ತಮಿಳಿನ ಖ್ಯಾತ ರೋಮ್ಯಾಂಟಿಕ್ ಹೀರೋ ಮಗಳು ರೇಖಾ! ತಂದೆಯ ಅಂತ್ಯ ಸಂಸ್ಕಾರಕ್ಕೂ ಹೋಗಿಲ್ಲ ಯಾಕೆ!

ಬಾಲಿವುಡ್ ನ ಖ್ಯಾತ ಹಿರಿಯ ನಟಿ ರೇಖಾ ಅವರ ತಂದೆಯ ಬಗ್ಗೆ ಆಸಕ್ತಿಕರ ಮಾಹಿತಿ ಇಲ್ಲಿದೆ. ರೇಖಾ ತಂದೆ ತಮ್ಮ ಕೆಲಸದ ಮೂಲಕ ಖ್ಯಾತಿಯನ್ನು ಗಳಿಸಿದರು ಆದರೆ ಅವರ ವೈಯಕ್ತಿಕ ಜೀವನ, ರೊಮ್ಯಾನ್ಸ್ ಮತ್ತಷ್ಟು ಚರ್ಚೆಯಲ್ಲಿದ್ದ ವಿಷಯವಾಗಿತ್ತು. 
 

Know about Gemini Ganesan father of bollywood diva Rekha pav

ಖ್ಯಾತ ಬಾಲಿವುಡ್ ನಟಿ ರೇಖಾ (Bollywood actress Rekha) ಅವರ ಕುಟುಂಬ ಜೀವನದಂತೆಯೇ, ಅವರ ವೈಯಕ್ತಿಕ ಜೀವನವೂ ಸಾಕಷ್ಟು ವಿವಾದಾತ್ಮಕವಾಗಿತ್ತು. ರೇಖಾ ಕೂಡ ಸಿನಿಮಾ ಕುಟುಂಬದಿಂದ ಬಂದವರು. ಇದು ನಿಜಾ. ರೇಖಾ ಮಾತ್ರಾ ಯಾವಾಗಲೂ ಏಕಾಂಗಿಯಾಗಿಯೇ ಗುರುತಿಸಿಕೊಂಡವರು. ರೇಖಾ ಅವರ ತಂದೆ ಜೆಮಿನಿ ಗಣೇಶನ್ ತಮಿಳು ಚಿತ್ರರಂಗದ ಪ್ರಸಿದ್ಧ ನಟರಾಗಿದ್ದರು ಮತ್ತು ರೇಖಾ ಅವರ ತಾಯಿ ಪುಷ್ಪವಲ್ಲಿ ಕೂಡ ಪ್ರಸಿದ್ಧ ನಟಿಯಾಗಿದ್ದರು.
 

ಪ್ರಣಯದ ರಾಜ ಜೆಮಿನಿ ಗಣೇಶನ್
ರೇಖಾ ಅವರ ತಂದೆ ಜೆಮಿನಿ ಗಣೇಶನ್ (Gemini Ganesan) ಇಂದು ಜೀವಂತವಾಗಿಲ್ಲದಿರಬಹುದು ಆದರೆ ಅವರು ತಮ್ಮ ನಟನೆ ಮತ್ತು ಪ್ರಣಯ ಶೈಲಿಗಾಗಿ ಇನ್ನೂ ಸ್ಮರಣೀಯರು. ನಿಜ ಜೀವನದಲ್ಲೂ ಅವರನ್ನು ದಕ್ಷಿಣದ ಪ್ರಣಯ ರಾಜ ಎಂದು ಕರೆಯಲಾಗುತ್ತಿತ್ತು. ಅವರು ಸಿನಿಮಾ ಜೀವನಕ್ಕಿಂತ ನಿಜ ಜೀವನದಲ್ಲಿ ಹೆಚ್ಚು ರೊಮ್ಯಾನ್ಸ್ ಇತ್ತು ಎನ್ನಬಹುದು. ಯಾಕಂದ್ರೆ ಜೆಮಿನಿ ಗಣೇಶನ್ ಗೆ ಒಬ್ಬರಲ್ಲ, ನಾಲ್ಕು ಮಹಿಳೆಯರೊಂದಿಗೆ ಸಂಬಂಧ ಇತ್ತು.


200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ
ರೇಖಾ ಅವರ ತಂದೆಯ ನಿಜವಾದ ಹೆಸರು ರಾಮಸ್ವಾಮಿ ಗಣೇಶನ್.  ಅವರು ತಮ್ಮ ವೃತ್ತಿಜೀವನದಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಚಲನಚಿತ್ರಗಳು ಸೇರಿವೆ. ತಮಿಳು ಚಿತ್ರರಂಗದಲ್ಲಿ, ಈ ನಟನಿಗೆ 'ಕಾದಲ್ ಮನ್ನನ್' (ಪ್ರಣಯದ ರಾಜ) ಎನ್ನುವ ಹೆಸರು ಕೂಡ ಇದೆ. 

19 ನೇ ವಯಸ್ಸಿನಲ್ಲಿ ಮೊದಲ ಮದುವೆ
ಜೆಮಿನಿ ಗಣೇಶನ್ 1940 ರಲ್ಲಿ 19 ನೇ ವಯಸ್ಸಿನಲ್ಲಿ ಅಲಮೇಲು ಎಂಬವರನ್ನು ವಿವಾಹವಾದರು. ಜೆಮಿನಿಗೆ ಅಲಮೇಲು ಅವರಿಂದ ನಾಲ್ಕು ಹೆಣ್ಣು ಮಕ್ಕಳಿದ್ದರು. ಅಲಮೇಲು ನಂತರ ಜೆಮಿನಿ ಗಣೇಶನ್ ಪುಷ್ಪವಲ್ಲಿ ಜೊತೆ ಸಂಬಂಧದಲ್ಲಿದ್ದರು. ಆದರೆ, ಜೆಮಿನಿ ಎಂದಿಗೂ ಪುಷ್ಪವಲ್ಲಿಯನ್ನು (Pushpavalli) ತನ್ನ ಹೆಂಡತಿಯಾಗಿ ಸ್ವೀಕರಿಸಲಿಲ್ಲ. ಪುಷ್ಪವಲ್ಲಿ ಜೊತೆ ರಿಲೇಶನ್ ಶಿಪ್ ನಲ್ಲಿದ್ದ ಗಣೇಶನ್ ಗೆ ಬಾಲಿವುಡ್ ನಟಿ ರೇಖಾ ಮತ್ತು ರಾಧಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.

ರೇಖಾಳ ತಾಯಿಯನ್ನು ಮದುವೆಯಾಗಲಿಲ್ಲ.
ರೇಖಾ ಜನಿಸುವ ಸಮಯದಲ್ಲಿ, ಅವಳ ಹೆತ್ತವರು ಮದುವೆಯಾಗಿರಲಿಲ್ಲ, ಜೊತೆಗೆ ರೇಖಾಳನ್ನು ತನ್ನ ಮಗಳು ಎಂದು ಒಪ್ಪಿಕೊಳ್ಳಲೂ ಇಲ್ಲ ಗಣೇಶನ್. ಇದಾದ ನಂತರ ಅವರು ಪ್ರಸಿದ್ಧ ನಟಿ ಸಾವಿತ್ರಿ (Actress Savithri) ಅವರನ್ನು ವಿವಾಹವಾದರು ಮತ್ತು ಅವರ ನಾಲ್ಕನೇ ಪತ್ನಿ ಜೂಲಿಯಾನ ಅವರಿಗಿಂತ 36 ವರ್ಷ ಚಿಕ್ಕವರಾಗಿದ್ದರು.

ರೇಖಾ ಜೊತೆ ಸಂಬಂಧ ಉಳಿಸಿಕೊಂಡಿಲ್ಲ
ರೇಖಾ ಹುಟ್ಟಿದಾಗ ಜೆಮಿನಿ ಗಣೇಶನ್ ಪುಷ್ಪವಲ್ಲಿಯನ್ನು ಮದುವೆಯಾಗಿರಲಿಲ್ಲ ಎಂದು ಹೇಳಲಾಗುತ್ತದೆ. ಪುಷ್ಪವಲ್ಲಿ ಕೂಡ ಒಬ್ಬ ನಟಿಯಾಗಿದ್ದು, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ರೇಖಾ ಹೆಸರಿಗೆ ತಂದೆಯ ಹೆಸರು ಸೇರಿಲ್ಲ 
ಸಿನಿಮಾ ಸಮಯದಲ್ಲಿ ಪುಷ್ಪವಲ್ಲಿ ಜೆಮಿನಿಯನ್ನು ಭೇಟಿಯಾಗಿದ್ದರು, ಇಬ್ಬರು ಪ್ರೀತಿಯಲ್ಲಿ ಕೂಡ ಬಿದ್ದರು, ಆದರೆ ಅವರು ಮದುವೆಯಾಗಲು ಸಾಧ್ಯವಾಗಲಿಲ್ಲ.ಹಾಗಾಗಿಯೇ  ರೇಖಾಳನ್ನು ಜೆಮಿನಿ ತನ್ನ ಮಗಳು ಎಂದು ಸ್ವೀಕರಿಸಿಲ್ಲ, ಜೊತೆಗೆ ತನ್ನ ಹೆಸರನ್ನು ನೀಡಿಲ್ಲ. 

ತಂದೆ ಮತ್ತು ರೇಖಾ ನಡುವಿನ ಅಂತರ
ರೇಖಾಗೂ ತನ್ನ ತಂದೆ ಅಂದರೆ ಇಷ್ಟವಿರಲಿಲ್ಲ, ಮಾರ್ಚ್ 22, 2005 ರಂದು ಜೆಮಿನಿ ಗಣೇಶನ್ ಮರಣ ಹೊಂದಿದ ನಂತರ ರೇಖಾ ಅವರ ಅಂತ್ಯಕ್ರಿಯೆಯಲ್ಲಿ ಕೂಡ ಭಾಗವಹಿಸಲಿಲ್ಲ.

Latest Videos

vuukle one pixel image
click me!