ಪಂಚೆ ಧರಿಸಿ ಬ್ಲೇಜರ್ ತೊಟ್ಟ ಮಿಲ್ಕಿ ಬ್ಯೂಟಿ ತಮನ್ನಾ: ಇದ್ಯಾವ ಸ್ಟೈಲ್ ಅಂತಿದ್ದಾರೆ ನೆಟ್ಟಿಗರು!

First Published | May 31, 2024, 9:10 PM IST

ನಟಿ ತಮನ್ನಾ ಕ್ರೇಜ್ ಕಡಿಮೆ ಆಗಿಲ್ಲ. ಸೂಪರ್ ಫಾರ್ಮ್​ನಲ್ಲಿ ಮುಂದುವರೆದಿರುವ ತಮನ್ನಾ ಭಾಟಿಯಾ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಹಾಟ್ ಬ್ಯೂಟಿ ತಮನ್ನಾ ದಶಕದಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ತಮನ್ನಾ ಅಭಿನಯಿಸುತ್ತಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ  ಅಭಿಮಾನಿಗಳ ಮನಗೆದ್ದಿದ್ದಾರೆ. 

ಟಾಲಿವುಡ್‌ನಲ್ಲಿ ಹಲವು ನಾಯಕಿಯರು ನಟನೆಯ ವಿಷಯದಲ್ಲಿ ಮನ್ನಣೆ ಗಳಿಸಿರಬಹುದು. ಕಳೆದೊಂದು ದಶಕದಲ್ಲಿ ಗ್ಲಾಮರ್ ಮತ್ತು ಡ್ಯಾನ್ಸ್‌ನಲ್ಲಿ ತಮನ್ನಾಗೆ ಯುವಜನತೆಯಲ್ಲಿ ಕ್ರೇಜ್ ನೀಡಿದೆ.

Tap to resize

ಸದ್ಯ  ನಟಿ ತಮನ್ನಾ ಧರಿಸಿದ ಡ್ರೆಸ್ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದು, ಫೋಟೋಗಳು ಸಖತ್ ವೈರಲ್ ಆಗಿವೆ. ಈ ಚಿತ್ರಗಳನ್ನು ನೋಡಿ ಯುವಕರು ಕಂಗಾಲಾಗಿದ್ದು, ನೆಟ್ಟಿಗರು ರೊಮ್ಯಾಂಟಿಕ್ ಕಮೆಂಟ್ಸ್ ಮಾಡುತ್ತಿದ್ದಾರೆ.

ನಟಿ ತಮನ್ನಾ ಅವರು ಸಖತ್ ಆಗಿರುವ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ನೋಡಿದ ನೆಟ್ಟಿಗರು ಪಂಚೆ ಉಟ್ಟಿದ್ದೀರಾ ಎಂದು ಕೇಳಿದ್ದು, ಚಾಕಲೇಟ್ ಧರಿಸಿ ಬಂದ ಹಾಟ್ ಚೆಲುವೆ ಎಂದು ಕಾಮೆಂಟ್ ಮಾಡಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್​ನಲ್ಲಿದ್ದಾರೆ. ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ. ಐಟಂ ಸಾಂಗ್​ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.

ಮುಂಬೈನಲ್ಲಿ ನೆಲೆಸಿರುವ ತಮನ್ನಾ ಬಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಲಸ್ಟ್ ಸ್ಟೋರಿಸ್ 2 ಸೀರಿಸ್ ಮೂಲಕ ಒಟಿಟಿಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ತಮನ್ನಾ ಮೆಗಾಸ್ಟಾರ್ ಚಿರಂಜೀವಿ ಜೊತೆ ತೆಲುಗು ಚಲನಚಿತ್ರ ಭೋಲಾ ಶಂಕರ್​ನಲ್ಲಿ ನಟಿಸಿದ್ರು.
 

ಏತನ್ಮಧ್ಯೆ, ಕಳೆದ ಕೆಲವು ದಿನಗಳಿಂದ ತಮನ್ನಾ ಲವ್ ಮ್ಯಾಟರ್ ಹಾಟ್ ಟಾಪಿಕ್ ಆಗಿತ್ತು. ಈ ಮಿಲ್ಕಿ ಬ್ಯೂಟಿ ನಾನಿ ಅಭಿನಯದ ಎಂಸಿಎ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಹಿಂದಿ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ. 

Latest Videos

click me!