ಐಶ್ವರ್ಯ ರೈ ಬೆರಳಲ್ಲಿರೋ ವಿ ಶೇಪ್ ಉಂಗುರದ ಮಹತ್ವ ಗೊತ್ತಾ? ಇದು ಬಂಟ ಸಮುದಾಯದ ಹಿರಿಮೆ

First Published | Jul 28, 2024, 11:20 AM IST

Aishwarya Rai Vanki Ring: ಬಾಲಿವುಡ್ ಬ್ಯೂಟಿ ಕ್ವೀನ್ ಐಶ್ವರ್ಯ ರೈ ಬೆರಳಲ್ಲಿ ಯಾವಾಗ್ಲೂ ವಿ ಶೇಪ್ ಉಂಗುರ ಇರೋದನ್ನ ನೀವು ನೋಡಿರಬಹುದು. ಈ ಉಂಗುರದ ಮಹತ್ವ ಏನು ಗೊತ್ತಾ? ಇದು ಬಂಟ ಸಮುದಾಯದ ಹಿರಿಮೆ. 

ವಿಶ್ವ ಸುಂದರಿ ಐಶ್ವರ್ಯ ರೈ (Aishwarya Rai), ಇವರು ತಮ್ಮ ನಟನೆಯಿಂದ ಎಷ್ಟು ಜನಪ್ರಿಯತೆ ಪಡೆದಿದ್ದಾರೋ, ಅದಕ್ಕಿಂತ ಹೆಚ್ಚು ತಮ್ಮ ಸೌಂದರ್ಯ ಮತ್ತು ಸ್ಟೈಲ್ ನಿಂದ ಕೂಡ ಫೇಮಸ್ ಆಗಿದ್ದಾರೆ. ಐಶ್ ಧರಿಸೋ ಪ್ರತಿಯೊಂದು ಡ್ರೆಸ್, ಆಕ್ಸೆಸರಿ ಕೂಡ ಟ್ರೆಂಡ್ ಸೃಷ್ಟಿಸುತ್ತೆ. ಆದರೆ ಐಶ್ವರ್ಯ ರೈ ಬೆರಳಲ್ಲಿ ಯಾವಾಗ್ಲೂ ಇರುವಂತಹ ವಿ ಶೇಪ್ ಉಂಗುರದ ಬಗ್ಗೆ ನಿಮಗೆ ಗೊತ್ತಾ? 
 

ಐಶ್ವರ್ಯ ರೈ ಕೈಯಲ್ಲಿರುವ ಉಂಗುರ
ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯ ರೈ ಯಾವಾಗ್ಲೂ ತಮ್ಮ ಬಲ ಕೈಯ ಉಂಗುರ ಬೆರಳಿನಲ್ಲಿ  ವಿ ಶೇಪ್ ನ ಉಂಗುರ (V shape ring) ಧರಿಸುತ್ತಾರೆ. ಅದರಲ್ಲಿ ವಜ್ರದ ಹರಳುಗಳು ಮತ್ತು ಕೆಂಪು ಕಲ್ಲುಗಳು ಸಹ ಇವೆ. 

Tap to resize

ಬಂಟ ಸಮುದಾಯದ ಹಿರಿಮೆ
ಐಶ್ವರ್ಯ ಧರಿಸೋ ಈ ಉಂಗುರ ಬಂಟ ಸಮುದಾಯದಲ್ಲಿ (Bunts community) ತುಂಬಾನೆ ಮಹತ್ವವಾದುದು. ಇದನ್ನ ವಂಕಿ ಉಂಗುರ ಅಥವಾ ತುಳುವಿನಲ್ಲಿ ವಡ್ಡುಂಗಿಲ ಅಂತಾನೂ ಹೇಳ್ತಾರೆ. ಇದು ಬಂಟ ಸಮುದಾಯದಲ್ಲಿ ವಿವಾಹಿತ ಮಹಿಳೆಯರ ಸಂಕೇತವಾಗಿದೆ. 

ಮಂಗಳಸೂತ್ರಕ್ಕೆ ಸಮ ಈ ಉಂಗುರ 
ದಕ್ಷಿಣ ಕನ್ನಡ -ಉಡುಪಿಯ ಬಂಟ ಸಮುದಾಯದ ಜನರು ಧರಿಸೋ ಈ ವಂಕಿ ಉಂಗುರ, ಮಂಗಳ ಸೂತ್ರಕ್ಕೆ (Mangal Sutra) ಸಮವಾಗಿದೆ. ಬಂಟ ಮಹಿಳೆಯರು ಮಂಗಳಸೂತ್ರ ಬೇಕಾದರೆ ಧರಿಸದೇ ಇರಬಹುದು, ಆದರೆ ಉಂಗುರ ಖಡ್ಡಾಯವಾಗಿ ಧರಿಸ್ತಾರೆ. 

ವಂಕಿ ಉಂಗುರದ ಧಾರ್ಮಿಕ ಮಹತ್ವ 
ಬಂಟ ಸಮುದಾಯ ಜನರು ಕರಾವಳಿ ಜಿಲ್ಲೆಗಳಲ್ಲಿ ನೆಲೆಸಿರುತ್ತಾರೆ. ಈ ಭಾಗದ ಜನರನ್ನು ನಾಗವಂಶಸ್ಥರು ಅಂತಾನೂ ಕರಿತಾರೆ. ವಂಕಿ ಉಂಗುರ (Vanki ring) ನಾಗ ಉಪಾಸಕರ ಪ್ರತೀಕವಾಗಿದೆ. ಯಾಕಂದ್ರೆ ಈ ಉಂಗುರವು ಹೆಡೆ ಎತ್ತಿ ನಿಂತ ಹಾವಿನ ಸಂಕೇತವಾಗಿದೆ. 

ಕೆಟ್ಟ ದೃಷ್ಟಿ ಬೀಳದಂತೆ ರಕ್ಷಿಸುತ್ತೆ ಈ ಉಂಗುರ
ಬಂಟ ಸಮುದಾಯದ ಮಾನ್ಯತೆಯ ಪ್ರಕಾರ ಈ ವಂಕಿ ಉಂಗುರ ನೋಡೋಕೆ ಸುಂದರವಾಗಿರೋದು ಮಾತ್ರವಲ್ಲ, ಇದು ನವ ವಧುವನ್ನು ಯಾರ ಕೆಟ್ಟ ದೃಷ್ಟಿ, ಯಾವುದೇ ಕೆಟ್ಟ ಶಕ್ತಿ ಬಾಧಿಸದಂತೆ ತಡೆಯುತ್ತದೆ. 

ಇದೀಗ ಟ್ರೆಂಡ್ ಆಗಿದೆ
ಐಶ್ವರ್ಯ ರೈ ಸಂಪ್ರದಾಯದ ಹೆಸರಿನಲ್ಲಿ ಈ ಉಂಗುರ ಧರಿಸಿದ್ರೆ, ಅವರ ಉಂಗುರವನ್ನ ನೋಡಿ ಬೇರೆ ಬೇರೆ ಸ್ಟೈಲ್ ಡಿಸೈನ್ ಗಳಲ್ಲಿ ಆರ್ಟಿಫಿಶಿಯಲ್ ವಂಕಿ ಉಂಗುರ ಇದೀಗ ಲಭ್ಯವಿದೆ. ಒಟ್ಟಲ್ಲಿ ಈ ಉಂಗುರ ಈಗ ಟ್ರೆಂಡ್ ಆಗಿದೆ. 

Latest Videos

click me!