ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತಂಡವು ಆರ್ಯನ್ ಖಾನ್ ಡ್ರಗ್ ಕೇಸ್‌ಗೆ (Drug Case) ಸಂಬಂಧಿಸಿದತೆ ಅಕ್ಟೋಬರ್ 21ರ ಬೆಳಿಗ್ಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಮನೆಯ ಮೇಲೆ ದಾಳಿ ನೆಡೆಸಿತ್ತು ಮತ್ತು ಮಧ್ಯಾಹ್ನ ನಟಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿತ್ತು.
ವರದಿಗಳ ಪ್ರಕಾರ, ಏಜೆನ್ಸಿಯವರು ನಿನ್ನೆ ಅನನ್ಯಾ ಪಾಂಡೆಯನ್ನು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ. ಆರ್ಯನ್ ಖಾನ್ ಜೊತೆಗಿನ ವಾಟ್ಸಾಪ್ ಚಾಟ್‌ಗಳ ಕುರಿತು ಪ್ರಶ್ನಿಸಲಾಯಿತು ಮತ್ತು ಆಕೆ ಆರ್ಯನಿಗೆ ಗಾಂಜಾ ವ್ಯವಸ್ಥೆ ಮಾಡಲು ಒಪ್ಪಿದ್ದರು ಎಂದು ಹೇಳಲಾಗಿದೆ.
ಎನ್‌ಐಸಿ ಮೂಲಗಳು ANIಗೆ ತಿಳಿಸಿದಂತೆ,'ಅನನ್ಯಾ ಪಾಂಡೆಯ ಹೆಸರು ಚಾಟ್‌ನಲ್ಲಿ ಮೂಡಿಬಂದಿದೆ. ಇದರಲ್ಲಿ ನಟಿ ಜನಪ್ರಿಯ ಗೆಟ್ ಟು ಗೆದರ್ ಸೇರಿದಂತೆ ಆರ್ಯನ್‌ಗೆ ಮೂರು ಬಾರಿ ಗಾಂಜಾ ಪೂರೈಸಿದ್ದಾರೆ ಎಂದು ಬಹಿರಂಗಪಡಿಸುತ್ತದೆ' ಎಂದು ಹೇಳಿದರು.
ಆರ್ಯನ್ ಸಹ ಅನನ್ಯಾಳನ್ನು ಗಾಂಜಾ ವ್ಯವಸ್ಥೆ ಮಾಡಲು ಏನಾದರೂ ಉಪಾಯ ಇರಬಹುದಾ ಎಂದು ಕೇಳಿದ್ದನು. ಎನ್‌ಸಿಬಿ ಅನನ್ಯಾಗೆ ಈ ಚಾಟ್ ತೋರಿಸಿದಾಗ, ಅದಕ್ಕೆ ನಟಿ ಜೋಕ್ ಮಾಡುತ್ತಿದ್ದಳು ಎಂದು ಉತ್ತರಿಸಿದಳು ಎಂದು ವರದಿಗಳಲ್ಲಿ ಹೇಳಲಾಗಿದೆ.
ಆದರೆ ಎನ್‌ಸಿಬಿ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಏಕೆಂದರೆ ಅವುಗಳು ಸೂಕ್ಷ್ಮ ಮತ್ತು ಕ್ರೈಮ್ ಆಗಿರುತ್ತದೆ ಮತ್ತು ಸಂವಾದಗಳನ್ನು ತೋರಿಸಿದರೆ, ಅದು ಅವರ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಸಂಸ್ಥೆ ಭಾವಿಸುತ್ತದೆ ಎಂದು ಸಹ ವರದಿಗಳು ಹೇಳಿವೆ.
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅನನ್ಯಾ ಪಾಂಡೆ ಅವರಿಗೆ ಎನ್‌ಸಿಬಿ ಸಮನ್ಸ್ ನೀಡಿತು. ಆಕೆಯ ಎರಡೂ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಅವರು ಕೆಲವು ತಿಂಗಳ ಹಿಂದೆ ಖರೀದಿಸಿದ್ದ ಹಳೆಯ ಹ್ಯಾಂಡ್‌ಸೆಟ್ ಸಹ ಸೇರಿದೆ.
ವರದಿಗಳು ಹೇಳುವಂತೆ ನಿನ್ನೆ ಅಂದರೆ ಅಕ್ಟೋಬರ್ 21 ರಂದು NCB ಅಧಿಕಾರಿಗಳಿಂದ ವಿಚಾರಣೆ ಶುರವಾದಾಗ ಅನನ್ಯಾ ಪಾಂಡೆ ಆಳಲು ಪ್ರಾರಂಭಿಸಿದರಂತೆ. ಅನನ್ಯಾರಿಂದ ಆರ್ಯನ್ ಇನ್ನೂ ಹೆಚ್ಚಿನ ತೊಂದರೆಗೆ ಸಿಲುಕಲಿದ್ದರಾ ಎಂದು ಕಾದು ನೋಡಬೇಕಾಗಿದೆ.