೆ ಮತ್ತು ಹಿಂದೆ ಬೀಳುತ್ತಾರೆ ಎಂದು ಜಾನ್ವಿ ಹೇಳಿದ್ದಾರೆ.
ಪಾಪಾರಾಜಿಗಳೊಂದಿಗೆ ಯಾವಾಗಲೂ ಚೆನ್ನಾಗಿ ವರ್ತಿಸುತ್ತಿದ್ದರೂ ಸಹ, ಜಾನ್ವಿ ಸೂಕ್ತವಲ್ಲದ ಕೋನಗಳಿಂದ ತನ್ನ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಅವರು ವಿನಂತಿಸಿದ್ದಾರೆ.ಜೊತೆಗೆ, ಜವಾಬ್ದಾರಿಯುತವಾಗಿ ಚಿತ್ರಗಳನ್ನು ಕ್ಲಿಕ್ ಮಾಡುವಂತೆ ಅವರಿಗೆ ಸೂಚಿಸಿದ್ದಾರೆ.