Richest Family in Bollywood: ಅಂದು ಬೀದಿ ವ್ಯಾಪಾರ ಮಾಡುತ್ತಿದ್ದವರು ಇಂದು ಬಾಲಿವುಡ್ ನ ಶ್ರೀಮಂತ ಕುಟುಂಬ

Published : Jun 10, 2025, 05:52 PM IST

ಒಂದು ಕಾಲದಲ್ಲಿ ಬೀದಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಈ ಕುಟುಂಬವು ಈಗ ಕಪೂರ್‌ಗಳು, ಜೋಹರ್‌ಗಳು, ಖಾನ್‌ಗಳು, ಚೋಪ್ರಾಗಳು ಮತ್ತು ಬಚ್ಚನ್‌ಗಳನ್ನು ಹಿಂದಿಕ್ಕಿ ಬಾಲಿವುಡ್‌ನಲ್ಲಿ ಅತ್ಯಂತ ಶ್ರೀಮಂತ ಕುಟುಂಬವಾಗಿ ಎದ್ದು ನಿಂತಿದೆ.

PREV
15

ಬಾಲಿವುಡ್ ಶ್ರೀಮಂತ ರಾಜವಂಶಗಳಿಗೆ (rich family of bollywood) ನೆಲೆಯಾಗಿದೆ, ಬಚ್ಚನ್, ಚೋಪ್ರಾಗಳು, ಕಪೂರ್‌ಗಳು, ಪಟೌಡಿ, ಜೋಹರ್‌ಗಳು ಮತ್ತು ಖಾನ್‌ಗಳನ್ನು ಅತ್ಯಂತ ಶ್ರೀಮಂತ ಕುಟುಂಬಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಇತ್ತೀಚಿನ ಅಧ್ಯಯನದಲ್ಲಿ ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆ ಮತ್ತು ಮ್ಯೂಸಿಕ್ ಲೇಬಲ್‌ಗಳಾದ ಟಿ-ಸೀರೀಸ್‌ನ ಮಾಲೀಕರಾದ ಭೂಷಣ್ ಕುಮಾರ್ ನೇತೃತ್ವದ ಕುಮಾರ್ ಫ್ಯಾಮಿಲಿಯು ಅವರೆಲ್ಲರನ್ನೂ ಮೀರಿಸುವಂತಹ ಹೆಚ್ಚಿನ ನೆಟ್ ವರ್ತ್ ಹೊಂದಿದೆ ಅನ್ನೋದು ತಿಳಿದು ಬಂದಿದೆ.

25

ಹುರುನ್ ಇಂಡಿಯಾ ರಿಲೀಸ್ ಮಾಡಿರುವ ಶ್ರೀಮಂತರ ಪಟ್ಟಿಯ (richest pepple look) ಪ್ರಕಾರ, ಭೂಷಣ್ ಕುಮಾರ್ ಕುಟುಂಬದ 10000 ಕೋಟಿ ರೂ. ನಿವ್ವಳ ಮೌಲ್ಯದಲ್ಲಿ 80% ರಷ್ಟು ಆಸ್ತಿಯನ್ನು ಹೊಂದಿದ್ದಾರೆ ಮತ್ತು ಉಳಿದ ಸಂಪತ್ತು ಟಿ-ಸೀರೀಸ್‌ನ ಸಹ-ಮಾಲೀಕರಾದ ಭೂಷಣ್ ಅವರ ಚಿಕ್ಕಪ್ಪ ಕ್ರಿಶನ್ ಕುಮಾರ್ ಅವರಿಗೆ ಸಲ್ಲುತ್ತದೆ. ಭೂಷಣ್ ಅವರ ಸಹೋದರಿಯರಾದ ತುಳಸಿ ಮತ್ತು ಖುಶಾಲಿ ಕುಮಾರ್ ಅವರು ಕೂಡ ಟಿ-ಸೀರೀಸ್ ಆಸ್ತಿಯ ಭಾಗವಾಗಿದ್ದಾರೆ, ಅವರ ಮೌಲ್ಯ ಕ್ರಮವಾಗಿ 250 ಕೋಟಿ ಮತ್ತು 100 ಕೋಟಿ ರೂ. ಆಗಿರುತ್ತೆ.

35

ಆರಂಭದಲ್ಲಿ ಭೂಷಣ್, ತುಳಸಿ ಮತ್ತು ಖುಶಾಲಿಯವರ ತಂದೆ ಗುಲ್ಶನ್ ಕುಮಾರ್ (Gulshan Kumar) ದೆಹಲಿಯಲ್ಲಿ ಹಣ್ಣು ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು. ನಂತರ ಗುಲ್ಶನ್ ಹಣ್ಣಿನ ವ್ಯಾಪಾರ ಬಿಟ್ಟು ಸಂಗೀತ ಕ್ಯಾಸೆಟ್‌ಗಳ ವ್ಯವಹಾರವನ್ನು ಪ್ರಾರಂಭಿಸಿದರು. ಇದರ ನಂತರ ಅವರ ಜೀವನವೇ ಬದಲಾಯ್ತು. ಅವರ ಭವಿಷ್ಯ ಬದಲಾಯಿತು, ಮುಂದೆ ಆ ಸಣ್ಣ ಕ್ಯಾಸೆಟ್ ಅಂಗಡಿ ಸೂಪರ್ ಕ್ಯಾಸೆಟ್‌ಗಳ ಉದ್ಯಮಗಳ ಸ್ಥಾಪನೆಗೆ ಕಾರಣವಾಯಿತು ಮತ್ತು ನಂತರ ಅದು ಟಿ-ಸೀರೀಸ್ ಆಗಿ ಮಾರ್ಪಟ್ಟಿತು, ಇಂದು ಟಿ ಸೀರೀಸ್ ಭಾರತೀಯ ಸಂಗೀತ ಮತ್ತು ಚಲನಚಿತ್ರ ನಿರ್ಮಾಣದ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.

45

1997 ರಲ್ಲಿ ಗುಲ್ಶನ್ ಕುಮಾರ್ ಅವರ ಮರಣದ ನಂತರ, ಅವರ ಮಗ ಭೂಷಣ್ ಕುಮಾರ್ (Bhushan Kumar)ಅಧಿಕಾರವನ್ನು ವಹಿಸಿಕೊಂಡರು. ಅವರ ನಾಯಕತ್ವದಲ್ಲಿ, ಟಿ-ಸೀರೀಸ್ ಮಲ್ಟಿಮೀಡಿಯಾ ಸಾಮ್ರಾಜ್ಯವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಇಂದು, ಕಂಪನಿಯು ಸಂಗೀತವನ್ನು ಮೀರಿ ಚಲನಚಿತ್ರ ನಿರ್ಮಾಣ, ವಿತರಣೆ ಮತ್ತು ಇತರ ಬಹು ಅಂಗಸಂಸ್ಥೆಗಳಾಗಿ ವಿಸ್ತರಿಸಿದೆ.

55

ಭೂಷಣ್ ಕುಮಾರ್ ಅವರ ಅಗಾಧ ಸಂಪತ್ತಿನ ನಂತರ, ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್‌ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತೆ, ಇದು 8,000 ಕೋಟಿ ರೂ. ಮೌಲ್ಯದ್ದಾಗಿದೆ. ಶಾರುಖ್ ಖಾನ್ ಕೂಡ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದು, ಅವರ ವೈಯಕ್ತಿಕ ಸಂಪತ್ತು 7,300 ಕೋಟಿ ರೂ.ಗಳ ಅಂದಾಜು ಎನ್ನಲಾಗಿದೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬದ ಮೌಲ್ಯ ETimes ಪ್ರಕಾರ 1600 ಕೋಟಿ ರೂ.ಗಳಾಗಿದ್ದು, ಇತರ ಪ್ರಮುಖ ಬಾಲಿವುಡ್ ಕುಟುಂಬಗಳಿಗೆ ಹೋಲಿಸಿದರೆ ಬಚ್ಚನ್ ಕುಟುಂಬ ಈ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿದೆ.

Read more Photos on
click me!

Recommended Stories