'ನಮ್ಮದು ಹಳದಿಯಲ್ಲ, ಮುಲ್ತಾನಿ ಮಿಟ್ಟಿಯ ಸಮಾರಂಭ' ಫೋಟೋಸ್ ಶೇರ್ ಮಾಡಿದ ಗೂಗ್ಲಿ ನಟಿ ಕೃತಿ ಕರಬಂಧ

Published : Mar 24, 2024, 03:48 PM IST

ಬಾಲಿವುಡ್‌ನ ಮೋಹಕ ಜೋಡಿಗಳಲ್ಲಿ ಒಂದಾಗಿದ್ದ ನಟಿ ಕೃತಿ ಕರಬಂಧ ಹಾಗೂ ಪುಲ್ಕಿತ್ ಸಾಮ್ರಾಟ್ ಮಾ.15ರಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಜೋಡಿಯು ಹಳದಿ ಸಮಾರಂಭದ ಫೋಟೋ ಶೇರ್ ಮಾಡಿದ್ದಾರೆ. ಆದರೆ, ಹಳದಿ ಏಕೋ ಸಗಣಿಯಂತೆ ಕಾಣ್ತಿದೆ!

PREV
18
'ನಮ್ಮದು ಹಳದಿಯಲ್ಲ, ಮುಲ್ತಾನಿ ಮಿಟ್ಟಿಯ ಸಮಾರಂಭ' ಫೋಟೋಸ್ ಶೇರ್ ಮಾಡಿದ ಗೂಗ್ಲಿ ನಟಿ ಕೃತಿ ಕರಬಂಧ

ಬಾಲಿವುಡ್ ನಟನಟಿಯರಾದ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಮಾರ್ಚ್ 15 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಜೋಡಿಯು ಒಂದೊಂದಾಗಿ ತಮ್ಮ ವಿವಾಹ ಪೂರ್ವ ಸಮಾರಂಭದ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

28

ತಮ್ಮ ಮದುವೆಯ ಚಿತ್ರಗಳನ್ನು ಅನಾವರಣಗೊಳಿಸಿದ ನಂತರ, ಅವರು ತಮ್ಮ ಹಳದಿ ಸಮಾರಂಭದ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಹಳದಿಯು ಸಗಣಿಯಂತೆ ಕಾಣ್ತಿದೆ. ಇದಕ್ಕೆ ಜೋಡಿ ಕಾರಣ ನೀಡಿದೆ.

38

'ನಮ್ಮ ಹಳದಿ ಕೊಂಚ ಅಸಂಪ್ರದಾಯಿಕವಾಗಿತ್ತು. ನಾವು ಹಳದಿ ಬದಲಿಗೆ ಮುಲ್ತಾನಿ ಮಿಟ್ಟಿ ಬಳಸಿ ಅದಕ್ಕೇ ಚಿಟಿಕೆ ಹಳದಿ ಬೆರೆಸಿದ್ದೆವು' ಎಂದಿದ್ದಾರೆ.

48

ನಮ್ಮ ಚರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ವಧು ವರರು ಹೆಚ್ಚು ಹೊಳೆಯಬೇಕೆಂದು ಮುಲ್ತಾಮಿ ಮಿಟ್ಟಿ ಸಮಾರಂಭ ಮಾಡಲಾಯಿತು ಎಂದೂ ಹೇಳಿದ್ದಾರೆ. 

58

ಎಥ್ನಿಕ್ ಆರೆಂಜ್ ಉಡುಗೆಯಲ್ಲಿ ಕೃತಿ ಸೊಗಸಾಗಿ ಕಾಣಿಸಿಕೊಂಡರೆ, ಪುಲ್ಕಿತ್ ಹಳದಿ ಕುರ್ತಾ ಧರಿಸಿ ಸಂತೋಷದಿಂದ ತುಂಬಿದ್ದರು. 

68

ಇದಕ್ಕೂ ಮುನ್ನ ದಂಪತಿಯು ತಮ್ಮ ಮೆಹಂದಿ ಸಮಾರಂಭದ ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ಪುಲ್ಕಿತ್ ಕೃತಿಯ ಕೈಗೆ ಮೆಹಂದಿ ಹಚ್ಚುವುದನ್ನು ಕಾಣಬಹುದು. 

78

ಕೃತಿ ಕರಬಂಧ ಕನ್ನಡದ ಗೂಗ್ಲಿ ಚಿತ್ರದ ಜೊತೆಗೆ, ಬಾಲಿವುಡ್‌ನಲ್ಲಿ ಪಾಗಲ್ ಪಂತಿ, ಹೌಸ್‌ಫುಲ್ 4, ರಾಜ್ ರಿಬೂಟ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

88

ಇನ್ನು ಫುಲ್ಕಿತ್, ಫರ್ಕೆ, ಸನಮ್ ರೇ, ಫರ್ಕೆ ರಿಟರ್ನ್ಸ್, ಪಾಗಲ್ ಪಂತಿ ಇತರೆ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಇಬ್ಬರೂ ಪಾಗಲ್ ಪಂತಿಯಲ್ಲಿ ಜೊತೆಯಾಗಿ ನಟಿಸಿದ್ದರು. 

Read more Photos on
click me!

Recommended Stories