ಸೂರ್ಯಾಸ್ತ ಸಮಯದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಿಸಿದ ದಿಶಾ... ಅದೃಷ್ಟವಂತನ ಹುಡುಕಾಟಕ್ಕೆ ಮುಂದಾದ ಫ್ಯಾನ್ಸ್

First Published | Jul 27, 2024, 7:35 PM IST

ಬಾಲಿವುಡ್ ಹಾಟ್ ನಟಿಯಾಗಿರುವ ದಿಶಾ ಪಟಾಣಿ ಇನ್‌ಸ್ಟಾಗ್ರಾಂ ಮೂರು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ಮಾದಕ ಚೆಲುವೆಯರ ಸಾಲಿನಲ್ಲಿರುವ ದಿಶಾ ಪಟಾಣಿ ಸಿನಿಮಾಗಳ ಜೊತೆಯಲ್ಲಿ ತಮ್ಮ ಹಾಟ್ ಫೋಟೋಗಳಿಂದಲೂ ಸದ್ದು ಮಾಡುತ್ತಿರುತ್ತಾರೆ. ಇಂದು ಫೋಟೋ ಹಂಚಿಕೊಳ್ಳುವ ಮೂಲಕ ತುಂಡೈಕ್ಳ ನಿದ್ದೆಯನ್ನು ಕದ್ದಿದ್ದಾರೆ.

ಕಡಲ ಕಿನಾರೆಯ ಸೂರ್ಯಾಸ್ತ ಸಮಯದಲ್ಲಿ ಟು ಪೀಸ್ ಬಟ್ಟೆ ಧರಿಸಿರುವ ದಿಶಾ ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ್ದಾರೆ. ದಿಶಾ ಪೋಸ್ಟ್‌ಗೆ ಲೈಕ್ ಕೊಡಲು ಫ್ಯಾನ್ಸ್ ಮುನ್ನುಗ್ಗಿ ಬರುತ್ತಿದ್ದಾರೆ.

Tap to resize

ಬಿಕಿನಿಯ ಮೂರು ಫೋಟೋಗಳು ಅಪ್ಲೋಡ್ ಮಾಡಿದ ಜಸ್ಟ್ 1 ಗಂಟೆಯಲ್ಲಿಯೇ ಸಾವಿರಾರು ಕಮೆಂಟ್ ಗಳು ಬಂದಿವೆ. ಫೋಟೋ ನೋಡಿದ ಅಭಿಮಾನಿಗಳು ನಟ ಟೈಗರ್ ಶ್ರಾಫ್‌ಗೆ ಟ್ಯಾಗ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಜೊತೆಯಾಗಿ ಸುತ್ತಾಡುತ್ತಿದ್ದರು. ಕೆಲ ತಿಂಗಳಿನಿಂದ ಇಬ್ಬರು ಬೇರೆಯಾಗಿದ್ದರು. ಸಂದರ್ಶನವೊಂದರಲ್ಲಿ ನಾನು ಸಿಂಗಲ್ ಎಂಬ ಹೇಳಿಕೆಯನ್ನು ಟೈಗರ್ ಶ್ರಾಫ್ ನೀಡಿದ್ದರು.

ಇದೀಗದ ದಿಶಾ ಪಟಾಣಿ ಫೋಟೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ನೀನು ಜೀವನದಲ್ಲಿ ಏನು ಕಳೆದುಕೊಂಡಿದ್ದೀಯಾ ನೋಡು ಎಂದು ಟೈಗರ್ ಶ್ರಾಫ್ ಕಾಲೆಳೆದಿದ್ದಾರೆ. ಕೆಲವರು ಫೋಟೋ ಕ್ಲಿಕ್ಕಿಸಿದ ಆ ಅದೃಷ್ಟವಂತ ಕ್ಯಾಮೆರಾಮ್ಯಾನ್ ಎಂದು ಕೇಳುತ್ತಿದ್ದಾರೆ.

ಅಭೂತಪೂರ್ವ ಯಶಸ್ಸು ಕಂಡಿರುವ ಕಲ್ಕಿ ಸಿನಿಮಾದಲ್ಲಿ ದಿಶಾ ಪಟಾಣಿ ನಟಿಸಿದ್ದಾರೆ. ಕಲ್ಕಿ ಚಿತ್ರದ ಮೂಲಕ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ತಮ್ಮ ಛಾಪು ಮೂಡಿಸಿರುವ ದಿಶಾ ಪಟಾಣಿ, ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ.

ಕೈ ಮೇಲೆ PD ಎಂಬ ಟ್ಯಾಟೂನ್ನು ದಿಶಾ ಪಟಾಣಿ ಹಾಕಿಕೊಂಡಿದ್ದರು. ಈ ಟ್ಯಾಟೂ ದಿಶಾ-ಪ್ರಭಾಸ್ ಎಂದು ಆಗಿರಬಹುದಾ ಎಂಬ ಚರ್ಚೆಗಳು ನಡೆದಿದ್ದವು. ಕೆಲವರು ಪಿಡಿ ಅಂದ್ರೆ ಪಟಾಣಿ ದಿಶಾ ಅಂತಾನೂ ಆಗಿರಬಹುದಲ್ಲಾ ಎಂದಿದ್ದರು.

ದಿಶಾ ಪಟಾನಿ ಗೇಣುದ್ದ ಸೊಂಟದ ಮೇಲೆ ಹಿಬ್ರೂ ಭಾಷೆ 8 ಸಾಲಿನ ಬರಹದ ಫೋಟೋ ವೈರಲ್ ಆಗಿತ್ತು. ಅಭಿಮಾನಿಗಳು ಇದು ಯಾವ ಭಾಷೆ ಎಂದಿದ್ದರು. ಯಾರ ಮನಸ್ಸು, ಎಲ್ಲವೂ, ಪಡೆಯಬಹುದು, ಅವನು ಎಲ್ಲಿದ್ದಾನೆಯೋ, ಅಲ್ಲಿಯೇ ನಂಬಿಕೆಯಿಂದ ನೋಡುತ್ತಾನೆ ಎಂಬುವುದು ಈ ಸಾಲಿನ ಅರ್ಥ ಆಗಿತ್ತು.

Latest Videos

click me!