ಬ್ಲೇಜರ್‌ ಬಟನ್‌ ತೆಗೆದು ಹಾಟ್‌ ಪೋಸ್ ಕೊಟ್ಟ ಸಮಂತಾ: ನಮಗೆ ಹಳೇ ಕ್ಯೂಟ್ ಸ್ಯಾಮ್ ಬೇಕೆಂದ ಫ್ಯಾನ್ಸ್‌!

Published : Mar 24, 2024, 11:03 AM IST

ಸಮಂತಾ ರುತ್ ಪ್ರಭು ಇತ್ತೀಚೆಗೆ ಸಿನಿಮಾದಿಂದ ಸ್ವಲ್ಪ ಬಿಡುವು ಮಾಡಿಕೊಂಡ ನಂತರ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ನಟಿ ತನ್ನ ವೈಯಕ್ತಿಕ ಮತ್ತು ಪ್ರೊಫೆಷನಲ್ ಲೈಫ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಅಪ್‌ಡೇಟ್ಸ್ ಹಂಚಿಕೊಳ್ಳುತ್ತಲೇ ಇರುತ್ತಾರೆ. 

PREV
17
ಬ್ಲೇಜರ್‌ ಬಟನ್‌ ತೆಗೆದು ಹಾಟ್‌ ಪೋಸ್ ಕೊಟ್ಟ ಸಮಂತಾ: ನಮಗೆ ಹಳೇ ಕ್ಯೂಟ್ ಸ್ಯಾಮ್ ಬೇಕೆಂದ ಫ್ಯಾನ್ಸ್‌!

ಸಮಂತಾ ತಮ್ಮ ಇನ್ಸ್ಟಾದಲ್ಲಿ ಕೆಲವು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ನೋಟದಿಂದ ಪಡ್ಡೆ ಹುಡುಗರ ಹೃದಯಕ್ಕೆ ನೇರವಾಗಿ ಲಗ್ಗೆಯಿಟ್ಟಿದ್ದಾರೆ. ನಟಿಯ ಈ ಲುಕ್ ನೋಡಿ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

27

ಸಮಂತಾ ಸದ್ಯಕ್ಕೆ ಯಾವುದೇ ಸಿನಿಮಾ ಮಾಡ್ತಿಲ್ಲ. ಬ್ರ್ಯಾಂಡ್ ಫೋಟೋಶೂಟ್​ಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಸ್ಟೈಲಿಶ್ ಲುಕ್​ನಲ್ಲಿ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

37

ಸೌತ್‌ ಸುಂದರಿ ಸಮಂತಾ ರುತ್‌ ಪ್ರಭು ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ, ಬ್ಲೇಜರ್‌ ಬಟನ್‌ ತೆಗೆದು ಹಾಟ್‌ ಆಗಿ ಬೋಲ್ಡ್‌ ಫೋಟೋಶೂಟ್‌ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.  

47

ನಟಿ ಸಮಂತಾ ತಮ್ಮ ಬೋಲ್ಡ್‌ ಆಗಿ ಮಿಂಚಿದ ಫೋಟೋಗಳು ವೈರಲ್‌ ಆಗಿದ್ದು, ಸೋಶಿಯಲ್ ಮೀಡಿಯಾವನ್ನೇ ಶೇಕ್ ಮಾಡುವಂತೆ ಇದೆ. ಪೋಸ್ಟ್‌ನ ಕ್ಯಾಪ್ಶನ್‌ನಲ್ಲ್‌ ಈ ನಟಿ 'ಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ. ಇದೀಗ ಡ್ರ್ಯಾಗನ್‌ ನಾನು' ಎಂದು ಬರೆದುಕೊಂಡಿದ್ದಾರೆ.

57

ಸೌತ್‌ ತಾರೆ ಸಮಂತಾ ಬೋಲ್ಡ್‌ ಫೋಟೋಸ್‌ಗೆ  ಪಡ್ಡೆ ಹುಡುಗರು ಫಿದಾ ಆಗಿ ಬ್ಲ್ಯಾಕ್ ಲೇಡಿಯೆಂದು ಕಮೆಂಟ್‌ ಮಾಡಿದರೇ, ಇನ್ನೊಬ್ಬರು ಮಿಸ್ಸಿಂಗ್ ಓಲ್ಡ್ ಸ್ಯಾಮ್, ಹಳೇ ಕ್ಯೂಟ್ ಸಮಂತಾ ನಮಗೆ ಬೇಕು ಎಂದು ಕಮೆಂಟ್ ಹಾಕಿದ್ದಾರೆ. 

67

ಸಮಂತಾ ರುತ್‌ ಕೊನೆಯದಾಗಿ ಕಳೆದ ವರ್ಷ ತೆರೆಕಂಡ ಖುಷಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ಆಗಿದ್ದಾರೆ.

77

ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಕಳೆದ ಕೆಲವು ತಿಂಗಳುಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಈ ಕಾಯಿಲೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಈ ಚೆಲುವೆ ಈಗ ಮತ್ತೆ ಕೆಲಸದತ್ತ ಮರಳಿ ಆ್ಯಕ್ಟಿವ್ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories